ನವದೆಹಲಿ: ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಒಂದೇ ದಿನ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ನಡೆದಿದೆ. ಮಾತ್ರವಲ್ಲ, ಎರಡು ತಿಂಗಳಲ್ಲಿ ಇಂಥ 9 ಪ್ರಕರಣಗಳು ನಡೆದಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ರಾಜಸ್ಥಾನದ ಕೋಟಾದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಒಂದೇ ದಿನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೆಹುಲ್ ವೈಷ್ಣವ್ ಹಾಗೂ ಆದಿತ್ಯ ಆತ್ಮಹತ್ಯೆ ಮಾಡಿಕೊಂಡ ವೈದ್ಯಕೀಯ ವಿದ್ಯಾರ್ಥಿಗಳು.
ಇದನ್ನೂ ಓದಿ:ಮಕ್ಕಳ ಕಣ್ಣಿಗೆ ಕಾಡಿಗೆ ಎಷ್ಟು ಸುರಕ್ಷಿತ!; ಅಪಾಯವೇನು?
ಮೆಹುಲ್ ವೈಷ್ಣವ್ (18) ನೀಟ್ ಪರೀಕ್ಷೆಗೆ ಸಜ್ಜಾಗುತ್ತಿದ್ದು, ಮಂಗಳವಾರ ಬೆಳಗ್ಗೆ ಉದಯಪುರದ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಹಾಕಿಕೊಂಡು ಸಾವಿಗೀಡಾಗಿದ್ದ. ಉದಯಪುರ ಜಿಲ್ಲೆಯ ಸಲುಂಬಾರ್​ ಎಂಬಲ್ಲಿನ ಈತ ಕೋಚಿಂಗ್ ಇನ್​ಸ್ಟಿಟ್ಯೂಟ್​ವೊಂದರಲ್ಲಿ 2 ತಿಂಗಳಿಂದ ನೀಟ್ ಅಧ್ಯಯನದಲ್ಲಿ ತೊಡಗಿದ್ದ. ಈತ ಹಾಸ್ಟೆಲ್​ನಲ್ಲಿ ಏಕಾಂಗಿಯಾಗಿದ್ದ ಈ ಆತ್ಮಹತ್ಯೆ ಮಾಡಿಕೊಂಡಿದ್ದ.
ಇದನ್ನೂ ಓದಿ:ಗೃಹಲಕ್ಷ್ಮಿ ವಿಳಂಬ?; ಅದೊಂದೇ ಕಾರಣಕ್ಕೆ ಸ್ವಲ್ಪ ತಡವಾಗುತ್ತಿದೆ ಎಂದ ಹೆಬ್ಬಾಳ್ಕರ್​!
ವೈದ್ಯಕೀಯ ಪರೀಕ್ಷೆಗೆ ತಯಾರಿಯಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿ ಆದಿತ್ಯ ಎಂಬಾತ ಕೂಡ ಕೋಟಾದಲ್ಲಿ ನೇಣು ಹಾಕಿಕೊಂಡಿದ್ದಾನೆ. ಈತನೂ ಕೋಚಿಂಗ್​ಗಾಗಿ ಎರಡು ತಿಂಗಳ ಹಿಂದೆ ಬಂದಿದ್ದ. ಕೋಟಾದಲ್ಲಿ ಕಳೆದ ಎರಡು ತಿಂಗಳಲ್ಲಿ ಇಂಥ 9 ಆತ್ಮಹತ್ಯೆಗಳಾಗಿವೆ. ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. –ಏಜೆನ್ಸೀಸ್
ಜಾತಿಗೆ ಬಲಿಯಾಯ್ತು ಎರಡು ಜೀವ!: ಮಗಳ ಕತ್ತು ಹಿಸುಕಿ ಕೊಂದ ತಂದೆ; ನೊಂದ ಪ್ರಿಯಕರ ಸಾವಿಗೆ ಶರಣು!

ಶಿಕ್ಷಕರು ಕೂಡಲೇ ಮೂಲಶಾಲೆಗೆ ಹಾಜರಾಗದಿದ್ದರೆ ವೇತನ ಕಡಿತ; ಸಂಬಂಧಿತ ಶಿಕ್ಷಕ ಮಾತ್ರವಲ್ಲದೆ ಬಿಇಒ-ಡಿಡಿಪಿಐ ಮೇಲೂ ಶಿಸ್ತುಕ್ರಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − five =
Remember me
