ನವದೆಹಲಿ:ಎರಡು ದಿನದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಮಹಾಮಾರಿ ಕರೊನಾ ವೈರಸ್​ಗೆ ಬಲಿಯಾಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ಪೊಲೀಸ್​ ಇಲಾಖೆ ಮೃತರಿಗೆ ತೀವ್ರ ಸಂತಾಪ ಸೂಚಿಸಿದೆ.
ಇದನ್ನೂ ಓದಿ:PHOTO GALLERY| ಡಾಕ್ಟರ್​ ಜೋಡಿಯ ಪ್ರೀತಿಗೆ ಕರೊನಾವೇ ಸಾಕ್ಷಿ: ನೀವು ನೋಡಿರದ ಫೋಟೋಶೂಟ್​ ಇದು!
ಸಹಾಯಕ ಸಬ್​ ಇನ್ಸ್​ಪೆಕ್ಟರ್​ಗಳಾದ​ ವಿಕ್ರಮ್​ ಮತ್ತು ಶೇಶ್​ ಮಣಿ ಪಾಂಡೆ ಸಾವಿನಿಂದಾಗಿ ಪೊಲೀಸ್​ ಇಲಾಖೆಯಲ್ಲಿ ಈವರೆಗೂ ಒಟ್ಟು ಮೂವರು ಮೃತಪಟ್ಟಂತಾಗಿದೆ. ಮೂವರಿಗೂ ಪೊಲೀಸ್​ ಇಲಾಖೆಯ ಮುಖ್ಯಸ್ಥ ಎಸ್​.ಎಸ್​. ಶ್ರೀವಾತ್ಸವ್ ಅವರು ಟ್ವಿಟರ್​ನಲ್ಲಿ ಕಂಬನಿ ಮಿಡಿದಿದ್ದಾರೆ.
ಕರೊನಾ ವಿರುದ್ಧದ ಹೋರಾಟದಲ್ಲಿ ಅಸುನೀಗಿದ ಇಬ್ಬರು ದಿಟ್ಟ ಸಿಬ್ಬಂದಿಯ ಸಾವಿಗೆ ದೆಹಲಿ ಪೊಲೀಸ್​ ಕುಟುಂಬ ಸಂತಾಪ ಸೂಚಿಸುತ್ತದೆ. ಅವರನ್ನು ಉಳಿಸಲು ಸಾಕಷ್ಟು ಪ್ರಯತ್ನಿಸಿದಾದರೂ ಸಾಧ್ಯವಾಗಲಿಲ್ಲ. ಎಎಸ್​ಐ ವಿಕ್ರಮ್​ ಮತ್ತು ಶೇಶ್​ ಮಣಿ ಪಾಂಡೆ ಅವರಿಗೆ ನಾವು ಗೌರವ ಸಲ್ಲಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡಲು ನಾವು ಬದ್ಧರಾಗಿದ್ದೇವೆ ಎಂದು ಶ್ರೀವಾತ್ಸವ್​ ಅವರು ಟ್ವೀಟ್​ ಮಾಡಿದ್ದಾರೆ. ಅಲ್ಲದೆ, ದೆಹಲಿ ಪೊಲೀಸ್​ ಇಲಾಖೆಯ ಅಧಿಕೃತ ಟ್ವಿಟರ್​ ಖಾತೆಯಲ್ಲೂ ಸಂತಾಪ ಸೂಚಿಸಲಾಗಿದೆ.
ಇದನ್ನೂ ಓದಿ:ನಿಮ್ಮ ಕಣ್ಣಿಗೊಂದು ಸವಾಲ್​: ಈ ಚಿತ್ರಗಳಲ್ಲಿರುವ ಪ್ರಾಣಿಗಳನ್ನು ಗುರುತಿಸಿದ್ರೆ ನಿಮಗೆ ಫುಲ್​ ಮಾರ್ಕ್ಸ್​!
ವಿಕ್ರಮ್​ ಅವರು ಉಸಿರಾಟ ತೊಂದರೆಯಿಂದಾಗಿ ಮೇ 6ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ 11: 30ರ ಸುಮಾರಿಗೆ ಮೃತಪಟ್ಟಿದ್ದಾರೆ. ಶೇಶ್​ ಮಣಿ ಅವರಿಗೆ ಮೇ 26ರಂದು ಕರೊನಾ ಪಾಸಿಟಿವ್​ ಬಂದಿತ್ತು. ನಿನ್ನೆ (ಶನಿವಾರ) ಸಾವಿಗೀಡಾದರು.
ಇದಕ್ಕೂ ಮುನ್ನ ಅಮಿತ್​ ರಾಣಾ ಹೆಸರಿನ ಕಾನ್​ಸ್ಟೇಬಲ್​ ಒಬ್ಬರು ಜ್ವರ ಮತ್ತು ಉಸಿರಾಟದ ತೊಂದರೆಯಿಂದಾಗಿ ಮೃತಪಟ್ಟಿದ್ದರು.(ಏಜೆನ್ಸೀಸ್​)
ಹುಷಾರಾದ ಬಳಿಕ ಪುತ್ರ ತನ್ನ ತಾಯಿಯನ್ನೇ ನಡುರಸ್ತೆಯಲ್ಲಿ ಬಿಟ್ಟ, ಆದರೂ ದೈವ ಆಕೆಯ ಕೈಬಿಡಲಿಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − nine =
Remember me
