ಬೆಂಗಳೂರು: ಕರೊನಾ ಸಂಕಷ್ಟದ ಕಾರಣ ಕಳೆದ ವರ್ಷ ಸಿಗದೇ ಹೋಗಿದ್ದ ವೇತನ ಏರಿಕೆಯೂ ಸೇರಿ ಈ ಬಾರಿ ಎರಡು ವೇತನ ಏರಿಕೆ ಮತ್ತು ಬಡ್ತಿ ಐಟಿ ಕಂಪನಿಗಳ ಉದ್ಯೋಗಿಗಳಿಗೆ ಸಿಕ್ಕಿದೆ. ಶೇಕಡ 6ರಿಂದ 14ರಷ್ಟು ವೇತನ ಹೆಚ್ಚಳ ಸಿಕ್ಕಿದೆ.
ಕರೊನಾ ಸಂಕಷ್ಟ ಇದ್ದಾಗ್ಯೂ ಹಣಕಾಸು ವರ್ಷದ ಎರಡನೇ ಭಾಗದಲ್ಲಿ ವ್ಯಾಪಾರ ವಹಿವಾಟುಗಳು ಹೆಚ್ಚಾದ ಕಾರಣ ಕಳೆದ ವರ್ಷದ ವೇತನ ಹೆಚ್ಚಳದ ಬಾಕಿ, ಬಡ್ತಿಯೂ ಸೇರಿ ಎರಡು ವರ್ಷದ ವೇತನ ಹೆಚ್ಚಳವನ್ನು ಕಂಪನಿಗಳು ಉದ್ಯೋಗಿಗಳಿಗೆ ಘೋಷಿಸಿವೆ.
ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿರುವ ಆಕ್ಸೆಂಚರ್ ಕಂಪನಿಯಲ್ಲಿ ಅದರ ವಾರ್ಷಿಕ ವೇತನ ಹೆಚ್ಚಳ, ಬೋನಸ್, ಬಡ್ತಿಯನ್ನು ಡಿಸೆಂಬರ್​ನಲ್ಲಿ ಘೋಷಿಸಬೇಕಾಗಿತ್ತು. ಹೆಚ್ಚುವರಿ ಬಡ್ತಿ ಫೆಬ್ರವರಿ ತಿಂಗಳಲ್ಲಿ ಘೋಷಿಸಬೇಕಾಗಿತ್ತು. ಈಗ ಇದೆಲ್ಲವನ್ನೂ ಸೇರಿ ಏಪ್ರಿಲ್​ನಲ್ಲಿ ಏಕ ಕಂತಿನ ‘ಥ್ಯಾಂಕ್ ಯೂ ಬೋನಸ್’ (ಒಂದು ವಾರದ ಮೂಲವೇತನ)ಅನ್ನು ಸಂಕಷ್ಟದ ಸನ್ನಿವೇಶದಲ್ಲಿ ಕೆಲಸ ಮಾಡಿದ್ದಕ್ಕಾಗಿ ಘೋಷಿಸಿದೆ.
ಮ್ಯಾನೇಜಿಂಗ್ ಡೈರೆಕ್ಟರ್​ಗಳಿಗೂ ಸೇರಿ ಹೆಚ್ಚುವರಿಯಾಗಿ ವರ್ಷದ ಮಧ್ಯಂತರದಲ್ಲಿ ಬಡ್ತಿಯನ್ನು ನೀಡಲು ಕಂಪನಿ ನಿರ್ಧರಿಸಿದೆ. ಕಳೆದ ಡಿಸೆಂಬರ್​ನಲ್ಲಿ ಜಾಗತಿಕವಾಗಿ 605 ಉದ್ಯೋಗಿಗಳಿಗೆ ಎಂಡಿ ಹುದ್ದೆಗೆ ಬಡ್ತಿ ನೀಡಲಾಗಿತ್ತು.
ಇನ್ಪೋಸಿಸ್​ನಲ್ಲಿ ಎರಡನೇ ವೇತನ ಹೆಚ್ಚಳ ಪರಿಶೀಲನೆ ಪ್ರಗತಿಯಲ್ಲಿದೆ. ಕಳೆದ ವರ್ಷ ತಡೆ ಹಿಡಿದಿದ್ದ ವೇತನ ಹೆಚ್ಚಳವೂ ಸೇರಿ ಈ ವರ್ಷ ಜನವರಿ ತಿಂಗಳಲ್ಲೇ ವೇತನ ಹೆಚ್ಚಳವನ್ನು ಕಂಪನಿ ಘೋಷಿಸಿತ್ತು. ಜುಲೈ ತಿಂಗಳಲ್ಲಿ ಮತ್ತೊಂದು ಸುತ್ತಿನ ವೇತನ ಹೆಚ್ಚಳಕ್ಕೆ ಕಂಪನಿ ತೀರ್ವನಿಸಿದೆ. ಎರಡು ಸುತ್ತಿನ ವೇತನ ಹೆಚ್ಚಳದಲ್ಲಿ ಶೇಕಡ 10-14ರಷ್ಟು ವೇತನ ಹೆಚ್ಚಳವಾಗಲಿದೆ. ಟಿಸಿಎಸ್ ಕೂಡ ಇದೇ ಮಾದರಿಯನ್ನು ಅನುಸರಿಸುತ್ತಿದ್ದು ಉದ್ಯೋಗಿಗಳಿಗೆ ಶೇಕಡ 6-8ರಷ್ಟು ವೇತನ ಹೆಚ್ಚಳವಾಗಲಿದೆ. ಇದು ಸಾಧಾರಣ ಏರಿಕೆ ಪ್ರಮಾಣಕ್ಕಿಂತ ಹೆಚ್ಚಿನದ್ದಾಗಿದೆ. ವಿಪ್ರೋದಲ್ಲೂ ಕಳೆದ ವರ್ಷ ಶೇಕಡ 7ರಿಂದ 8ರಷ್ಟು ವೇತನ ಹೆಚ್ಚಳವಾಗಿದೆ.
ನೌಕರರ ಸುರಕ್ಷತೆಗೆ 10 ದಿನ ರಜೆ
ಕೋವಿಡ್ ಸಂಕಷ್ಟ ಹೆಚ್ಚಾಗಿರುವ ಕಾರಣ ಉದ್ಯೋಗಿಗಳ ಸುರಕ್ಷತೆ ಕಾಪಾಡಲು ನೈಕ್ ಪೂರೈಕೆ ದಾರ ಕಂಪನಿ ಫೆಂಗ್ ಟೇ ಭಾರತದಲ್ಲಿರುವ ತನ್ನ ಫ್ಯಾಕ್ಟರಿಗಳಿಗೆ 10 ದಿನ ರಜೆ ಘೋಷಿಸಿದೆ. ಹೋಂಡಾ ಮೋಟಾರ್, ಸುಜುಕಿ ಮೋಟಾರ್ ಕಂಪನಿ ಕೈಗೊಂಡ ಕ್ರಮವನ್ನೇ ಫೆಂಗ್ ಟೇ ಕೂಡ ತೆಗೆದುಕೊಂಡಿದೆ. ಡೆವಲಪರ್ ಗೋದ್ರೆಜ್ ಪ್ರಾಪರ್ಟೀಸ್ ಲಿಮಿಟೆಡ್ ತನ್ನ ಉದ್ಯೋಗಿಗಳಿಗೆ ಮೂರು ದಿನಗಳ ವಾರಾಂತ್ಯದ ರಜೆ ಘೋಷಿಸಿದೆ. ಲೋಧಾ ಗ್ರೂಪ್ ಕೋವಿಡ್​ಗೆ ಬಲಿಯಾದ ಉದ್ಯೋಗಿಗಳ ಕುಟುಂಬಕ್ಕೆ 12 ತಿಂಗಳ ವೇತನವನ್ನು ಪಾವತಿಸುವುದಾಗಿ ಘೋಷಿಸಿದೆ. ಬೋರೋಸಿಲ್ ಲಿಮಿಟೆಡ್ ಕೋವಿಡ್​ಗೆ ಬಲಿಯಾದ ಉದ್ಯೋಗಿಗಳ ಮಕ್ಕಳ ಪದವಿ ಶಿಕ್ಷಣದ ತನಕ ಹೊಣೆಯನ್ನು ಹೊತ್ತುಕೊಂಡಿದೆ ಮತ್ತು 2 ವರ್ಷದ ವೇತನದ ಪ್ಯಾಕೇಜನ್ನು ಪರಿಹಾರವಾಗಿ ಘೋಷಿಸಿದೆ.
*****************************
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
