ಬುಲಂದ್​ಶಹರ್​ (ಉತ್ತರ ಪ್ರದೇಶ):ಮಹಾರಾಷ್ಟ್ರದ ಪಾಲ್ಗರ್​ ಜಿಲ್ಲೆಯಲ್ಲಿ ಈಚೆಗೆ ನಡೆದ ಇಬ್ಬರು ಸಾಧುಗಳ ಭೀಕರ ಹತ್ಯೆಯ ಬಗ್ಗೆ ತನಿಖೆ ಇನ್ನೂ ಪ್ರಗತಿಯಲ್ಲಿ ಇರುವಾಗಲೇ, ಉತ್ತರ ಪ್ರದೇಶದ ಬುಲಂದ್​ಶಹರ್​ನಲ್ಲಿಯೂ ಇಬ್ಬರು ಸಾಧುಗಳು ಕೊಲೆ ನಡೆದಿದೆ.ಪಾಗೋನಾ ಗ್ರಾಮದ ಶಿವನ ದೇವಾಲಯದಲ್ಲಿ ಈ ಕೊಲೆ ನಡೆದಿದೆ. ಇಂದು ಬೆಳಗ್ಗೆ ದೇಗುಲಕ್ಕೆ ಜನರು ತೆರಳಿದಾಗ ಸಾಧುಗಳ ರಕ್ತಸಿಕ್ತ ದೇಹವನ್ನು ಜನರು ನೋಡಿದ್ದು, ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಮೃತರನ್ನು ಜಗನ್​ದಾಸ್​ (55) ಮತ್ತು ಸೇವಾದಾಸ್​ (35) ಎಂದು ಗುರುತಿಸಲಾಗಿದೆ.ಪಾಲ್ಗರ್​ನಲ್ಲಿ ಇಬ್ಬರು ಸಾಧುಗಳು ಮತ್ತು ಅವರ ಚಾಲಕನನ್ನು ಜನರು ಭೀಕರವಾಗಿ ಹತ್ಯೆ ಮಾಡಿದ್ದರು. ಇವರನ್ನು ಮಕ್ಕಳ ಕಳ್ಳರೆಂದು ಭಾವಿಸಿ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದ್ದರೂ ಇದರ ಸತ್ಯಾಂಶ ಬೇರೆಯದ್ದೇ ಇದೆ ಎಂಬ ಬಗ್ಗೆ ಗುಮಾನಿಯಿಂದಾಗಿ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಪೊಲೀಸರ ಎದುರೇ ಹೊಡೆದು ಈ ಸಾಧುಗಳ ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದಲ್ಲಿಯೂ ಸಾಧುಗಳ ಹತ್ಯೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.ಘಟನೆಗೆ ಸಂಬಂಧಸದಂತೆ ಒಬ್ಬನ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ವ್ಯಕ್ತಿ ಸಾಧುಗಳ ಜತೆ ಜಗಳವಾಡುತ್ತಿದ್ದುದನ್ನು ಜನರು ನೋಡಿದ್ದಾರೆ ಎನ್ನಲಾಗಿದ್ದು, ಅವರೇ ಈ ವ್ಯಕ್ತಿಯನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ.ಪೊಲೀಸರ ಪ್ರಕಾರ, ಆರೋಪಿಯು ಕೆಲ ದಿನಗಳ ಹಿಂದೆ ಸಾಧುಗಳ ಬಳಿಯಲ್ಲಿದ್ದ ಚಿಮಟಾ (ಗೆಜ್ಜೆಯಿಂದ ಕೂಡಿರುವ ಭಜನೆ ಮಾಡಲು ಉಪಯೋಗಿಸುವ ಇಕ್ಕಳ ರೀತಿಯ ಸಾಧನ) ಕದ್ದೊಯ್ದಿದ್ದ. ಅದನ್ನು ವಾಪಸ್​ ಮಾಡುವಂತೆ ಸಾಧುಗಳು ಕೇಳಿದಾಗ ಇಬ್ಬರ ನಡುವೆ ಜಗಳವಾಗಿದೆ ಎನ್ನಲಾಗಿದೆ.ಆದರೆ ಈ ಬಗ್ಗೆ ಸತ್ಯಾಸತ್ಯತೆ ಹೊರಬರಬೇಕಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪೊಲೀಸರಿಗೆ ನಿರ್ದೇಶಿಸಿದ್ದಾರೆ.(ಏಜೆನ್ಸೀಸ್​)
Bodies of two priests found at a temple in Bulandshahr. Police investigation underway. Post-mortem reports awaited.pic.twitter.com/SsH7hMrrSv
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
