ಪ್ರಯಾಗರಾಜ್:ರೈಲಿನಲ್ಲಿ ಮದ್ಯ ಮಾರಾಟವಾಗುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಇಬ್ಬರು ರೈಲ್ವೆ ಟಿಟಿಇಗಳ ವಿರುದ್ಧ ತನಿಖೆ ನಡೆಸಿದ ವಿಜಿಲೆನ್ಸ್ ತಂಡವು, ದಾಳಿಯಲ್ಲಿ 11 ಬಾಟಲಿ ಮತ್ತು 1.38 ಲಕ್ಷ ರೂ. ನಗದು ಪತ್ತೆಹಚ್ಚಿದೆ.
ಇದನ್ನೂ ಓದಿ:ಅನಂತನಾಗ್‌ನಲ್ಲಿ ಮತ್ತೊಬ್ಬ ಯೋಧ ಹುತಾತ್ಮ; ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ, ಮುಂದುವರಿದ ಎನ್‌ಕೌಂಟರ್
ಭ್ರಷ್ಟಾಚಾರ ವಿರೋಧಿ ದಾಳಿಯ ವೇಳೆ ವಿಜಿಲೆನ್ಸ್ ತಂಡವು ಮದ್ಯದ ಬಾಟಲಿಗಳು ಮತ್ತು ನಗದು ಹಣವನ್ನು ಪತ್ತೆ ಮಾಡಿದ ನಂತರ ಪ್ರಯಾಗರಾಜ್‌ನ ಇಬ್ಬರು ರೈಲ್ವೆ ಟಿಟಿಇಗಳನ್ನು ಕೆಲಸದಿಂದ ಅಮಾನತುಗೊಳಿಸಿದೆ.
ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ ವಿಜಿಲೆನ್ಸ್ ಅಧಿಕಾರಿಗಳ ತಂಡ ದಾಳಿ ನಡೆಸಿದ ಕೆಲವು ದಿನಗಳ ನಂತರ ಟಿಟಿಇ ಆರ್‌.ಕೆ. ಯಾದವ್ ಮತ್ತು ರಾಮ್ ಲಖನ್ ಅವರನ್ನು ಅಮಾನತುಗೊಳಿಸಿದ್ದು, ಸದ್ಯ ವಿಜಿಲೆನ್ಸ್ ವರದಿ ಆಧರಿಸಿ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ:ಮತ್ತೊಂದು ನಿಫಾ ವೈರಸ್ ಪ್ರಕರಣ ಪತ್ತೆ, ಕೇರಳದಲ್ಲಿ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆ
ಇಬ್ಬರೂ ಟಿಟಿಇಗಳನ್ನು ರೈಲಿನಲ್ಲಿ ನಿಯೋಜಿಸಲಾಗಿತ್ತು. ಟಿಕೆಟ್ ಚೆಕ್ ಮಾಡುವ ಅಧಿಕಾರಿಗಳ ವಿರುದ್ಧ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಈ ಕ್ರಮ ಕೈಗೊಂಡಿದೆ. ವಿಜಿಲೆನ್ಸ್ ತಂಡವು ಪ್ರಯಾಗರಾಜ್‌ನಲ್ಲಿ ಅಧಿಕಾರಿಗಳ ವಸ್ತುಗಳನ್ನು ಪರಿಶೀಲಿಸಿದಾಗ 11 ಮದ್ಯದ ಬಾಟಲಿ ಮತ್ತು 1,38,000 ರೂ. ಹಣವನ್ನು ಪತ್ತೆಹಚ್ಚಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).
ಒಂದೇ ಕುಟುಂಬದ ಮೂವರ ಹತ್ಯೆ!; ಮನೆಗಳಿಗೆ ಬೆಂಕಿಯಿಟ್ಟ ಗ್ರಾಮಸ್ಥರು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − four =
Remember me
