ಹರಿಯಾಣ:ಕಳೆದ ಸೋಮವಾರ ವಿಶ್ವ ಹಿಂದೂ ಪರಿಷತ್​ ರ್‍ಯಾಲಿ ವೇಲೆ ಸಂಭವಿಸಿದ ಘರ್ಷಣೆಯಿಮದ ತತ್ತರಿಸಿರುವ ಹರಿಯಾಣದ ನೂಹ್​ ಜಿಲ್ಲೆಯಲ್ಲಿ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಇದರ ಪರಿಣಾಮವಾಗಿ 60ಕ್ಕೂ ಹೆಚ್ಚು ಅಂಗಡಿಗಳನ್ನು ನೆಲಸಮ ಮಾಡಲಾಗಿದೆ.
ನೂಹ್​ ಜಿಲ್ಲಾಡಳಿತ ಕೈಗೊಂಡಿರುವ ಕಾರ್ಯಾಚರಣೆಯಲ್ಲಿ 12ಕ್ಕೂ ಹೆಚ್ಚು ಔಷಧಿ ಮಳಿಗೆಗಳನ್ನು ನೆಲಸಮ ಮಾಡಲಾಗಿದೆ. ಗುರುವಾರದಂದು ಆರಂಭವಾದ ಕಾರ್ಯಾಚರಣೆ ಶನಿವಾರವು ಮುಂದುವರೆದಿದೆ.
ಗಲಭೆ ಪೀಡಿತ ನೂಹ್​ ಜಿಲ್ಲೆಯಿಂದ ಸುಮಾರು 20 ಕಿಲೋಮೀಟರ್​ ದೂರದಲ್ಲಿ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ತವಡು ಪ್ರದೇಶದಲ್ಲಿರುವ ಶಹೀನ್​ ಹಸನ್ ಖಾನ್​ ಮೆವಾತಿ ಸರ್ಕಾರಿ ವೈದ್ಯಕೀಯ ಕಾಲೇಜು ಆವರಣದಲ್ಲಿ ಅಂಗಡಿಗಳನ್ನು ಶನಿವಾರ ನೆಲಸಮ ಮಾಡಲಾಯಿತು.
#नूंहमें ये महज ग़रीबों के मकान ही नहीं ढहाए जा रहे बल्कि आम जन के विश्वास, भरोसे को गिराया जा रहा है। ग्रामीणों ने बताया कि आज महीने पुरानी बैक डेट में नोटिस देकर आज ही मकान दुकान गिरा दिये।सरकार प्रशासनिक विफलताओं को छुपाने के लिए गलत कारवाई कर रही है, ये दमनकारी नीति है।pic.twitter.com/U7DOLisTUN
ಇದನ್ನೂ ಓದಿ:ಜೈಲಿಂದ ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ರೌಡಿಶೀಟರ್​ ಹತ್ಯೆ
ಜೆಸಿಬಿ ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ಶಾಸಕ ಅಫ್ತಾಬ್​ ಅಹ್ಮದ್​ ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಜಿಲ್ಲಾಡಳಿತ ಇಲ್ಲಿವರೆಗೂ 60ಕ್ಕೂ ಹೆಚ್ಚು ಅಂಗಡಿ ಹಾಗೂ ಮನೆಗಳನ್ನು ನೆಲಸಮ ಮಾಡಿದೆ. ಇವರು ಬಡವರ ಮನೆಗಳಷ್ಟೇ ಅಲ್ಲ ಅವರ ನಂಬಿಕೆಗಳನ್ನು ಸಹ ಹೊಡೆದು ಹಾಕುತ್ತಿದ್ದಾರೆ.
ಒಂದು ತಿಂಗಳ ಹಿಂದೆ ನೋಟಿಸ್​ ನೀಡಿ ಯಾವುದೇ ಕಾಲಾವಕಾಶ ಕೊಡದೆ ಈಗ ಏಕಾಏಕಿ ಮನೆ ಹಾಗೂ ಅಂಗಡಿಗಳನ್ನು ನೆಲಸಮ ಮಾಡುತ್ತಿದ್ದಾರೆ. ಗಲಭೆಗೆ ಸಂಬಂಧಿಸಿದಂತೆ ಆಡಳಿತ ವೈಫಲ್ಯವನ್ನು ಮರೆಮಾಚಲು ಸರ್ಕಾರ ಈ ರೀತಿ ಮಾಡುತ್ತಿದೆ ಎಂದು ಕಾಂಗ್ರೆಸ್​ ಶಾಸಕ ಅಫ್ತಾಬ್​ ಅಹ್ಮದ್​ ಕಿಡಿಕಾರಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
