ನವದೆಹಲಿ:ಭಾರತದಲ್ಲಿ ಕೊರೊನಾ ವೈರಸ್​ ಕಾಣಿಸಿಕೊಂಡಿದ್ದು ಮೊದಲ ಬಾರಿಗೆ ಕೇರಳದಲ್ಲಿ. ಒಟ್ಟು ಮೂವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರೆಲ್ಲರೂ ಕೇರಳದವರೇ ಆಗಿದ್ದು ಈಗ ಗುಣಮುಖರಾಗಿದ್ದಾರೆ.
ಆದರೆ ಈಗ ಭಾರತದಲ್ಲಿ ಹೊಸದಾಗಿ ಇಬ್ಬರಲ್ಲಿ ಕೊರೊನಾ ವೈರಸ್​ ದೃಢಪಟ್ಟಿದೆ. ಇವರಿಬ್ಬರ ಆರೋಗ್ಯವೂ ಸ್ಥಿರವಾಗಿದ್ದು, ವೈದ್ಯಕೀಯ ನಿಗಾದಲ್ಲಿ ಇಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಇಬ್ಬರು ವೈರಸ್​ ಪೀಡಿತರಲ್ಲಿ ಓರ್ವ ದೆಹಲಿಯವರು, ಮತ್ತೋರ್ವರು ತೆಲಂಗಾಣದವರು ಎನ್ನಲಾಗಿದೆ. ವೈರಸ್​ ಸೋಂಕಿತ ದೆಹಲಿಯ ವ್ಯಕ್ತಿ ಇಟಲಿಯಿಂದ ಆಗಮಿಸಿದ್ದರು. ಹಾಗೇ ತೆಲಂಗಾಣದಲ್ಲಿ ವೈರಸ್​ ಸೋಂಕಿತರಾದವರು ಇತ್ತೀಚೆಗಷ್ಟೇ ದುಬೈಗೆ ಭೇಟಿ ಕೊಟ್ಟಿದ್ದರು.
ಈ ಮೊದಲು ಕೇರಳದ ಮೂವರು ವಿದ್ಯಾರ್ಥಿಗಳಲ್ಲಿ ವೈರಸ್​ ಕಾಣಿಸಿಕೊಂಡಿತ್ತು. ಅವರೆಲ್ಲ ಚೀನಾದ ವುಹಾನ್​ ಪ್ರಾಂತ್ಯದಿಂದ ಒಟ್ಟಿಗೇ ಪ್ರಯಾಣಿಸಿ ಭಾರತಕ್ಕೆ ಬಂದಿದ್ದರು. ಕೇರಳದಲ್ಲಿ ಮೂವರಿಗೆ ಸೋಂಕು ಕಾಣಿಸಿಕೊಳ್ಳುತ್ತಲೇ ದೇಶಾದ್ಯಂತ ಆತಂಕ ಮೂಡಿತ್ತು. ಆದರೆ ಅವರೆಲ್ಲರಿಗೂ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ನೀಡಿ, ಸೋಂಕು ಪಸರಿಸದಂತೆ ನಿಗಾ ವಹಿಸಲಾಗಿತ್ತು. ಸದ್ಯ ಅವರೆಲ್ಲರೂ ಚೇತರಿಸಿಕೊಂಡಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 1 =
Remember me
