ರಾಘವ ಶರ್ಮ ನಿಡ್ಲೆನವದೆಹಲಿ: ಕರೊನಾ ವೈರಸ್ ಹರಡುವಿಕೆ ಪರಿಣಾಮ ವಿವಿಧ ದೇಶಗಳಲ್ಲಿ ಸಿಲುಕಿ, ಕಳೆದ 45 ದಿನಗಳಿಂದ ಆತಂಕದಲ್ಲೇ ದಿನ ಕಳೆಯುತ್ತಿರುವ ಲಕ್ಷಾಂತರ ಭಾರತೀಯರನ್ನು ವಾಪಸ್ ಕರೆಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬೃಹತ್ ಯೋಜನೆ ರೂಪಿಸಿದೆ. ಮೊದಲ ಹಂತದಲ್ಲಿ ಅಂದಾಜು 14,800 ಭಾರತೀಯರು ಸ್ವದೇಶಕ್ಕೆ ಮರಳಲಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಭಾರತೀಯರನ್ನು ಸ್ವದೇಶಕ್ಕೆ ಕರೆ ತರುತ್ತಿರುವುದು ಇದೇ ಮೊದಲ ಬಾರಿ ಎನ್ನಲಾಗಿದೆ. ವಿದೇಶಗಳಿಂದ 10 ಲಕ್ಷಕ್ಕಿಂತಲೂ ಹೆಚ್ಚು ಭಾರತೀಯರು ಸ್ವದೇಶಕ್ಕೆ ಬರುವ ಉದ್ದೇಶ ಹೊಂದಿದ್ದಾರೆ. ಆದ್ಯತೆಯ ಮೇರೆಗೆ ಆರಂಭದಲ್ಲಿ 2 ಲಕ್ಷ ಮಂದಿಯನ್ನು ಕರೆಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಕೊಲ್ಲಿ ರಾಷ್ಟ್ರಗಳಲ್ಲೇ ಹೆಚ್ಚು ಭಾರತೀಯರಿದ್ದು, ಅರ್ಧಕ್ಕರ್ಧ ವಿಮಾನಗಳು ಈ ದೇಶಗಳಿಗೆ ತೆರಳುತ್ತಿವೆ.
ಮೇ. 7ರಿಂದ ಆರಂಭಗೊಂಡು ಹಡಗು ಮತ್ತು ವಿಮಾನ ಸೇವೆಗಳ ಮೂಲಕ ಭಾರತೀಯರು ಹಂತ ಹಂತವಾಗಿ ಬಂದಿಳಿಯಲಿ ದ್ದಾರೆ. ಕರೊನಾ ಲಾಕ್​ಡೌನ್ ಘೊಷಣೆಯಾದಲ್ಲಿಂದ ವಿದೇಶದಲ್ಲಿರುವ ಭಾರತೀಯರು ತಮ್ಮನ್ನು ಸ್ವದೇಶಕ್ಕೆ ಕರೆಸಿಕೊಳ್ಳಲು ಯೋಜನೆ ರೂಪಿಸಿ ಎಂದು ವಿದೇಶಾಂಗ ಇಲಾಖೆ, ಪ್ರಧಾನಿ ಕಾರ್ಯಾಲಯ, ಗೃಹ ಸಚಿವಾಲಯ ಹಾಗೂ ವಿವಿಧ ರಾಜ್ಯ ಸರ್ಕಾರಗಳಿಗೆ ಮನವಿ ಮಾಡುತ್ತಲೇ ಇದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ನಿರಂತರ ಅಭಿಯಾನಗಳು ನಡೆಯುತ್ತಲೇ ಇತ್ತು. ಲಾಕ್​ಡೌನ್ ಘೊಷಣೆಗೆ ಮುನ್ನವೇ ಭಾರತ ವಿದೇಶದಿಂದ ಬರುವ ವಿಮಾನಗಳಿಗೆ ನಿಷೇಧ ಹೇರಿತ್ತು. ಈ ಹಿನ್ನೆಲೆಯಲ್ಲಿ ಸಾವಿರಾರು ಭಾರತೀಯರಿಗೆ ಸ್ವದೇಶ ಸೇರಿಕೊಳ್ಳಲು ಸಾಧ್ಯವಾಗಿರಲಿಲ್ಲ. ದೇಶದ ವಿವಿಧ ನಗರಗಳಲ್ಲಿದ್ದ ವಲಸೆ ಕಾರ್ವಿುಕರನ್ನು ಅವರ ಊರುಗಳಿಗೆ ತಲುಪಿಸಿದ ಬಳಿಕ ವಿದೇಶದಲ್ಲಿರುವ ಭಾರತೀಯರನ್ನು ಕರೆಸಿಕೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರ ಬೆಂಗಳೂರು, ದೆಹಲಿ, ಲಖನೌ, ಅಹಮದಾಬಾದ್, ಹೈದರಾಬಾದ್, ಚೆನ್ನೈ, ಕೊಚ್ಚಿ ಸೇರಿದಂತೆ ವಿವಿಧ ರಾಜ್ಯಗಳ ಮಹಾನಗರಗಳಿಗೆ ಭಾರತೀಯರನ್ನು ವಿಮಾನದ ಮೂಲಕ ತಲುಪಿಸಲಿದೆ. ಅಲ್ಲಿಂದ ಸ್ಥಳೀಯ ಸರ್ಕಾರಗಳು ಈ ಪ್ರಯಾಣಿಕರನ್ನು ಸಂಬಂಧಪಟ್ಟ ಊರು, ಪಟ್ಟಣಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಿದೆ. 1990ರ ಕೊಲ್ಲಿ ಯುದ್ಧದ ಸಂದರ್ಭದಲ್ಲಿ ಸುಮಾರು 1,70,000 ಭಾರತೀಯರನ್ನು ಸ್ವದೇಶಕ್ಕೆ ಕರೆಸಿಕೊಳ್ಳುವ ಅತಿ ದೊಡ್ಡ ಯೋಜನೆ ರೂಪಿಸಲಾಗಿತ್ತು. 2015ರಲ್ಲಿ ಯುದ್ಧಪೀಡಿತ ಯಮೆನ್ ನಲ್ಲಿ ಸಿಲುಕಿದ್ದ ಭಾರತೀಯರನ್ನು ರಕ್ಷಿಸಿ ಕರೆ ತರಲಾಗಿತ್ತು. ಈಗ ಕರೊನಾ ವೈರಸ್ ಸೃಷ್ಟಿಸಿರುವ ಆರೋಗ್ಯ ಎಮರ್ಜೆನ್ಸಿಯಿಂದ ಪಾರು ಮಾಡಲು, ಆಯಾ ದೇಶಗಳೊಂದಿಗೆ ಮಾತುಕತೆ ನಡೆಸಿ, ಭಾರತೀಯರನ್ನು ಸ್ವದೇಶಕ್ಕೆ ಕರೆಸಿಕೊಳ್ಳಲು ಕೇಂದ್ರ ಮುಂದಾಗಿದೆ.
ಇದನ್ನೂ ಓದಿ:ಇದು ಸಸ್ಪೆನ್ಸ್​: ತುರಿದ ಚೀಸ್​ ಬಳಸಿ ಆ ವಿದ್ಯಾರ್ಥನಿಯರು ಹಲ್ಲೆ ನಡೆಸಿದ್ದು ಹೇಗೆ?!!!
ವಿದ್ಯಾರ್ಥಿಗಳಿಗೆ ರಿಲೀಫ್: ಅಮೆರಿಕ, ಬ್ರಿಟನ್, ಫ್ರಾನ್ಸ್, ರಷ್ಯಾ ಸೇರಿ ವಿದೇಶಗಳಿಗೆ ವಿದ್ಯಾಭ್ಯಾಸಕ್ಕಾಗಿ ತೆರಳಿರುವ ವಿದ್ಯಾರ್ಥಿಗಳಿಗೆ ಆ ದೇಶಗಳಲ್ಲಿ ಕರೊನಾ ವೈರಾಣು ಸಂಖ್ಯೆ ದುಪ್ಪಟ್ಟುಗೊಂಡಿರುವುದು ಆತಂಕಕ್ಕೀಡು ಮಾಡಿತ್ತು. ಲಾಕ್​ಡೌನ್ ಹಿನ್ನೆಲೆಯಲ್ಲಿ ಕಾಲೇಜುಗಳು ಆನ್​ಲೈನ್ ಗೆ ಸೀಮಿತವಾಗಿತ್ತು ಮತ್ತು ಪರೀಕ್ಷೆಗಳನ್ನೂ ಮುಂದೂಡಲಾಗಿದೆ. ಏತನ್ಮಧ್ಯೆ, ಈ ವಿದ್ಯಾರ್ಥಿಗಳ ಹೆತ್ತವರೂ ತಮ್ಮ ಮಕ್ಕಳು ಸ್ವದೇಶಕ್ಕೆ ಬಂದು ತಮ್ಮನ್ನು ಸೇರಿಕೊಳ್ಳಬೇಕು ಎಂದೇ ಬಯಸಿದ್ದರು. ಈ ನಿಟ್ಟಿನಲ್ಲಿ ಹೆತ್ತವರಿಂದಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಕೆಯಾಗಿತ್ತು. ಕೆಲವು ದೇಶಗಳಲ್ಲಂತೂ ಸರಿಯಾಗಿ ಆಹಾರ ಪದಾರ್ಥಗಳೂ ಲಭ್ಯವಿಲ್ಲದೆ ಜನರು ಪರದಾಡುವಂತಾಗಿದೆ. ಅವುಗಳಿಗೆ ಹೋಲಿಸಿದರೆ ಭಾರತದಲ್ಲಿ ಪರಿಸ್ಥಿತಿ ಎಷ್ಟೋ ಸುಧಾರಿತ ಮಟ್ಟದಲ್ಲಿದೆ ಎನ್ನುವುದೇ ಈ ಭಾರತೀಯರ ವಾಪಸಾತಿಗೆ ಕಾರಣ.
ಎಲ್ಲರಿಗೂ ಕ್ವಾರಂಟೈನ್ ಕಡ್ಡಾಯ: ಕರೊನಾ ಸೋಂಕುಗಳ ಲಕ್ಷಣವಿಲ್ಲದ ವ್ಯಕ್ತಿಗಳಿಗೆ ಮಾತ್ರ ಪ್ರಯಾಣಕ್ಕೆ ಆದ್ಯತೆ ನೀಡಲಾಗಿದೆ. ಪ್ರಯಾಣಕ್ಕೆ ಮುನ್ನ ಎಲ್ಲರ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಲಾಗಿದೆ. ಭಾರತಕ್ಕೆ ಬಂದಿಳಿದ ಕೂಡಲೇ ಎಲ್ಲರನ್ನೂ 14 ದಿನಗಳ ಕ್ವಾರಂಟೈನ್ ಘಟಕಕ್ಕೆ ಕಳುಹಿಸಲಾಗುವುದು ಮತ್ತು ಅಲ್ಲಿನ ಖರ್ಚು ವೆಚ್ಚಗಳನ್ನೂ ಪ್ರಯಾಣಿಕರೇ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ:ಪೆಟ್ರೋಲ್​, ಡೀಸೆಲ್​ಗಳನ್ನೂ ಜಿಎಸ್​ಟಿ ವ್ಯಾಪ್ತಿಗೆ ತನ್ನಿ: ಅಸೋಚಾಮ್ ಮನವಿ
ಪ್ರಯಾಣ ಹೀಗಿರಲಿದೆ:
ಮೊದಲ ದಿನದಂದು 10 ವಿಮಾನಗಳ ಮೂಲಕ 2300 ಭಾರತೀಯರು ಸ್ವದೇಶಕ್ಕೆ.2ನೇ ದಿನದಂದು 9 ದೇಶಗಳಿಂದ 2050 ಭಾರತೀಯರು ಚೆನ್ನೈ, ಕೊಚ್ಚಿ, ಮುಂಬೈ, ಅಹಮದಾಬಾದ್, ಬೆಂಗಳೂರು ಮತ್ತು ದೆಹಲಿಗೆ ಬಂದಿಳಿಯುತ್ತಾರೆ.3ನೇ ದಿನದಂದು ಮಧ್ಯಪ್ರಾಚ್ಯ, ಯೂರೋಪ್, ಸೌತ್ ಈಸ್ಟ್ ಏಷ್ಯಾ ಹಾಗೂ ಅಮೆರಿಕದ 2050 ಭಾರತೀ ಯರು ಮುಂಬೈ, ಲಖನೌ ಮತ್ತು ದೆಹಲಿಗೆ ಬರಲಿದ್ದಾರೆ4ನೇ ದಿನದಂದು ಅಮೆರಿಕ, ಬ್ರಿಟನ್ ಮತ್ತು ಯುಎಇಯಿಂದ 1850 ಭಾರತೀಯರು ಸ್ವದೇಶಕ್ಕೆ.
ಯೋಜನೆ ಹೀಗಿದೆ..
ಇದನ್ನೂ ಓದಿ:ಚೆನ್ನೈನ ಈ ಹಣ್ಣು ಮಾರುಕಟ್ಟೆ ಈಗ ಭಯ ಹುಟ್ಟಿಸುತ್ತಿರುವುದೇಕೆ?
64 ವಿಮಾನ ಸಂಚಾರ: ಮೇ 6ರಿಂದ ಯುರೋಪ್, ಅಮೆರಿಕ, ಆಗ್ನೇಯ ಏಷ್ಯಾ ದೇಶಗಳಿಂದ ಭಾರತಕ್ಕೆ ವಿಮಾನಯಾನ ಆರಂಭಗೊಳ್ಳಲಿದೆ. ವಿದೇಶಗಳಲ್ಲಿ ಇರುವ ಭಾರತೀಯರನ್ನು ಕರೆತರಲು ಭಾರತದ 64 ವಿಮಾನಗಳು ಸಂಚರಿಸಲಿವೆ. ಯುರೋಪ್, ಯುಎಸ್​ಎ, ಗಲ್ಪ್, ಯುಕೆ ಸಹಿತ ವಿವಿಧ ರಾಷ್ಟ್ರಗಳಿಂದ ಕೇರಳ, ತಮಿಳುನಾಡು, ಮಹಾರಾಷ್ಟ್ರ, ನವದೆಹಲಿ, ಪಂಜಾಬ್, ತೆಲಂಗಾಣ, ಗುಜರಾತ್ ಸಹಿತ 10 ರಾಜ್ಯಗಳಿಗೆ ಪ್ರಥಮ ಸುತ್ತಿನಲ್ಲಿ ಭಾರತೀಯರು ಆಗಮಿಸಲಿದ್ದಾರೆ.ವಿಮಾನದರ: ಲಂಡನ್-ಮುಂಬೈ ಅಥವಾ ಲಂಡನ್-ಬೆಂಗಳೂರು ವಿಮಾನ ಪ್ರಯಾಣಕ್ಕೆ ಅಂದಾಜು ದರ 50 ಸಾವಿರ ರೂ. ಆಗಲಿದೆ. ಹಾಗೇ, ನ್ಯೂಯಾರ್ಕ್, ಷಿಕಾಗೊ ಅಥವಾ ಸ್ಯಾನ್ ಫ್ರಾನ್ಸಿಸ್ಕೋದಿಂದ ಭಾರತಕ್ಕೆ ಬರಲು 1 ಲಕ್ಷ ರೂ. ದರವಿದೆ. ಇದೊಂದು ವಿಶೇಷ ಯೋಜನೆಯಾಗಿದ್ದು, ಕೇಂದ್ರ ನಿಗದಿ ಮಾಡುವ ಹಣವನ್ನು ಪ್ರಯಾಣಿಕರು ನೀಡಬೇಕು ಎಂದು ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪೂರಿ ಹೇಳಿದ್ದಾರೆ. ದುಬೈ ಪ್ರಯಾಣಿಕರಿಗೆ 13,000 ರೂ., ಅಬುಧಾಬಿ 15,000 ರೂ. ಮತ್ತು ಸಿಂಗಾಪುರದಿಂದ ಬರಲು 20,000 ರೂ. ವಿಧಿಸಲಾಗಿದೆ.
ಇದನ್ನೂ ಓದಿ:VIDEO: ಸಂಸದೆ ಶೋಭಾ ಕರಂದ್ಲಾಜೆಗೆ ಗಲ್ಫ್ ರಾಷ್ಟ್ರಗಳಿಂದ ಜೀವ ಬೆದರಿಕೆ ಕರೆ!
ಮಾಲ್ಡೀವ್ಸ್, ಯುಎಇನತ್ತ ಹಡಗು: ನೌಕಾ ಪಡೆಯ ನಾಲ್ಕು ನೌಕೆಗಳು ಈಗಾಗಲೇ ಮಾಲ್ಡೀವ್ಸ್ ಮತ್ತು ಯುಎಇ ದೇಶಗಳ ಬಂದರಿನತ್ತ ಮುಖ ಮಾಡಿವೆ. 2-3 ದಿನಗಳಲ್ಲಿ ಈ ನೌಕೆಗಳು ಗಮ್ಯ ತಲುಪಲಿದ್ದು, ಪ್ರತಿ ನೌಕೆಯಲ್ಲಿ ಅಂದಾಜು 800 ಪ್ರಯಾಣಿಕರ ಯಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೊಲ್ಲಿ ರಾಷ್ಟ್ರಗಳಿಂದ ನೌಕೆ ಮೂಲಕ ಬರಲು ಈಗಾಗಲೇ ಸಾವಿರಾರು ಮಂದಿ ನೋಂದಣಿ ಮಾಡಿಕೊಂಡಿದ್ದು, ಈ ನೌಕೆಗಳು ಕೇರಳದ ಕೊಚ್ಚಿ ಟರ್ವಿುನಲ್ ನಲ್ಲಿ ನೆಲೆಗೊಳ್ಳಲಿವೆ. ಮಾಲ್ದೀವ್ಸ್ ನಿಂದ ಬರುವ ನೌಕೆ ಮೇ.7ರಂದು ಕೊಚ್ಚಿ ತಲುಪುವ ನಿರೀಕ್ಷೆಯಿದೆ. ಅಲ್ಲಿಂದ ಆಯಾ ರಾಜ್ಯ ಸರ್ಕಾರಗಳು ಪ್ರಯಾಣಿಕರನ್ನು ಕ್ವಾರಂಟೈನ್ ಘಟಕಕ್ಕೆ ಸೇರಿಸಲು ಕ್ರಮ ಕೈಗೊಳ್ಳಬೇಕಿದೆ.
500 ರೂಪಾಯಿಗೋಸ್ಕರ 30 ಕಿ.ಮೀ. ನಡೆದ ಮಹಿಳೆಗೆ ಸಮಾಜ ನೀಡಿತು ಭರಪೂರ ನೆರವು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 16 =
Remember me
