ಉತ್ತರಾಖಂಡ:ಯಾತ್ರಿಕರನ್ನು ಹೊತ್ತೊಯ್ಯುವ ಕುದುರೆಗೆ ಯುವಕರಿಬ್ಬರು ಬಲವಂತವಾಗಿ ಗಾಂಜಾ ಸೇವನೆ ಮಾಡಿಸಿರುವ ವಿಕೃತ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಇದನ್ನೂ ಓದಿ:ಕೇರಳದ 13 ಯೂಟ್ಯೂಬರ್ಸ್​ ಮನೆಗಳ ಮೇಲೆ ಐಟಿ ದಾಳಿ: ಸ್ಫೋಟಕ ಮಾಹಿತಿ ಬಯಲು, ದಂಗಾದ ಅಧಿಕಾರಿಗಳು
ಘಟನೆಯು ಹಿಂದೂಗಳ ಪವಿತ್ರ ಸ್ಥಳವಾದ ಕೇದಾರನಾಥ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ನಡೆದಿದ್ದು, ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಾಣಿ ಪ್ರಿಯರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈ ಕೃತ್ಯಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ವಿಡಿಯೋದಲ್ಲಿ ಏನಿದೆ?ಕುದುರೆಯ ಪಾಲನೆ ಮಾಡುವ ಯುವಕರಿಬ್ಬರು ಕುದುರೆಯನ್ನು ಹಿಡಿದುಕೊಂಡು ಬಲವಂತವಾಗಿ ಅದರ ಬಾಯಿ ಹಾಗೂ ಮೂಗಿನ ಒಂದು ಹೊಳ್ಳೆಯನ್ನು ಕೈಯಿಂದ ಮುಚ್ಚಿದ್ದಾರೆ. ನಂತರ ಗಾಂಜಾವನ್ನು ಕುದುರೆಯ ಮತ್ತೊಂದು ಹೊಳ್ಳೆಯ ತುದಿಗೆ ಇಟ್ಟು ಒತ್ತಾಯ ಪೂರ್ವಕವಾಗಿ ಧೂಮಪಾನ ಮಾಡಿಸಿದ್ದಾರೆ.
ಇದನ್ನೂ ಓದಿ:ಓಲಾ ಇವಿಗೆ 15,000 ರೂ. ದಂಡ: ಫ್ಯಾನ್ಸಿ ಬದಲು ಬೇರೆ ಸಂಖ್ಯೆ ನೋಂದಣಿ; 25,000 ರೂ. ಮರುಪಾವತಿಗೆ ಆದೇಶ
ಇಂತಹ ಮಾದಕವಸ್ತು ಸೇವಿಸುವ ಕುದುರೆಗಳನ್ನು ಏರುವ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳ ಸುರಕ್ಷತೆ ಬಗ್ಗೆ ನೆಟ್ಟಿಗರು ಪ್ರಶ್ನೆಯನ್ನು ಎತ್ತಿದ್ದಾರೆ. ಯುವಕರ ಈ ಹಿಂಸಾ ಕೃತ್ಯವು ವೈರಲ್​ ಆದ ಕೂಡಲೇ ಉತ್ತರಾಖಂಡ ಪೊಲೀಸರು, ಕುದುರೆಗೆ ಬಲವಂತವಾಗಿ ಧೂಮಪಾನ ಮಾಡಿಸುತ್ತಿರುವ ಯುವಕರಿಬ್ಬರ ಅಮಾನವೀಯ ಕೃತ್ಯವು ನಮ್ಮ ಗಮನಕ್ಕೆ ಬಂದಿದೆ. ಈ ವಿಡಿಯೋದಲ್ಲಿನ ವ್ಯಕ್ತಿಗಳಿಗಾಗಿ ಶೋಧ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಉತ್ತರಾಖಂಡದಲ್ಲಿ ಸಾಕು ಪ್ರಾಣಿಗಳ ಪಾಡು ತೀವ್ರ ದುಃಖಕರವಾಗಿದ್ದು, ಚಾರ್ಧಾಮ್ ಯಾತ್ರೆಯಲ್ಲಿ ಯಾತ್ರಾರ್ಥಿಗಳನ್ನು ಗಮ್ಯಸ್ಥಾನಗಳಿಗೆ ಹೊತ್ತೊಯ್ಯುವ ಕತ್ತೆ ಮತ್ತು ಕುದುರೆಗಳನ್ನು ನಿರ್ವಾಹಕರು ನಿರ್ಲಕ್ಷ್ಯದಿಂದ ನಡೆಸಿಕೊಳ್ಳುವುದರ ಜತೆಗೆ ಹಲ್ಲೆ ಮಾಡುತ್ತಿದ್ದಾರೆ. ಪ್ರಾಣಿ ಪ್ರಿಯರು, ಪ್ರಾಣಿಗಳ ಮೇಲೆ ನಡೆದ ಕ್ರೌರ್ಯದ ಮೇಲೆ ಬೆಳಕು ಚೆಲ್ಲಿದ್ದು ಕುದುರೆಗಳನ್ನು ಉಳಿಸಿ ಎಂಬ ಅಭಿಯಾನವನ್ನು ಪ್ರಾರಂಭಿಸಿವೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 4 =
Remember me
