ನವದೆಹಲಿ:ಜಪಾನ್​ನಲ್ಲಿ ತಡೆಹಿಡಿಯಲ್ಪಟ್ಟಿರುವ ಪ್ರಯಾಣಿಕರ ಹಡಗು ಡೈಮಂಡ್ ಪ್ರಿನ್ಸಸ್​ನಲ್ಲಿ ಮತ್ತಿಬ್ಬರು ಭಾರತೀಯರಲ್ಲಿ ಮಾರಕ ಕರೊನಾವೈರಸ್ ಸೋಂಕು ದೃಢಪಟ್ಟಿದ್ದು, ಸೋಂಕಿತ ಭಾರತೀಯರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಸೋಂಕು ಪತ್ತೆಯಾದ ಇಬ್ಬರು ಭಾರತೀಯರು ಹಡಗಿನ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಈಗಾಗಲೇ ಸೋಂಕು ದೃಢಪಟ್ಟವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಹಡಗಿನಲ್ಲಿರುವ ಕೊನೆಯ ತಂಡದ ವೈದ್ಯಕೀಯ ಪರೀಕ್ಷೆ ವರದಿ ಬುಧವಾರ ಬರುವ ಸಾಧ್ಯತೆ ಇದೆ ಎಂದು ಟೊಕಿಯೊದ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೋಂಕು ಧೃಢಪಡದ ಭಾರತೀಯರನ್ನು ಸ್ಥಳಾಂತರಿಸಲು ಒಂದು ವಿಶೇಷ ವಿಮಾನ ಸಿದ್ಧವಾಗಿರಿಸಲಾಗಿದೆ ಎಂದು ತಿಳಿಸಿದ್ದಾರೆ.
ಡೈಮಂಡ್ ಪ್ರಿನ್ಸಸ್​ನಲ್ಲಿನ ಒಟ್ಟು ಕರೊನಾ ಸೋಂಕಿತರ ಸಂಖ್ಯೆ 690 ದಾಟಿದ್ದು, ಜಪಾನ್​ನಾದ್ಯಂತ ಸುಮಾರು 140 ಜನರಲ್ಲಿ ಕರೊನಾ ಇರುವುದು ಧೃಢಪಟ್ಟಿದೆ. ಹಡಗಿನಲ್ಲಿದ್ದ ಮತ್ತೋರ್ವ ವ್ಯಕ್ತಿ ಮಂಗಳವಾರ ಸಾವನ್ನಪ್ಪಿದ್ದು, ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಹಡಗಿನಲ್ಲಿ 6 ಜನ ಪ್ರಯಾಣಿಕರು ಹಾಗೂ 132 ಜನ ಸಿಬ್ಬಂದಿ ಸೇರಿ ಒಟ್ಟು 138 ಭಾರತೀಯರಿದ್ದಾರೆ. ಚೀನಾದಲ್ಲಿ ಅತೀ ಹೆಚ್ಚು ಅಟ್ಟಹಾಸ ಮೆರೆಯುತ್ತಿರುವ ಕರೊನಾಗೆ ಮತ್ತೆ 71 ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 2,663ಕ್ಕೆ ಹೆಚ್ಚಳವಾಗಿದೆ. ಜತೆಗೆ ಹೊಸದಾಗಿ 508 ಜನರಲ್ಲಿ ಸೋಂಕು ಇರುವುದು ಧೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 77,658ಕ್ಕೆ ಏರಿಕೆಯಾಗಿದೆ. ಚೀನಾ ಹೊರತುಪಡಿಸಿದರೆ ದಕ್ಷಿಣ ಕೊರಿಯಾದಲ್ಲಿ ಕರೊನಾ ದಾಳಿ ಹೆಚ್ಚುತ್ತಿದ್ದು, 977 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈವರೆಗೆ 10 ಜನರು ಸಾವನ್ನಪ್ಪಿದ್ದಾರೆ. ಇರಾನ್​ನಲ್ಲಿ ಮತ್ತೆ ಮೂವರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 15ಕ್ಕೆ ಏರಿದೆ. ಈ ಹಿನ್ನೆಲೆಯಲ್ಲಿ ಇರಾನ್​ನಿಂದ ಬರುವ ವಿಮಾನಗಳಿಗೆ ಮಿತಿ ವಿಧಿಸಲಾಗುತ್ತದೆ ಎಂದು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಿಳಿಸಿದೆ.
ಕರೊನಾವೈರಸ್ ದಾಳಿ ಎದುರಿಸಲು ಅಮೆರಿಕ ಎಲ್ಲ ರೀತಿಯಲ್ಲೂ ಸನ್ನದ್ಧವಾಗಿದೆ. ಕರೊನಾ ತಡೆಗಟ್ಟಲು ಚೀನಾ ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತಿದ್ದು, ಸದ್ಯದ ಪರಿಸ್ಥಿತಿ ನೋಡಿದರೆ ಚೀನಾ ವೈರಸ್ ದಾಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತಡೆಗಟ್ಟಿದೆ.
| ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 10 =
Remember me
