ಪಟ್ನಾ:ಇಬ್ಬರು ಪೊಲೀಸ್​ ಅಧಿಕಾರಿಗಳು ನ್ಯಾಯಾಧೀಶರೊಬ್ಬರ ಚೇಂಬರ್​​ಗೆ ನುಗ್ಗಿ ನಿಂದಿಸಿದ್ದಲ್ಲದೆ ಅವರ ಮೇಲೆ ಶಾರೀರಿಕ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಮಧುಬಾನಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಅವಿನಾಶ್​ ಕುಮಾರ್​ ಹಲ್ಲೆಗೊಳಗಾದ ನ್ಯಾಯಾಧೀಶರು. ಈ ಬಗ್ಗೆ ಸುಯೋ ಮೋಟೋ ಕೇಸು ದಾಖಲಿಸಿಕೊಂಡಿರುವ ಪಟ್ನಾ ಹೈಕೋರ್ಟ್​, ರಾಜ್ಯದ ಪೊಲೀಸ್​ ಮುಖ್ಯಸ್ಥರನ್ನು ಖುದ್ದು ಹಾಜರಾಗಿ ವರದಿ ನೀಡುವಂತೆ ಆದೇಶಿಸಿದೆ.
ಘೋಘರ್ದಿಹ ಠಾಣಾಧಿಕಾರಿ ಗೋಪಾಲ್​ ಕೃಷ್ಣ ಮತ್ತು ಸಬ್​ ಇನ್​ಸ್ಪೆಕ್ಟರ್​ ಅಭಿಮನ್ಯು ಕುಮಾರ್​ ಶರ್ಮಾ ಎಂಬುವರು ಗುರುವಾರದಂದು ಝಾಝರ್​​ಪುರದ ಕೋರ್ಟ್​ ಸಂಕೀರ್ಣದಲ್ಲಿರುವ ನ್ಯಾಯಾಧೀಶರ ಕೊಠಡಿಗೆ ನುಗ್ಗಿ ಅವರನ್ನು ನಿಂದಿಸಲು ಶುರುಮಾಡಿದರು. ನಂತರ ಅವರನ್ನು ಎಳೆದಾಡಿ ತಮ್ಮ ಸರ್ವೀಸ್​ ರಿವಾಲ್ವರ್​ಗಳನ್ನು ತೋರಿಸಿ ಬೆದರಿಸಿದರು. ಶಬ್ದ ಕೇಳಿ ಕಾರಿಡಾರಿನಲ್ಲಿದ್ದ ವಕೀಲರು ಮತ್ತು ಸಿಬ್ಬಂದಿ ಒಳಗೆ ಬಂದು ಆ ಪೊಲೀಸರನ್ನು ಥಳಿಸಿ, ನ್ಯಾಯಾಧೀಶರನ್ನು ರಕ್ಷಿಸಿದರು ಎನ್ನಲಾಗಿದೆ.
ಇದನ್ನೂ ಓದಿ:ವೆಲ್ಲೋರಿ​ನಲ್ಲಿ ಭಾರೀ ದುರಂತ: ಗೋಡೆ ಕುಸಿದು 9 ಜನರ ಸಾವು
ನ್ಯಾಯಾಧೀಶರ ದೂರಿನ ಮೇರೆಗೆ ಗುರುವಾರ ಸಂಜೆ ಈ ಬಗ್ಗೆ ವಿಚಾರಣೆ ನಡೆಸಿದ ಪಟ್ನಾ ಹೈಕೋರ್ಟ್​, ಇದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂಥ ಪ್ರಸಂಗ ಎಂದು ಅಭಿಪ್ರಾಯಪಟ್ಟಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಹಾಗೂ ಮಧುಬಾನಿ ಎಸ್ಪಿಗೆ ನೋಟೀಸ್ ಜಾರಿಗೊಳಿಸಿದೆ. ಬಿಹಾರ ಡಿಜಿಪಿ ಎಸ್​.ಕೆ.ಸಿಂಘಾಲ್​ ಅವರಿಗೆ ಈ ಬಗ್ಗೆ ಸೀಲ್ಡ್​​ ಕವರ್​ನಲ್ಲಿ ಸ್ಟೇಟಸ್​ ರಿಪೋರ್ಟ್​ ಸಲ್ಲಿಸಲು ಆದೇಶಿಸಿರುವ ಹೈಕೋರ್ಟ್​, ನವೆಂಬರ್​ 29 ರಂದು ನಡೆಯುವ ಮುಂದಿನ ವಿಚಾರಣೆಗೆ ಕೋರ್ಟ್​​ ಮುಂದೆ ಖುದ್ದು ಹಾಜರಾಗಲು ಸೂಚಿಸಿದೆ.
ಝಾಝರ್​ಪುರ ವಕೀಲರ ಸಂಘವು ಈ ಘಟನೆಯನ್ನು ಖಂಡಿಸಿದೆ. ಹಲ್ಲೆ ನಡೆಸಿದ ಪೊಲೀಸ್​ ಅಧಿಕಾರಿಗಳ ವಿರುದ್ಧ ಇತ್ತೀಚೆಗೆ ನ್ಯಾಯಾಧೀಶ ಅವಿನಾಶ್​ ಕುಮಾರ್​ ಆದೇಶವನ್ನು ಹೊರಡಿಸಿದ್ದರು. ಇದರಿಂದ ಕೋಪಗೊಂಡು ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.​(ಏಜೆನ್ಸೀಸ್)
VIDEO| ಹಳೇ ಡೈಲಾಗ್​ ನೆನಪಿಸಿ ರೈತರನ್ನು ಅಭಿನಂದಿಸಿದ ರಾಹುಲ್​ ಗಾಂಧಿ!

ಪಕ್ಕದ ಮನೆಗೆ ಹೋಗಿ ಅಮ್ಮನನ್ನು ಬೈದಂತೆ! ವೀರ್​ ದಾಸ್​​ ಭಾಷಣಕ್ಕೆ ಲೇಖಕನ ಅಸಮಾಧಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
