ಮುಂಬೈ:ವಾಣಿಜ್ಯ ನಗರಿ ಮುಂಬೈನಲ್ಲಿರುವ ಮಾಲ್​ ಒಂದರ ಒಳಗಿರುವ ಕೋವಿಡ್​-19 ಆಸ್ಪತ್ರೆಯಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಿಂದ ಇಬ್ಬರು ಮೃತಪಟ್ಟಿದ್ದು, 6 ಮಂದಿ ಅಲ್ಲಿಯೇ ಸಿಲುಕಿರುವ ಘಟನೆ ಗುರುವಾರ ತಡರಾತ್ರಿ ನಡೆದಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಮುಂಬೈನ ಭಂಡಪ್​ನಲ್ಲಿರುವ ಡ್ರೀಮ್ಸ್​ ಮಾಲ್​ನ ಮೂರನೇ ಮಹಡಿಯಲ್ಲಿರುವ ಸನ್​ರೈಸ್​ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಕಟ್ಟಡದ ಒಳಗೆ ಇನ್ನು 6 ಮಂದಿ ಸಿಲುಕಿದ್ದು, ರಕ್ಷಣಾ ಕಾರ್ಯಾ ಭರದಿಂದ ಸಾಗಿದೆ ಎಂದು ಅಗ್ನಿಶಾಮಕ ಅಧಿಕಾರಿ ರಾಜೇಂದ್ರ ಚೌಧರಿ ತಿಳಿಸಿದ್ದಾರೆ.
ಇದನ್ನೂ ಓದಿರಿ:ವೋಟು ಹಾಕುತ್ತೇವೆ, ಆದರೆ ಬದುಕು ಬದಲಾದೀತೇ?; ನೆಮ್ಮದಿ ಕೆಡಿಸಿದ ಲಾಕ್‌ಡೌನ್‌, ಬೀದಿಗೆ ಬಿದ್ದ ಅಸ್ಸಾಂ ದಂಪತಿ ಬದುಕು..
ಘಟನೆ ಬಗ್ಗೆ ಮಾತನಾಡಿರುವ ಮುಂಬೈ ಮೇಯರ್​, ಬೆಂಕಿಗೆ ಖಚಿತ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಇದೇ ಮೊದಲ ಬಾರಿಗೆ ಮಾಲ್​ ಒಳಗೆ ಆಸ್ಪತ್ರೆಯನ್ನು ನೋಡುತ್ತಿದ್ದೇನೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್​ ಮಾಹಿತಿ ನೀಡಿದರು.
ಆಸ್ಪತ್ರೆಗೆ ಒಟ್ಟು 76 ರೋಗಿಗಳು ದಾಖಲಾಗಿದ್ದರು. ಅದರಲ್ಲಿ 73 ಮಂದಿ ಕೋವಿಡ್​ ಸೋಂಕಿತರಾಗಿದ್ದರು. ಎಲ್ಲರನ್ನು ಬೇರೆ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ರಕ್ಷಣಾ ಕಾರ್ಯ ನಡೆಯುತ್ತಿದೆ.(ಏಜೆನ್ಸೀಸ್​)
Maharashtra: Fire breaks out at a hospital in Mumbai's Bhandup; rescue operation on
"Cause of fire is yet to be ascertained. I've seen a hospital at mall for the first time. Action to be taken. 70 patients including COVID infected shifted to another hospital," says Mumbai Mayorpic.twitter.com/sq1K29PVhe
— ANI (@ANI)March 25, 2021

ಕರೊನೋತ್ತರ ಪ್ರಚಾರ ತಂತ್ರ; ಪ್ರಿ-ರಿಲೀಸ್ ಇವೆಂಟ್ ಎಂಬ ಹೊಸ ಮಂತ್ರ

ಮಹಾಮೈತ್ರಿ ಬಲ ಬಿಜೆಪಿಯಲ್ಲಿ ತಳಮಳ?

ಸಲಗದಲ್ಲಿ ಸಿದ್ದಿ ಸಾಂಗ್; ಏ.5ಕ್ಕೆ ಪ್ರಮೋಷನಲ್ ಹಾಡು ಬಿಡುಗಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + twelve =
Remember me
