ನವದೆಹಲಿ :ಕರೊನಾ ಎರಡನೇ ಅಲೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ 2 ಲಕ್ಷ ಕೋಟಿ ರೂ.ಗಳ ನಷ್ಟವನ್ನುಂಟು ಮಾಡಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಹೇಳಿದೆ. ಜೂನ್ 2021 ರ ತನ್ನ ಮಾಸಿಕ ಬುಲೆಟಿನ್​​ನಲ್ಲಿ, ಭಾರತದಲ್ಲಿ ನಿರ್ದಿಷ್ಟವಾಗಿ ದೇಶೀಯ ಬೇಡಿಕೆಗೆ ಭಾರೀ ಪೆಟ್ಟು ಬಿದ್ದಿದೆ ಎಂದು ಆರ್‌ಬಿಐ ಹೇಳಿದೆ.
ಕರೊನಾ ವೈರಸ್​ ಮತ್ತು ತತ್ಸಂಬಂಧಿ ನಿರ್ಬಂಧಗಳು ಸಣ್ಣ ನಗರಗಳಿಗೆ ಮತ್ತು ಗ್ರಾಮಗಳಿಗೆ ವಿಸ್ತಾರಗೊಂಡ ಪರಿಣಾಮವಾಗಿ ಗ್ರಾಮೀಣ ಬೇಡಿಕೆ ಕಡಿತಗೊಂಡಿದೆ. ಎಚ್ಚರಿಕೆಯ ಆಶಾವಾದವು ಮರಳುತ್ತಿದ್ದರೂ ಸಹ, ಭಾರತದ ಆರ್ಥಿಕತೆಯು ಸಾಂಕ್ರಾಮಿಕದ ಎರಡನೇ ಅಲೆಯೊಂದಿಗೆ ಸೆಣಸಾಟವನ್ನು ಮುಂದುವರಿಸಿದೆ ಎಂದು ಆರ್‌ಬಿಐ ಹೇಳಿದೆ.
ಇದನ್ನೂ ಓದಿ:ಸರ್ಕಾರಿ ನಿಯಮ ಪಾಲಿಸದೆ ಕಾನೂನು ಸಂರಕ್ಷಣೆ ಕಳೆದುಕೊಂಡ ಟ್ವಿಟರ್!
ದೇಶೀಯ ಬೇಡಿಕೆಗೆ ಏಟು ಬಿದ್ದಿದ್ದರೂ, ಒಟ್ಟಾರೆ ಪೂರೈಕೆಯ ಪರಿಸ್ಥಿತಿಯು ಸಮಾಧಾನಕರವಾಗಿದೆ. ಕೃಷಿ ಮತ್ತು ಸಂಪರ್ಕವಿಲ್ಲದ ಸೇವೆಗಳಂಥ ಹಲವಾರು ಅಂಶಗಳು ಮಾರುಕಟ್ಟೆ ಸ್ಥಿತಿಯನ್ನು ಹಿಡಿದಿಟ್ಟುಕೊಂಡಿವೆ. ಕೋವಿಡ್​ ಪ್ರೋಟೋಕಾಲ್‌ಗಳ ಮಧ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ, ಕೈಗಾರಿಕಾ ಉತ್ಪಾದನೆ ಮತ್ತು ರಫ್ತು ಹೆಚ್ಚಾಗಿದೆ ಎಂದು ಆರ್​ಬಿಐ ಹೇಳಿದೆ.
2019ರ ಎರಡನೇ ಕ್ವಾರ್ಟರ್​ನಿಂದ ಸಾವರಿನ್ ಯೀಲ್ಡ್​ ಕರ್ವ್ ಇಳಿಮುಖವಾಗಿದೆ. ಅಭಿವೃದ್ಧಿಗೆ ಅಗತ್ಯವಾದ ಫಿಸ್ಕಲ್ ಸ್ಟಿಮುಲಸ್​ಅನ್ನು ಎಷ್ಷು ಅನ್ನುವುದಕ್ಕಿಂತ ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗಿದೆ ಎಂದಿರುವ ಆರ್​ಬಿಐ, “ಲಸಿಕಾಕರಣದ ವೇಗ ಮತ್ತು ಪ್ರಮಾಣವು ಆರ್ಥಿಕ ವ್ಯವಸ್ಥೆ ಚೇತರಿಸಿಕೊಳ್ಳಲು ನಿರ್ಣಾಯಕವಾಗುವುದು. ಕರೊನಾ ಸಂಕಷ್ಟದಿಂದ ಹೊರಕ್ಕೆ ಚಿಮ್ಮಿ ಮತ್ತೆ ಅಭಿವೃದ್ಧಿ ಪಥದತ್ತ ನಡೆಯುವ ಉತ್ಸಾಹವನ್ನು ಆರ್ಥಿಕ ವ್ಯವಸ್ಥೆ ತೋರುತ್ತಿದೆ” ಎಂದಿದೆ.(ಏಜೆನ್ಸೀಸ್)
ಆರ್​ಟಿಇ ಸೀಟು ಹಂಚಿಕೆ : ಜೂನ್ 22 ಕ್ಕೆ ಮೊದಲ ಲಾಟರಿ ಫಲಿತಾಂಶ

VIDEO | ಕ್ರಿಕೆಟಿಗ ಯಜ್ವೇಂದ್ರ ಚಹಲ್​ ಡ್ಯಾನ್ಸ್​ ಸ್ಟೆಪ್ಸ್​ ನೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + thirteen =
Remember me
