ಕೇರಳ:ಕಾಡು ಹಂದಿಗಳ ಸೆರೆಗೆ ನಿರ್ಮಿಸಲಾಗಿದ್ದ ವಿದ್ಯುತ್ ಬಲೆಗೆ ಸಿಲುಕಿದ ಇಬ್ಬರು ಯುವಕರು ವಿದ್ಯುತ್​ ಸ್ಪರ್ಶದಿಂದ ಸಾವನ್ನಪ್ಪಿದ್ದು, ಭೂಮಾಲೀಕ ಇಬ್ಬರನ್ನು ತನ್ನ ಜಮೀನಿನಲ್ಲಿ ಮಣ್ಣು ಮಾಡಿದ ಘಟನೆ ಕೇರಳ ಜಿಲ್ಲೆಯ ಪಾಲಕ್ಕಾಡ್​ನಲ್ಲಿ ವರದಿಯಾಗಿದೆ.
ಇದನ್ನೂ ಓದಿ:Chakravathy Sulibele Holds State-Wide Bike Rally In Support Of PM Modi |ರಾಜ್ಯಾದ್ಯಂತ ಚಕ್ರವರ್ತಿ ಸೂಲಿಬೆಲೆ ಬೈಕ್ ಜಾಥಾ
ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಮೃತಪಟ್ಟ ಇಬ್ಬರು ಯುವಕರ ಶವಗಳನ್ನು ತನ್ನ ಭೂ ಜಾಗದಲ್ಲಿ ಮಣ್ಣು ಮಾಡಿದ್ದ ವ್ಯಕ್ತಿಯನ್ನು ಇದೀಗ ಕೇರಳ ಪೊಲೀಸರು ಬಂಧಿಸಿದ್ದಾರೆ. ಕಾಡು ಹಂದಿಗಳಿಗೆ ಹಾಕಲಾಗಿದ್ದ ಬಲೆಯಿಂದ ಇಬ್ಬರು ವ್ಯಕ್ತಿಗಳು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಪ್ರಕರಣ ಈಗ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಮೃತಪಟ್ಟ ಯುವಕರನ್ನು ಸತೀಶ್ (22) ಮತ್ತು ಶಿಜಿತ್ (22) ಎಂದು ಗುರುತಿಸಲಾಗಿದ್ದು, ಇಬ್ಬರು ಆರೋಪಿಯ ಹೊಲದಲ್ಲಿ ಸಂಚರಿಸುವ ವೇಳೆ ಈ ಘಟನೆ ಸಂಭವಿಸಿದೆ. ವಿದ್ಯುತ್ ತಗುಲಿದ ಸ್ಥಳದಿಂದ 10 ಮೀಟರ್ ದೂರದಲ್ಲಿ ಮಣ್ಣುಮಾಡಿದ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆಯಾಗಿದೆ. 70 ಸೆಂ.ಮೀ ಆಳದ ಗುಂಡಿಯಲ್ಲಿ ಯುವಕರ ಶವಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಇದನ್ನೂ ಓದಿ:ಒಟಿಟಿಗೆ ಲಗ್ಗೆಯಿಟ್ಟ ಧೋನಿ ನಿರ್ಮಾಣದ ‘ಲೆಟ್ಸ್ ​ಗೆಟ್​ ಮ್ಯಾರೀಡ್’
ಆರೋಪಿಯನ್ನು 52 ವರ್ಷದ ಅನಂತನ್ ಎಂದು ಬಹಿರಂಗಪಡಿಸಿದ ಪೊಲೀಸರು, “ವ್ಯಕ್ತಿ ಭಯಭೀತರಾಗಿ ಶವಗಳನ್ನು ಹೂತುಹಾಕಿದ್ದನ್ನು ಒಪ್ಪಿಕೊಂಡಿದ್ದಾನೆ. ಯುವಕರ ಸಾವಿಗೆ ಬೇರೆ ಯಾವುದಾದರೂ ಕಾರಣಗಳಿವೆಯೇ ಎಂಬುದರ ತನಿಖೆ ನಡೆಯುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:nineteen + 11 =
Remember me
