ಶ್ರೀನಗರ:ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ರಾಂಪುರ್​ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ಕದಮ ವಿರಾಮ ಉಲ್ಲಂಘಿಸಿ ನಿರಂತರವಾಗಿ ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರು ಯೋಧರು ಇಂದು ಹುತಾತ್ಮರಾಗಿದ್ದಾರೆ. ಮತ್ತೊರ್ವ ಯೋಧ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ಮುಂಜಾನೆ 3:30ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಪಾಪಿ ಪಾಕ್​ ಸೇನೆ ಕದಮ ವಿರಾಮ ಉಲ್ಲಂಘಿಸಿದೆ. ಕರೊನಾ ಲಾಕ್​ಡೌನ್​ನಂತಹ ವಿಷಮ ಸ್ಥಿತಿಯಲ್ಲೂ ತನ್ನ ನರಿಬುದ್ಧಿ ಬಿಡದ ಪಾಕ್​ ಈಗಾಗಲೇ ಸಾಕಷ್ಟು ಬಾರಿ ಕದಮ ವಿರಾಮ ಉಲ್ಲಂಘನೆ ಮಾಡಿ ವಿಷ ಕಾರಿದೆ. ಇದಕ್ಕೆ ಭಾರತೀಯ ಸೇನೆಯು ಕೂಡ ತಕ್ಕ ಪ್ರತ್ಯುತ್ತರ ನೀಡುತ್ತಾ ಬಂದಿದೆ.
ಇದನ್ನೂ ಓದಿ:ಮೂರು ವಾರಗಳಿಂದ ಕಾಣೆಯಾಗಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ದಿಢೀರ್​ ಪ್ರತ್ಯಕ್ಷ: ಏನಾಗಿತ್ತು ಕಿಮ್​ಗೆ?
ಮೇ 1ರ ಬೆಳಗ್ಗೆ 3:30ರ ಸುಮಾರಿಗೆ ಬಾರಾಮುಲ್ಲಾ ಜಿಲ್ಲೆಯ ರಾಂಪುರ್​​ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿನ ನಡೆಸಿದೆ, ಇದಕ್ಕೆ ನಮ್ಮ ಸೇನೆ ಕೂಡ ತಕ್ಕ ಉತ್ತರ ನೀಡಿದೆ ಎಂದು ಭದ್ರತಾ ಪಡೆ ವಕ್ತಾರ ಕರ್ನಲ್​ ರಾಜೇಶ್​ ಕಲಿಯಾ ಹೇಳಿಕೆ ನೀಡಿದ್ದಾರೆ.
ಏಪ್ರಿಲ್​ 30ರಲ್ಲೂ ಸಹ ಪಾಕ್​ ಅಪ್ರಚೋದಿತ ಕದಮ ವಿರಾಮ ಉಲ್ಲಂಘನೆ ಮಾಡಿ, ಪೂಂಚ್​ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಗುಂಡಿನ ದಾಳಿ ನಡೆಸಿದೆ. ಸಣ್ಣ ಆಯುಧಗಳಿಂದ ಫೈರಿಂಗ್​ ಮಾಡುತ್ತಿರುವುದಲ್ಲದೇ ಸಣ್ಣ ಪಿರಂಗಿಗಳಿಂದಲೂ ದಾಳಿ ಮಾಡುವ ಯತ್ನಕ್ಕೆ ಪಾಕ್​ ಕೈ ಹಾಕಿದೆ. ಮೊದಲೇ ಆರ್ಥಿಕವಾಗಿ ದಿವಾಳಿ ಆಗಿರುವ ಪಾಕ್​ಗೆ ಕರೊನಾ ಮತ್ತಷ್ಟು ಬಲವಾದ ಹೊಡೆತ ನೀಡಿದರೂ ಸಹ ತನ್ನ ಕುಂತಂತ್ರ ಬುದ್ಧಿಯನ್ನು ನಿಲ್ಲಿಸದಿರುವುದು ಆ ದೇಶ ದುರಾದೃಷ್ಟವಾಗಿದೆ.(ಏಜೆನ್ಸೀಸ್​)
ಇದನ್ನೂ ಓದಿ:ಸುಳ್ಳು ಹೇಳಿ ಬಾಯ್​ಫ್ರೆಂಡ್​ ನೋಡಲು ಹೋದ ಕೇರಳ ಬ್ಯೂಟಿಷಿಯನ್ ದುರಂತ ಅಂತ್ಯವಾಗಿದ್ದು ಹೇಗೆ?​
VIDEO| ಇಡೀ ಜಿಂಕೆಯ ದೇಹವನ್ನೇ ಗುಳುಂ ಸ್ವಾಹ ಮಾಡಿದ ದೈತ್ಯ ಹೆಬ್ಬಾವು: ರೋಚಕ ವಿಡಿಯೋ ವೈರಲ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − six =
Remember me
