ನವದೆಹಲಿ:ದೇಶದಲ್ಲಿ ಕರೊನಾವೈರಸ್​​ನ ಎರಡನೇ ಅಲೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದಕ್ಕೆ ಪ್ರಮುಖ ಎರಡು ಕಾರಣಗಳನ್ನು ದೆಹಲಿಯ ಏಮ್ಸ್​ ವೈದ್ಯರು ಕಂಡುಕೊಂಡಿದ್ದಾರೆ.
ಏಮ್ಸ್​ ನ ನಿರ್ದೇಶಕ ರಂದೀಪ್ ಗುಲೇರಿಯಾ ಅವರು ಹೇಳುವ ಪ್ರಕಾರ ಕಳೆದ ನಾಲ್ಕು ತಿಂಗಳಿನಿಂದ ಕೋವಿಡ್ ಕಡಿಮೆಯಾಗಿದೆಯಂದು ಜನ ಮುನ್ನೆಚ್ಚರಿಕೆ ಕ್ರಮಗಳನ್ನು ಸಂಪೂರ್ಣ ನಿರ್ಲಕ್ಷಿಸಿದ್ದು ಹಾಗೂ ರೂಪಾಂತರಗೊಂಡಿರುವ ಕರೊನಾವೈರಸ್​​ನ ಆರ್ಭಟದಿಂದ ಇವತ್ತು ವ್ಯಾಪಕ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಲಾಕ್ ಡೌನ್ ನಿಂದ ಏನೂ ಪ್ರಯೋಜನ ಇಲ್ಲ: ಸಂಸದ ರಮೇಶ ಜಿಗಜಿಣಗಿ ಅಭಿಮತ
ದೇಶದಲ್ಲಿ ಡಿಸೆಂಬರ್​ನಿಂದ ಏಪ್ರಿಲ್​ವರೆಗೆ ಹಬ್ಬ, ಜಾತ್ರೆ, ಉತ್ಸವಗಳು ಹೆಚ್ಚು ನಡೆಯುತ್ತವೆ. ಅಲ್ಲದೇ ಪಂಚರಾಜ್ಯ ಚುನಾವಣೆಯೂ ಈಗಲೇ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕೊರನಾವೈರಸ್​ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳದಿರುವುದಕ್ಕೆ ಸೋಂಕು ವ್ಯಾಪಿಸಿದೆ. ಇದರ ಬಗ್ಗೆ ಮೊದಲೇ ಎಚ್ಚರವಹಿಸಿದ್ದರೇ ಇಂದು ಇಷ್ಟು ಪ್ರಮಾಣದಲ್ಲಿ ಸೋಂಕು ಹರಡುತ್ತಿರಲಿಲ್ಲ ಎಂದು ರಂದೀಪ್ ಗುಲೇರಿಯಾ ಹೇಳಿದ್ದಾರೆ. ಲಸಿಕಾಕರಣದ ವೇಳೆಯೇ ಜನ ನಿರ್ಲಕ್ಷ್ಯ ಮಾಡಿದರು ಎಂದು ಹೇಳಲಾಗಿದೆ
ಕಳೆದ ಹತ್ತು ದಿನಗಳಲ್ಲಿ ಕೋವಿಡ್ ಪಾಸಿಟಿವ್ ಬಂದವರ ಸಂಖ್ಯೆ ದೇಶದಲ್ಲಿ 1 ಮಿಲಿಯನ್​ ಮೀರಿದೆ. ಇದು ಒಂದನೇ ಅಲೆಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಅಲ್ಲದೇ ಸರಾಸರಿ ಪ್ರತಿದಿನ 1 ಲಕ್ಷ ಪಾಸಿಟಿವ್ ಕಂಡು ಬಂದಿವೆ. ಮಹಾರಾಷ್ಟ್ರ, ಚತ್ತೀಸ್​ಗಢ, ಪಂಜಾಬ್, ದೆಹಲಿ ಹಾಗೂ ಕರ್ನಾಟಕದಲ್ಲಿ ವೈರಸ್ ಸೋಂಕು ಹೆಚ್ಚು ಕಂಡು ಬರುತ್ತಿದೆ.
ವಿವಾಹಿತೆಯನ್ನು ಅಪಹರಿಸಿ 20 ದಿನ ಟ್ರಕ್​ನಲ್ಲಿಟ್ಟು ರೇಪ್​: ಕಾಮಾಂಧ ಯುವಕರ ಅಟ್ಟಹಾಸ ಬಿಚ್ಚಿಟ್ಟ ಸಂತ್ರಸ್ತೆ!
ಕೆಲಸಕ್ಕೆ ಹಾಜರಾದ ಬಸ್​​ ಚಾಲಕನಿಗೆ ಕಲ್ಲಿನಿಂದ ಹೊಡೆದು ಹತ್ಯೆ: ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ದೂರು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 + 11 =
Remember me
