ಭೋಪಾಲ್​:ದೈನಂದಿನ ತರಬೇತಿ ಸಮಯದಲ್ಲಿ ಭಾರತೀಯ ವಾಯುಪಡೆಯ ಸುಖೋಯ್​-30 ಮತ್ತು ಮಿರಾಜ್​ 2000 ಹೆಸರಿನ ಎರಡು ಯುದ್ಧ ವಿಮಾನಗಳು ಪತನವಾಗಿರುವ ಘಟನೆ ಶನಿವಾರ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಎರಡೂ ಯುದ್ಧ ವಿಮಾನಗಳು ಗ್ವಾಲಿಯರ್​ ವಾಯುನೆಲೆಯಿಂದ ಟೇಕಾಫ್​ ಆದ ಕೆಲವೇ ಹೊತ್ತಿನಲ್ಲಿ ಬೇರೆ ಬೇರೆ ಸ್ಥಳದಲ್ಲಿ ಪತನಗೊಂಡಿವೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದೆ. ಘಟನೆಯಲ್ಲಿ ಇಬ್ಬರು ಪೈಲಟ್​ಗಳು ಪಾರಾಗಿದ್ದಾರೆ. ಬೆಳಗ್ಗೆ 5.30ಕ್ಕೆ ಘಟನೆ ಸಂಭವಿಸಿದೆ ಎಂದು ಮೊರೆನಾ ಜಿಲ್ಲಾಧಿಕಾತಿ ಮಾಹಿತಿ ನೀಡಿದ್ದು, ಪೈಲಟ್​ಗಳಿಗೆ ಸಣ್ಣಪುಟ್ಟ ಗಾಯಳಾಗಿವೆ.
ಮೊರೆನಾದಲ್ಲಿ ಸ್ಥಳೀಯರು ಚಿತ್ರೀಕರಿಸಿದ ವಿಡಿಯೋಗಳು ನೆಲದ ಮೇಲೆ ವಿಮಾನದ ಅವಶೇಷಗಳು ಬಿದ್ದಿರುವುದನ್ನು ತೋರಿಸಿದೆ. ಎರಡು ಜೆಟ್‌ಗಳು ಗಾಳಿಯಲ್ಲಿ ಪರಸ್ಪರ ಡಿಕ್ಕಿ ಹೊಡೆದಿವೆಯೇ ಎಂಬುದನ್ನು ಅಧ್ಯಯನ ಮಾಡಲು ಏರ್ ಫೋರ್ಸ್ ತನಿಖಾ ತಂಡವನ್ನು ನೇಮಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.(ಏಜೆನ್ಸೀಸ್​)
#WATCH| Wreckage seen. A Sukhoi-30 and Mirage 2000 aircraft crashed near Morena, Madhya Pradesh. Search and rescue operations launched. The two aircraft had taken off from the Gwalior air base where an exercise was going on.pic.twitter.com/xqCJ2autOe
— ANI (@ANI)January 28, 2023

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ 124ನೇ ಜಯಂತಿ: ಕೊಡಗಿನ ವೀರನ ಸ್ಮರಣೆ ಹೊಸ ತಲೆಮಾರಿಗೆ ಇಂದಿಗೂ ಸ್ಫೂರ್ತಿ

ಹುಡುಗಿಯ ಜೊತೆ ಆಟವಾಡಿದ್ದಕ್ಕೆ ನಾಯಿಯನ್ನೇ ಕೊಂದ ಕಾಲೇಜು ವಾರ್ಡನ್​! ಉಡುಪಿಯಲ್ಲಿ ಅಮಾನವೀಯ ಕೃತ್ಯ

ತಾಯಿಯನ್ನು ವಿದೇಶಿ ಪ್ರವಾಸಕ್ಕೆ ಕರೆದೊಯ್ದ ಪುತ್ರ: ಅಮ್ಮನ ಬಗ್ಗೆ ಮಗನಾಡಿದ ಮಾತುಗಳು ಮನಮುಟ್ಟುವಂತಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
