ಮಯೂರ್‌ಭಂಜ್:ಕುಡಿದ ಮತ್ತಿನಲ್ಲಿ ಸ್ಮಶಾನದಲ್ಲಿ ಅರ್ಧಂಬರ್ಧ ಸುಟ್ಟ ಮೃತದೇಹವನ್ನು ತಿಂದಿರುವ ಶಾಕಿಂಗ್​​ ಘಟನೆ ಒಡಿಶಾದ ಮಯೂರ್​ಭಂಜ್​ನಲ್ಲಿ ನಡೆದಿದೆ.
ಮೋಹನ್ ಸಿಂಗ್ ಮತ್ತು ನರೇಂದ್ರ ಸಿಂಗ್ ಎನ್ನುವವರೇ ಈ ಕೃತ್ಯವನ್ನು ಎಸಗಿರುವ ವ್ಯಕ್ತಿಗಳಾಗಿದ್ದಾರೆ. ಸ್ಮಶಾನದಲ್ಲಿ 25 ವರ್ಷದ ಮಹಿಳೆಯ ಸುಡುವ ದೇಹದ ಮಾಂಸವನ್ನು ಇಬ್ಬರು ಪುರುಷರು ತಿಂದಿದ್ದಾರೆ. ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ಈ ಭಯಾನಕ ಘಟನೆ ನಡೆದಿದೆ. ಬಾಲಕಿಯ ಮೃತದೇಹ ತಿಂದ ಇಬ್ಬರನ್ನು ಗ್ರಾಮಸ್ಥರು ತುಳಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗ್ರಾಮಸ್ಥರ ದೂರಿನ ಮೇರೆಗೆ ಪೊಲೀಸರು ಆರೋಪಿಗಳಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.ಇದನ್ನೂ ಓದಿ:ಗ್ರಾಹಕರಿಗೆ ತಟ್ಟಲಿದೆ ಹಾಲಿನ ದರ ಏರಿಕೆಯ ಬಿಸಿ? ಸಿಎಂ ಜತೆ ಹಾಲು ಒಕ್ಕೂಟದ ಮಹತ್ವದ ಸಭೆ, ಸಂಜೆ ತೀರ್ಮಾನ ಸಾಧ್ಯತೆಲಾಡಸಾಹಿ ಪೊಲೀಸ್ ಠಾಣೆ ವ್ಯಾಪ್ತಿಯ ಬನ್ಸಾಹಿ ಗ್ರಾಮದ ಮಧುಸ್ಮಿತಾ ಸಿಂಗ್ ಎಂಬ ಯುವತಿ ಅಸ್ವಸ್ಥಗೊಂಡಿದ್ದಳು. ಮಧುಸ್ಮಿತಾಳ ಕುಟುಂಬಸ್ಥರು ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಕುಟುಂಬಸ್ಥರು ಮಧುಸ್ಮಿತಾ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನಡೆಸಿದ್ದಾರೆ.ಚಿತೆಗೆ ಬೆಂಕಿ ಹಚ್ಚಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತಮ್ಮ ಮನೆಗಳಿಗೆ ತೆರಳಿದ್ದಾರೆ. ಆಗ ದಾಂತ್ನಿ ಗ್ರಾಮದ ಸುಂದರ್ ಮೋಹನ್ ಸಿಂಗ್ ಮತ್ತು ನರೇಂದ್ರ ಸಿಂಗ್ ಎಂಬ ಇಬ್ಬರು ವ್ಯಕ್ತಿಗಳು ಸ್ಮಶಾನಕ್ಕೆ ಬಂದಿದ್ದು, ಈ ಇಬ್ಬರು ಸುಟ್ಟ ಯುವತಿಯ ಶವದ ಮಾಂಸವನ್ನು ತಿನ್ನುತ್ತಿದ್ದಾರೆ ಎಂಬ ಮಾಹಿತಿ ಗ್ರಾಮಸ್ಥರಿಗೆ ಹಾಗೂ ಮೃತನ ಕುಟುಂಬಕ್ಕೆ ಲಭಿಸಿದೆ. ಕೂಡಲೇ ಗ್ರಾಮಸ್ಥರು ಸ್ಮಶಾನದ ಬಳಿ ಬಂದು ಇಬ್ಬರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಲಾಡಸಾಹಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಆರೋಪಿಗಳಿಬ್ಬರೂ ಕುಡಿದ ಅಮಲಿನಲ್ಲಿ ಈ ಅಮಾನವೀಯ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೇನ್ಸಿಸ್​​)
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:10 − four =
Remember me
