ಮುಂಬೈ:ಅಭಿಮಾನಿಗಳಿಗೆ ನಟ, ನಟಿಯರನ್ನು ಭೇಟಿಯಾಗುವುದು, ಜೆತೆಗೆ ಫೋಟೋ ತೆಗೆದುಕೊಳ್ಳುವುದು ಎಂದರೆ ಸಖತ್​ ಕ್ರೇಜ್​​ ಇರುತ್ತದೆ. ಇಬ್ಬರು ಯುವಕರು ಬಾಲಿವುಡ್ ನಟ ಶಾರುಖ್ ಖಾನ್ ಅವರ ಮುಂಬೈನಲ್ಲಿರುವ ‘ಮನ್ನತ್’ ನಿವಾಸಕ್ಕೆ ಅಕ್ರಮವಾಗಿ ಪ್ರವೇಶಿಸಿ ಪೊಲೀಸರ ಅತಿಥಿಯಾಗಿದ್ದಾರೆ.
ಕಾಂಪೌಂಡ್ ಗೋಡೆ ಏರಿದ 20 ರಿಂದ 22 ವಯೋಮಾನದೊಳಗಿನ ಗುಜರಾತ್ ಮೂಲದ ಈ ಇಬ್ಬರು ಯುವಕರು ಒಳ ಪ್ರವೇಶಿಸಿದ್ದಾರೆ. ಆದರೆ ತಕ್ಷಣವೇ ಇವರನ್ನು ಹಿಡಿದ ಭದ್ರತಾ ಸಿಬ್ಬಂದಿ ಪೊಲೀಸರ ವಶಕ್ಕೆ ನೀಡಿದ್ದಾರೆ.
ಇದನ್ನೂ ಓದಿ:ವೃದ್ಧಾಶ್ರಮದಲ್ಲೊಂದು ಲವ್​ ಸ್ಟೋರಿ! ದಾಂಪತ್ಯ ಜೀವನಕ್ಕೆ ಕಾಲಿಟ್ಟ 75 ವರ್ಷದ ವರ, 70ರ ವಧು!
ವಿಚಾರಣೆ ವೇಳೆ ಈ ಇಬ್ಬರು ಯುವಕರು ತಾವು ಶಾರುಖ್ ಖಾನ್ ಅಭಿಮಾನಿಗಳಾಗಿದ್ದು, ಅವರನ್ನು ನೋಡುವ ಸಲುವಾಗಿಯೇ ಗುಜರಾತಿನಿಂದ ಮುಂಬೈಗೆ ಬಂದಿದ್ದೆವು ಎಂದಿದ್ದಾರೆ. ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಈ ಇಬ್ಬರು ಯುವಕರು ಒಳ ಪ್ರವೇಶಿಸಲು ಏಕೆ ಯತ್ನಿಸಿದ್ದರು ಎಂಬುದು ತನಿಖೆ ಬಳಿಕ ತಿಳಿದು ಬರಲಿದೆ.
200 ಕೋಟಿ ರೂಪಾಯಿ ಬೆಲೆಬಾಳುವ ಶಾರುಖ್ ಅವರ ‘ಮನ್ನತ್’ ನಿವಾಸ, ವಾಣಿಜ್ಯ ನಗರಿ ಮುಂಬೈನ ಬಾಂದ್ರಾ ಬ್ಯಾಂಡ್ ಸ್ಟ್ಯಾಂಡ್ ಬಳಿ ಇದ್ದು, ಕೆಲವೊಮ್ಮೆ ಶಾರುಖ್ ತಮ್ಮ ಬಂಗಲೆಯಿಂದ ಹೊರಬಂದು ಅಭಿಮಾನಿಗಳನ್ನು ಭೇಟಿಯಾಗುತ್ತಾರೆ.
ಆಸ್ತಿ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದ ಶಾರುಖ್ ಪತ್ನಿ; ಗೌರಿ ಖಾನ್ ವಿರುದ್ಧ FIR ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − two =
Remember me
