ನಾಗ್ಪುರ:ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರ್​​ಎಸ್​ಎಸ್​ ಪ್ರಧಾನ ಕಚೇರಿಯ ಫೋಟೋ ತೆಗೆದ ಇಬ್ಬರು ಬೆಂಗಳೂರಿನ ಯುವಕರನ್ನು ಪೊಲೀಸರು ಬಂಧಿಸಿದ್ದರು.
ಗುರುವಾರ ರಾತ್ರಿ ಘಟನೆ ನಡೆದಿದ್ದು ಬಂಧಿತರಾದ ಇಬ್ಬರಲ್ಲಿ ಓರ್ವ ಯುವಕ ಪತ್ರಿಕೋದ್ಯಮ ವಿದ್ಯಾರ್ಥಿ ಎಂದು ಹೇಳಲಾಗಿದೆ. ವಿಚಾರಣೆ ನಡೆಸಿದ ಪೊಲೀಸರು ಇಬ್ಬರನ್ನೂ ಬಿಟ್ಟು ಕಳಿಸಿದ್ದಾರೆ.
ಪತ್ರಕರ್ತ ಯುವಕರಿಬ್ಬರು ಛತ್ತೀಸ್​ಗಢಕ್ಕೆ ಫಿಲ್ಮ್ ಉತ್ಸವಕ್ಕಾಗಿ ತೆರಳಿದ್ದರು. ರಾಯ್ಪುರದಿಂದ ಬೆಂಗಳೂರು ರೈಲು ತಪ್ಪಿಹೋದ ಕಾರಣ ನಾಗ್ಪುರಕ್ಕೆ ಆಗಮಿಸಿದ್ದರು. ಇಲ್ಲಿನ ಆರ್​ಎಸ್​ಎಸ್​ ಪ್ರಧಾನ ಕಚೇರಿಯ ಫೋಟೋ ತೆಗೆಯುತ್ತಿದ್ದ ವೇಳೆ ಅವರನ್ನು ಕೊತ್ವಾಲಿ ಪೊಲೀಸರು ವಶಕ್ಕೆ ಪಡೆದಿದ್ದರು.
ಅವರನ್ನು ಪರಿಶೀಲನೆ ಮಾಡಿದಾಗ ಯಾವುದೇ ರೀತಿಯ ಅನುಮಾನಾಸ್ಪದ ವಸ್ತುಗಳು ಸಿಗಲಿಲ್ಲ. ವಿಚಾರಣೆ ವೇಳೆಯೂ ಸಹ ಶಂಕಾಸ್ಪದವಾಗಿ ಮಾತನಾಡಿಲ್ಲ. ಹಾಗಾಗಿ ಇಬ್ಬರನ್ನೂ ಬಿಟ್ಟುಕಳಿಸಿದ್ದೇವೆ ಎಂದು ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)
ವೈರಲ್​ ಸುದ್ದಿ:ದೇಗುಲದ ಶೌಚಗೃಹದಲ್ಲಿ ‘ಬ್ರಾಹ್ಮಣರಿ’ಗೆ ಮೀಸಲಾತಿ ! ಫಲಕ ನೋಡಿ ಕೆಂಡಾಮಂಡಲರಾದ ನೆಟ್ಟಿಗರು…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + one =
Remember me
