ಚೆನ್ನೈ (ತಮಿಳುನಾಡು) :ದ್ವಿಚಕ್ರ ವಾಹನದಲ್ಲಿ ಎಲೆಕ್ಟ್ರಾನಿಕ್​ ವೋಟಿಂಗ್​ ಮೆಷಿನ್​ (ಇವಿಎಂ) ಸಾಗಿಸುತ್ತಿದ್ದ ವ್ಯಕ್ತಿಗಳಿಬ್ಬರನ್ನು ಚೆನ್ನೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಈ ಘಟನೆ ವೇಲಚೇರಿ ಏರಿಯಾದಲ್ಲಿ ನಡೆದಿದೆ.
ಇವಿಎಂ ಬದಲಾಯಿಸಲಿಸಲು ಬೈಕ್​ನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಸ್ಥಳೀಯರು ಗಮನಿಸಿ ಇಬ್ಬರನ್ನು ಇವಿಎಂ ಸಮೇತ ಪೊಲೀಸರ ವಶಕ್ಕೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ವೈರಲ್​ ಆಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿರಿ:ಪ್ರಿಯಕರನ ಮನೆಗೆ ಬೆಂಕಿ ಇಟ್ಟ ಪ್ರೀತಿಯ ಕಿಚ್ಚು! ಪ್ರೇಯಸಿಯೊಂದಿಗೆ ಇರುವಾಗಲೇ ನಡೆಯಿತು ದುರಂತ
ಇನ್ನು ಇವಿಎಂ ಬಗ್ಗೆ ಮಾತನಾಡಿರುವ ತಮಿಳುನಾಡು ಮುಖ್ಯ ಚುನಾವಣಾಧಿಕಾರಿ, ವಶಪಡಿಸಿಕೊಂಡಿರುವ ಇವಿಎಂಗಳು ಮೀಸಲು ಘಟಕಗಳಾಗಿದ್ದು, ಮಂಗಳವಾರ ಮತದಾನಕ್ಕೆ ಬಳಸಿಲ್ಲ ಎಂದು ಸ್ಪಷ್ಟನೆ ನೀಡಿದ್ದು, ಕ್ರಮ ತೆಗೆದುಕೊಳ್ಳುವುದಾಗಿಯೂ ಹೇಳಿದ್ದಾರೆ.
ತಮಿಳುನಾಡಿನಾದ್ಯಂತ ಒಂದೇ ಹಂತದಲ್ಲಿ ನಿನ್ನೆ ವಿಧಾನಸಭಾ ಚುನಾವಣೆ ನಡೆದಿದ್ದು, ಶೇ. 71.79 ರಷ್ಟು ಮತದಾನ ನಡೆದಿದೆ. ಮತದಾನದಲ್ಲಿ ಕಾಲಿವುಡ್​ನ ಸಾಕಷ್ಟು ಕಲಾವಿದರು ಭಾಗಿಯಾಗಿದ್ದು ತುಂಬಾ ವಿಶೇಷ. ಅದರಲ್ಲೂ ನಟ ವಿಜಯ್​ ಅವರು ಸೈಕಲ್​ ಮೇಲೆ ಬಂದು ಮತದಾನ ಮಾಡಿದ್ದು, ಇಡೀ ದಿನ ಸುದ್ದಿಯಾಯಿತು.(ಏಜೆನ್ಸೀಸ್​)
ಮನೆಯ ಫ್ರಿಡ್ಜ್​ನಲ್ಲಿತ್ತು ಮೃತದೇಹ: ನಿಗೂಢ ಕೇಸ್​ ಬೆನ್ನತ್ತಿ ಹೋದ ಪೊಲೀಸರಿಗೆ ಮಹಿಳೆಯ ಕರಾಳ ಮುಖ ಬಯಲು!

Web Exclusive | ಇಂಜಿನಿಯರಿಂಗ್ ವ್ಯಾಸಂಗಕ್ಕೆ ನಿರಾಸಕ್ತಿ, ಖಾಸಗಿ ಸಂಸ್ಥೆಗಳಲ್ಲಿ ಮುಚ್ಚುವ ಸ್ಥಿತಿ!

ಚೀನಾಕ್ಕೆ ಭಾರತೀಯರ ಕೂದಲು ಕಳ್ಳಸಾಗಣೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 2 =
Remember me
