ನವದೆಹಲಿ:ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಆಡಿದ್ದ ಸುಮಾರು 2 ಗಂಟೆಗಳ ಅವಧಿಯ ಮಾತಿನಲ್ಲಿ ಮಣಿಪುರದ ಬಗ್ಗೆ ಇದ್ದಿದ್ದು ಬರೀ ಎರಡೇ ನಿಮಿಷ ಎಂದು ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಇಂದು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ಮಣಿಪುರ ಹೊತ್ತಿ ಉರಿಯಲಿ ಎಂದು ಬಯಸುತ್ತಿದ್ದಾರೆ ಮತ್ತು ಅದಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ. ನಿಜಕ್ಕೂ ಅವರಿಗೆ ಮಣಿಪುರದಲ್ಲಿನ ಹಿಂಸಾಚಾರವನ್ನು ನಿಯಂತ್ರಣಕ್ಕೆ ತರಬೇಕು ಎಂಬ ಮನಸಿದ್ದರೆ ಅದನ್ನು ತಕ್ಷಣವೇ ತಹಬದಿಗೆ ತರಬಲ್ಲ ಸಾಧನಗಳು ಸರ್ಕಾರದ ಕೈಯಲ್ಲೇ ಇವೆ ಎಂದು ರಾಹುಲ್ ಕಿಡಿಕಾರಿದ್ದಾರೆ.
ಇದನ್ನೂ ಓದಿ:ಲೆಫ್ಟಿಗಳಿಗೆಂದೇ ವಿಶೇಷ ಹೆಲ್ಮೆಟ್​: ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಪ್ರಚಾರಕ್ಕೆ ಸಿಕ್ತು ‘ವೇಗ’
ಮಣಿಪುರದಲ್ಲಿ ಮಹಿಳೆಯರು ಮತ್ತು ಮಕ್ಕಳು ಸಾಯುತ್ತಿದ್ದಾರೆ. ಮಹಿಳೆಯರ ಮೇಲೆ ಹಿಂಸಾಚಾರ, ಅತ್ಯಾಚಾರಗಳು ನಡೆಯುತ್ತಿವೆ. ಆದರೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಕುಳಿತು ನಗುತ್ತಿದ್ದಾರೆ. ಒಂದು ರಾಜ್ಯವೇ ಕಳೆದ ನಾಲ್ಕು ತಿಂಗಳಿಂದ ಹೊತ್ತಿ ಉರಿಯುತ್ತಿರುವಾಗ ಸಂಸತ್ತಿನಲ್ಲಿ ತಮಾಷೆ ಮಾಡಿ ನಗುವುದು ಪ್ರಧಾನಿಗೆ ಯೋಗ್ಯವಲ್ಲ ಎಂದು ರಾಹುಲ್ ಹೇಳಿದ್ದಾರೆ.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ನಿನ್ನೆ ಪ್ರಧಾನಿ ಸಂಸತ್ತಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಮಾತನಾಡಿದ್ದನ್ನು ನೋಡಿದೆ. ಆ ಮಾತಿನಲ್ಲಿ ನಗು ತಮಾಷೆ ಸ್ಲೋಗನ್​ಗಳು ತುಂಬಿದ್ದವು. ಪ್ರಧಾನಿ ಒಂದು ಸ್ಲೋಗನ್ ಹೇಳುವುದು, ಬಿಜೆಪಿ ನಾಯಕರು ಅದಕ್ಕೆ ಇನ್ನೊಂದು ಸ್ಲೋಗನ್ ಮೂಲಕ ಜೈಕಾರ ಕೂಗುವುದು. ಪ್ರಧಾನಿ ಮಣಿಪುರದ ಸ್ಥಿತಿ ಮರೆತಂತಿತ್ತು, ಅಷ್ಟೂ ಮಾತಿನಲ್ಲಿ ಮಣಿಪುರದ ಬಗ್ಗೆ ಇದ್ದಿದ್ದು ಎರಡೇ ನಿಮಿಷ ಎಂದು ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಮದುವೆ ಫೋಟೋಗ್ರಫಿಗೆ ಹೋದವಳು ವರನೊಂದಿಗೇ ಅಫೇರ್ ಇಟ್ಟುಕೊಂಡಳು​; ಹಣ ವಾಪಸ್ ಕೊಡುವಂತೆ ಒತ್ತಾಯಿಸಿದ ವಧು

ಡಾ.ರಾಜ್ ಕುಟುಂಬದಲ್ಲಿ ಒಬ್ಬರ ಹಿಂದೊಬ್ಬರ ಸಾವು; ಕಾರಣ ತಿಳಿಯಲು ಸದ್ಯದಲ್ಲೇ ಅಷ್ಟಮಂಗಲ ಪ್ರಶ್ನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
