ಅಂಬಾಲ:ನೋಡಲು ನೇಪಾಳಿಗರಂತೆ ಕಂಡಿದ್ದಕ್ಕೆ ಚಂಡೀಗಢದ ಅಧಿಕಾರಿಗಳು ನಮಗೆ ಪಾಸ್​ಪೋರ್ಟ್​ ನೀಡಲು ನಿರಾಕರಿಸಿದರು ಎಂದು ಹರಿಯಾಣದ ಸಹೋದರಿಯರಿಬ್ಬರು ಆರೋಪಿಸಿದ್ದಾರೆ.
ಚಂಡೀಗಢದ ಪಾಸ್​ಪೋರ್ಟ್​ ಕಚೇರಿಗೆ ತೆರಳಿದಾಗ ಅಧಿಕಾರಿಗಳು ನಮ್ಮ ಮುಖವನ್ನು ದಿಟ್ಟಿಸಿ ನೋಡಿದರು. ಬಳಿಕ ನಮ್ಮನ್ನು ನೇಪಾಳಿಗಳೆಂದು, ರಾಷ್ಟ್ರೀಯತೆ ಸಾಬೀತು ಮಾಡುವಂತೆ ಕೇಳಿದರು. ಈ ವಿಚಾರವನ್ನು ಹರಿಯಾಣದ ಸಚಿವ ಅನಿಲ್​ ವಿಜ್​ ಬಳಿ ತೆಗೆದುಕೊಂಡು ಹೋದ ಬಳಿಕವಷ್ಟೇ ನಮ್ಮ ಪಾಸ್​ಪೋರ್ಟ್​ ಕೆಲಸವನ್ನು ಆರಂಭಿಸಿದರು ಎಂದು ಸಹೋದರಿಯೊಬ್ಬರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅಂಬಾಲದ ಉಪ ಪೊಲೀಸ್​ ಆಯುಕ್ತ ಅಶೋಕ್​ ಶರ್ಮಾ, ಇಬ್ಬರು ಸಹೋದರಿಯರ ದಾಖಲೆಗಳ ಮೇಲೆ ಅರ್ಜಿದಾರರು ನೋಡಲು “ನೇಪಾಳಿಗಳಂತೆ ಕಾಣುತ್ತಾರೆ” ಎಂದು ಬರೆದು ಪಾಸ್​ಪೋರ್ಟ್​ ಅಧಿಕಾರಿಗಳು ಕಳುಹಿಸಿದ್ದರು. ಈ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣ ವಿಚಾರಿಸಿದ್ದು, ಸಮಸ್ಯೆ ಬಗೆಹರಿದಿದೆ. ಆದಷ್ಟು ಬೇಗ ಅವರಿಗೆ ಪಾಸ್​ಪೋರ್ಟ್​ ದೊರೆಯಲಿದೆ. ಅಲ್ಲದೆ, ಪ್ರಕರಣವನ್ನು ತನಿಖೆಗೂ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen + 13 =
Remember me
