ಕೋಲ್ಕತ:ಪಶ್ಚಿಮ ಬಂಗಾಳದ ನಾರ್ತ್ 24 ಪರಗಣಜಿಲ್ಲೆಯ ಬಾಂಗ್ಲಾ ಗಡಿ ಭಾಗದಲ್ಲಿ ಭೂಪಟವನ್ನು ಹಿಡ್ಕೊಂಡು ಸಂದೇಹಾಸ್ಪದವಾಗಿ ಅಡ್ಡಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ ಎಂದು ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿಎಸ್​ಎಫ್) ತಿಳಿಸಿದೆ.
ಬಂಧಿತರ ಬಳಿಕ ಸುಮಾರು 500ರಷ್ಟು ಯಾಬಾ ಟ್ಯಾಬ್ಲೆಟ್ಸ್, ಮ್ಯಾಪ್ ಮತ್ತು ಇತರೆ ವಸ್ತುಗಳು ಸಿಕ್ಕಿವೆ. ಯಾಬಾ ಟ್ಯಾಬ್ಲೆಟ್ಸ್ ನಿಷೇಧಿತ ಡ್ರಗ್ಸ್ ಪಟ್ಟಿಯಲ್ಲಿದೆ. ಗಸ್ತಿನಲ್ಲಿದ್ದ ಬಿಎಸ್​ಎಫ್ ಯೋಧರ ತಂಡಕ್ಕೆ ಇವರು ಎದುರಾಗಿದ್ದು, ಸಂದೇಹಾಸ್ಪದ ನಡವಳಿಕೆ ತೋರಿದ್ದರಿಂದ ತಡೆದು ತಪಾಸಣೆ ನಡೆಸಲಾಗಿತ್ತು. ಅವರ ಬಳಿ ಇದ್ದ ಬೈಕ್ ಅನ್ನೂ ವಶಪಡಿಸಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 3.26 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ:‘ಕಸ್ತೂರಿ ನಿವಾಸ’ ಕೈಬಿಟ್ಟ ರಚಿತಾ ರಾಮ್
ಬಂಧಿತರನ್ನು ರುಹುಲ್ ಮೊಂಡಲ್​, ಫಾರೂಕ್​ ಮೊಲ್ಲಾಹ್ ಎಂದು ಗುರುತಿಸಲಾಗಿದೆ. ಇಬ್ಬರೂ ನಾರ್ತ್ 24 ಪರಗಣ ಜಿಲ್ಲೆಯ ಸ್ವರೂಪ್​ನಗರದ ನಿವಾಸಿಗಳು. ವಿಚಾರಣೆ ವೇಳೆ, ಸ್ಥಳೀಯರೊಬ್ಬರು ತಮ್ಮನ್ನು ಅಲ್ಲಿ ನಿಲ್ಲುವಂತೆ ಸೂಚಿಸಿದ್ದರಿಂದ ನಿಂತಿದ್ದೇವೆ ಎಂದು ಹೇಳಿದ್ದರು. ಆ ಸ್ಥಳೀಯ ವ್ಯಕ್ತಿ ಯಾರು ಎಂಬ ಶೋಧಕ್ಕೆ ಇಳಿದಿದ್ದಾರೆ ಬಿಎಸ್​ಎಫ್ ಯೋಧರು ಮತ್ತು ಸ್ಥಳೀಯ ಪೊಲೀಸರು. (ಏಜೆನ್ಸೀಸ್)
ಅಲ್​ಕೈದಾ ಉಗ್ರರ ಬಂಧನ ಬೆನ್ನಿಗೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರು ಜನರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
