ದಿಂಡಿಗಲ್:ಕಸದ ತೊಟ್ಟಿಯಲ್ಲಿ 2 ಹೆಣ್ಣು ಭ್ರೂಣಗಳು ಪತ್ತೆಯಾಗಿರುವ ಘಟನೆ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ನಡೆದಿದೆ.ಇದನ್ನೂ ಓದಿ:ಚಲಿಸುತ್ತಿದ್ದ ರೈಲಿನಲ್ಲೇ ಗುಂಡಿನ ದಾಳಿ: ಹಿರಿಯ ಅಧಿಕಾರಿ ಸೇರಿದಂತೆ ನಾಲ್ವರು ಸಾವುಮೆಟ್ಟುಪಟ್ಟಿಯಲ್ಲಿರುವ ಶಾಲೆಯೊಂದರ ಬಳಿ ಇರುವ ದಿಂಡಿಗಲ್ ಕಾರ್ಪೊರೇಷನ್ ಕಸದ ತೊಟ್ಟಿಯಲ್ಲಿ ಈ ಭ್ರೂಣಗಳು ಪತ್ತೆಯಾಗಿದ್ದು, ಕಸದ ತೊಟ್ಟಿಯನ್ನು ಸಾರ್ವಜನಿಕರು ಬಳಸುತ್ತಿದ್ದರು. ಭಾನುವಾರ ಬೆಳಿಗ್ಗೆ, ನೈರ್ಮಲ್ಯ ಕಾರ್ಯಕರ್ತರು ಕಸವನ್ನು ತೆರವುಗೊಳಿಸಲು ಎಂದಿನಂತೆ ನಿರ್ದಿಷ್ಟ ಕಸದ ತೊಟ್ಟಿಯನ್ನು ಪರಿಶೀಲಿಸಿದ್ದು, ತಲೆಯಿಲ್ಲದ ಸರಿಯಾಗಿ ಬೆಳೆಯದ ಶಿಶುವನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.ಕೂಡಲೇ ಕಾರ್ಯಕರ್ತರು ದಿಂಡಿಗಲ್ ಟೌನ್ ಸೌತ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಭ್ರೂಣಗಳನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ದಿಂಡುಗಲ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿದ್ದಾರೆ. ಶಿಶುಗಳು ಒಂದೇ ತಾಯಿಯ ಹೊಟ್ಟೆಯದ್ದೇ ಎಂಬುದನ್ನು ಪರಿಶೀಲಿಸಲಾಗುತ್ತಿದ್ದು, ಇವುಗಳನ್ನು ಎಸೆದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 8 =
Remember me
