ನವದೆಹಲಿ:ಕಾಶಿ ವಿಶ್ವನಾಥ ದೇಗುಲಕ್ಕೆ ಅಂಟಿಕೊಂಡಿರುವ ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಗೆ ವಾರಾಣಸಿ ಜಿಲ್ಲಾ ನ್ಯಾಯಾಲಯ ನೀಡಿದ ಆದೇಶಕ್ಕೆ ಸುಪ್ರೀಂಕೋರ್ಟ್ ಬುಧವಾರ ಸಂಜೆ 5 ಗಂಟೆವರೆಗೆ ತಡೆ ನೀಡಿದ್ದು, ಈ ಅವಧಿ ಮುಕ್ತಾಯಗೊಳ್ಳುವ ಮುನ್ನವೇ ಪ್ರಕರಣವನ್ನು ವಿಚಾರಣೆ ಕೈಗೆತ್ತಿಕೊಳ್ಳಬೇಕು ಎಂದು ಅಲಹಾಬಾದ್ ಹೈಕೋರ್ಟ್​ಗೆ ನಿರ್ದೇಶನ ನೀಡಿದೆ.
ವೈಜ್ಞಾನಿಕ ಸಮೀಕ್ಷೆಗೆ ತಡೆ ನೀಡಬೇಕು ಎಂದು ಕೋರಿ ಜ್ಞಾನವಾಪಿ ಮಸೀದಿ ಸಮಿತಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿ, ವಾರಾಣಸಿ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ತಕ್ಷಣವೇ ತಡೆ ನೀಡಬೇಕು ಎಂದು ಕೋರಿತು. ತರಾತುರಿಯಲ್ಲಿ ಸೋಮವಾರ ಬೆಳಗ್ಗೆ ಪುರಾತತ್ವ ಇಲಾಖೆ ಮೂಲಕ ಸಮೀಕ್ಷೆ ನಡೆಸಲು ಮುಂದಾಗಿದ್ದನ್ನು ಪ್ರಶ್ನಿಸಿದ ಸಮಿತಿ ಪರ ವಕೀಲರು ವಾದಿಸಿ, ಸಮೀಕ್ಷೆ ಹೆಸರಲ್ಲಿ ಮಸೀದಿ ಆವರಣ ಮತ್ತು ರಚನೆಗೆ ಸಮಸ್ಯೆ ಉಂಟು ಮಾಡಲಾಗುತ್ತಿದೆ ಎಂದು ದೂರಿದರು.
ಸಮಿತಿ ವಾದಕ್ಕೆ ವಿರೋಧ ವ್ಯಕ್ತಪಡಿಸಿದ ಭಾರತೀಯ ಪುರಾತತ್ವ ಇಲಾಖೆ ಪರ ವಕೀಲ, ಕೇಂದ್ರ ಸರ್ಕಾರದ ಸಾಲಿಸಿಟರ್ ಜನಲರ್ ತುಷಾರ್ ಮೆಹ್ತಾ, ಮಸೀದಿ ಆವರಣದಲ್ಲಿ ಯಾವುದೇ ಉತ್ಖನನ ನಡೆಸಲಾಗುತ್ತಿಲ್ಲ. ಫೋಟೋಗ್ರಫಿ, ಮಾಪನ, ರೇಡಾರ್ ಇಮೇಜಿಂಗ್​ನಂತಹ ಕೆಲಸವನ್ನಷ್ಟೇ ಮಾಡಲಾಗುತ್ತಿದೆ. ಅಷ್ಟಕ್ಕೂ, ಸಮಿತಿಯವರು ಅಲಹಾಬಾದ್ ಹೈಕೋರ್ಟ್​ಗೆ ಹೋಗಬೇಕಿತ್ತೇ ವಿನಃ ಸುಪ್ರೀಂಕೋರ್ಟ್​ಗೆ ಮನವಿ ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಮಿತಿ ಪರ ವಕೀಲ ಹುಜೇಫಾ ಅಹ್ಮದಿ, ಹಿಂದು ಆರಾಧಕರ ಅರ್ಜಿಗಳ ಸಿಂಧುತ್ವವನ್ನೇ ಪ್ರಶ್ನಿಸಿರುವ ಅರ್ಜಿ ಸುಪ್ರೀಂಕೋರ್ಟ್​ನಲ್ಲಿದ್ದು, ಇನ್ನೂ ಇತ್ಯರ್ಥವಾಗಿಲ್ಲ. ಅದು ಇತ್ಯರ್ಥವಾಗುವ ತನಕ ವೈಜ್ಞಾನಿಕ ಸಮೀಕ್ಷೆಗಳನ್ನೆಲ್ಲಾ ನಡೆಸಲು ಅವಕಾಶ ನೀಡುವಂತಿಲ್ಲ. ಹೀಗಾಗಿಯೇ ನಾವು ಸುಪ್ರೀಂಕೋರ್ಟ್ ಬಾಗಿಲು ತಟ್ಟಿದ್ದೇವೆ ಎಂದು ಹೇಳಿದರು. ಪುರಾತತ್ವ ಇಲಾಖೆ ಯಾವುದೇ ಉತ್ಖನನ ನಡೆಸುವುದಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಭರವಸೆ ನೀಡಿದ್ದರಿಂದ ಸುಪ್ರೀಂಕೋರ್ಟ್ ವಾರಾಣಸಿ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಲು ಹಿಂದೇಟು ಹಾಕಿತು. ಇದರಿಂದ ಅಸಮಾಧಾನಗೊಂಡ ವಕೀಲ ಹುಜೇಫಾ ಅಹ್ಮದಿ, 1949ರಿಂದ ಸಮೀಕ್ಷೆ ನಡೆದಿಲ್ಲ. 1500ನೇ ಈ ಕಟ್ಟಡವನ್ನು ಮಸೀದಿ ಎಂದು ಪರಿಗಣಿಸಲಾಗುತ್ತಿದೆ. ಸ್ವಲ್ಪವೂ ಕಾಯದೇ ತಕ್ಷಣವೇ ಸಮೀಕ್ಷೆ ನಡೆಸಬೇಕೆಂಬ ತರಾತುರಿಯೇಕೆ? 1947ರಿಂದಲೂ ಸಮೀಕ್ಷೆ ನಡೆದಿಲ್ಲ. ಶುಕ್ರವಾರ ವಾರಾಣಸಿ ಜಿಲ್ಲಾ ನ್ಯಾಯಾಲಯ ನೀಡಿದ್ದ ಆದೇಶ ಪ್ರತಿ ಇನ್ನೂ ಕೈಸೇರಿಲ್ಲ. ಮಾಧ್ಯಮದಿಂದಷ್ಟೇ ನನಗೆ ಸಿಕ್ಕಿದೆ. 3 ದಿನಗಳಲ್ಲೇ ಸಮೀಕ್ಷೆ ನಡೆಸಬೇಕೆಂಬ ಅಂಥಾ ತರಾತುರಿ ಏನು ನಿಮಗೆ ಎಂದು ಪುರಾತತ್ವ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು. ಮಸೀದಿ ಸಮೀಕ್ಷೆಗೆ ತಡೆ ನೀಡುವುದು ಅಲಹಾಬಾದ್ ಹೈಕೋರ್ಟ್ ವಿಚಾರಣೆ ಮೇಲೆ ಪರಿಣಾಮ ಬೀರಲಿದೆ ಎಂದು ಮೆಹ್ತಾ ವಾದಿಸಿದರೂ, ಅಹ್ಮದಿ ಬೇಡಿಕೆ ಒಪ್ಪಿದ ಸುಪ್ರೀಂಕೋರ್ಟ್, ಬುಧವಾರ ಸಂಜೆ 5 ಗಂಟೆ ತನಕ ವಾರಾಣಸಿ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುತ್ತೇವೆ. ನೀವು ನಾಳೆಯೇ ಅಲಹಾಬಾದ್ ಹೈಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿತು.
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ರಾಮನವಮಿ ಮೆರವಣಿಗೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ 6 ಎಫ್​ಐಆರ್​ಗಳ ಬಗ್ಗೆ ಎನ್​ಐಎ ತನಿಖೆಗೆ ಆದೇಶಿಸಿರುವ ಕಲ್ಕತ್ತಾ ಹೈಕೋರ್ಟ್​ನ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ರಾಮನವಮಿ ಆಚರಣೆಯ ಸಂದರ್ಭದಲ್ಲಿ ಹೌರಾ ಮತ್ತು ದಲ್ಖೋಲಾ ಜಿಲ್ಲೆ ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ ಹಿಂಸಾಚಾರ ಸಂಭವಿಸಿತ್ತು. ಬಾಂಬ್ ದಾಳಿ ಪ್ರಕರಣವನ್ನು ಸ್ಪೋಟಕ ವಸ್ತುಗಳ ಕಾಯ್ದೆಯಡಿಯಲ್ಲಿ ರಾಜ್ಯ ಪೊಲೀಸರು ದಾಖಲಿಸಿಲ್ಲ ಎಂದು ಆರೋಪಿಸಲಾಗಿದೆ. ಏಪ್ರಿಲ್ 27ರಂದು ಕಲ್ಕತ್ತಾ ಹೈಕೋರ್ಟ್ ಹಿಂಸಾಚಾರದ ಘಟನೆಗಳ ಬಗ್ಗೆ ಎನ್​ಐಎ ತನಿಖೆಗೆ ಆದೇಶಿಸಿತ್ತು. ಈ ಎರಡು ಸ್ಥಳಗಳಲ್ಲಿ ನಡೆದ ಹಿಂಸಾಚಾರದ ಬಗ್ಗೆ ಎನ್​ಐಎ ತನಿಖೆಗೆ ಕೋರಿ ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಹಾಗೂ ಇತರೆ ಮೂವರು ಅರ್ಜಿ ಸಲ್ಲಿಸಿದ್ದರು. ಆದೇಶದ ಪ್ರತಿಯನ್ನು ಸ್ವೀಕರಿಸಿದ ದಿನಾಂಕದಿಂದ 2 ವಾರಗಳಲ್ಲಿ ಎಲ್ಲಾ ಎಫ್​ಐಆರ್​ಗಳು, ದಾಖಲೆ, ವಶಪಡಿಸಿ ಕೊಂಡ ವಸ್ತುಗಳು, ಸಿಸಿಟಿವಿ ದೃಶ್ಯಗಳನ್ನು ಎನ್​ಐಎಗೆ ಹಸ್ತಾಂತರಿಸಲು ಹೈಕೋರ್ಟ್ ಪೊಲೀಸರಿಗೆ ಸೂಚಿಸಿತ್ತು.
ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 1 =
Remember me
