ಕೋಟಾ:ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು ಕೋಟಾದಲ್ಲಿ ವಾಸಿಸುತ್ತಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಇಬ್ಬರು ಹದಿಹರೆಯದವರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೂಲಕ ಕೋಚಿಂಗ್‍ಗೆ ದೇಶಾದ್ಯಂತ ಹೆಸರುವಾಸಿಯಾದ ಪಟ್ಟಣದಲ್ಲಿ ಈ ವರ್ಷ ಸಾವನ್ನಪ್ಪಿದ ವಿದ್ಯಾರ್ಥಿಗಳ ಸಂಖ್ಯೆ 23ಕ್ಕೆ ಏರಿದೆ.
2015ರಲ್ಲಿ ಆಡಳಿತವು ಆತ್ಮಹತ್ಯೆ ಮಾಡಿಕೊಂಡ ಕಾಲೇಜು ಆಕಾಂಕ್ಷಿಗಳ ದಾಖಲೆಗಳನ್ನು ಸಂಗ್ರಹಿಸಲು ಪ್ರಾರಂಭಿಸಿದಾಗಿನಿಂದ ಈ ಸಂಖ್ಯೆ ಹೆಚ್ಚಾಗಿದೆ. 23 ಸಾವುಗಳಲ್ಲಿ ಆರು ಸಾವುಗಳು ಆಗಸ್ಟ್ಅಲ್ಲೇ ಸಂಭವಿಸಿವೆ. ಎರಡು ತಿಂಗಳವರೆಗೆ ಯಾವುದೇ ಪರೀಕ್ಷೆಗಳನ್ನು ನಡೆಸದಂತೆ ಕೋಚಿಂಗ್ ಸಂಸ್ಥೆಗಳಿಗೆ ನಿರ್ದೇಶನ ನೀಡಲು ಆಡಳಿತವು ಭಾನುವಾರ ಆದೇಶವನ್ನು ಹೊರಡಿಸಿದೆ.
ಇದನ್ನೂ ಓದಿ:ಕೋಚಿಂಗ್​ ಸೆಂಟರ್​ ಶಿಕ್ಷಕನಿಗೆ ನಡುರಸ್ತೆಯಲ್ಲೇ ಇರಿದು ಪೊಲೀಸರಿಗೆ ಶರಣಾದ ವಿದ್ಯಾರ್ಥಿ..!
ಭಾನುವಾರ ಮಹಾರಾಷ್ಟ್ರದ 16 ವರ್ಷದ ಬಾಲಕನೊಬ್ಬ ವಿಜ್ಞಾನ್ ನಗರ ಪ್ರದೇಶದಲ್ಲಿರುವ ತನ್ನ ಕೋಚಿಂಗ್ ಇನ್ಸ್ಟಿಟ್ಯೂಟ್ನ ಆರನೇ ಮಹಡಿಯಿಂದ ಜಿಗಿದಿದ್ದಾನೆ. “ಮಧ್ಯಾಹ್ನ ನಿಗದಿತ ಸಾಪ್ತಾಹಿಕ ಪರೀಕ್ಷೆಗೆ ಹಾಜರಾದ ನಂತರ ಬಾಲಕ, ತಾನು ಓದುತ್ತಿದ್ದ ಕೋಚಿಂಗ್ ಸಂಸ್ಥೆಯ ಆರನೇ  ಮಹಡಿಯಿಂದ ಜಿಗಿದಿದ್ದಾರೆ” ಎಂದು ಸರ್ಕಲ್ ಆಫೀಸರ್ ಧರಂ ವೀರ್ ಸಿಂಗ್ ಹೇಳಿದ್ದಾರೆ.
ಆರು ಗಂಟೆಗಳ ನಂತರ, ಬಿಹಾರ ಮೂಲದ 18 ವರ್ಷದ ಯುವಕ ತನ್ನ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಿಹಾರ ಮೂಲದ ಯುವಕ ತನ್ನ ಸಹೋದರಿ ಮತ್ತು ಸೋದರ ಸಂಬಂಧಿಯೊಂದಿಗೆ ಕುನಾಡಿ ಪ್ರದೇಶದ ಬಾಡಿಗೆ ಅಪಾರ್ಟ್ಮೆಂಟ್‍ನಲ್ಲಿ ವಾಸಿಸುತ್ತಿದ್ದ. ಪದೇ ಪದೇ ಬಾಗಿಲು ಬಡಿದಾಗ ಅವರು ಪ್ರತಿಕ್ರಿಯಿಸದಿದ್ದಾಗ ಎಲ್ಲರೂ ಸೇರಿ ಬಾಗಿಲು ಒಡೆದಿದ್ದಾರೆ. ಆಗ ಯುವಕ ತಮ್ಮ ಕೋಣೆಯಲ್ಲಿ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಕುನಾಡಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಗಂಗಾ ಸಹಾಯ್ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ:Success Story: ಕೋಚಿಂಗ್ ಹೋಗಲೇ ಇಲ್ಲೆ… ಆದ್ರೂ ಐಎಎಸ್ ಪಾಸ್; ಏನಿದರ‌ ಗುಟ್ಟು..?
ಇಬ್ಬರೂ ವಿದ್ಯಾರ್ಥಿಗಳು ಪದವಿಪೂರ್ವ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ನೀಟ್‍ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. “ಎರಡೂ ಪ್ರಕರಣಗಳಲ್ಲಿ ಯಾವುದೇ ಡೆತ್‍ ನೋಟ್ ಕಂಡುಬಂದಿಲ್ಲ. ಪ್ರಾಥಮಿಕ ವರದಿಯು ಯಾವುದೇ ನಡವಳಿಕೆಯ ಬದಲಾವಣೆಗಳನ್ನು ಸೂಚಿಸಿಲ್ಲ” ಎಂದು ಈ ವಿಷಯದ ಬಗ್ಗೆ ತಿಳಿದಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂದಿನ ಎರಡು ತಿಂಗಳವರೆಗೆ ಯಾವುದೇ ಪರೀಕ್ಷೆಗಳನ್ನು ನಡೆಸದಂತೆ ಕೋಚಿಂಗ್ ಕೇಂದ್ರಗಳಿಗೆ ನಿರ್ದೇಶನ ನೀಡಿ ಆದೇಶ ಹೊರಡಿಸಿದ್ದೇನೆ ಎಂದು ಜಿಲ್ಲಾಧಿಕಾರಿ ಓಂ ಪ್ರಕಾಶ್ ಬುಂಕರ್ ಭಾನುವಾರ ತಡರಾತ್ರಿ ತಿಳಿಸಿದ್ದಾರೆ.
“ಪೋಷಕರು ಮತ್ತು ಕುಟುಂಬಸ್ಥರು ಜಾಗರೂಕರಾಗಿರಬೇಕು. ಮಕ್ಕಳು ಕುಟುಂಬ ಸದಸ್ಯರೊಂದಿಗೆ ವಾಸಿಸುತ್ತಿದ್ದರೂ, ಎಚ್ಚರವಹಿಸಬೇಕಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಇಬ್ಬರೂ ತಮ್ಮ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ತೋರಿಸಿರಲಿಲ್ಲ. ಇಂತಹ ಸಂದರ್ಭದಲ್ಲಿ, ಖಿನ್ನತೆಯಿಂದ ಬಳಲುತ್ತಿರುವ ಅಥವಾ ಆತ್ಮಹತ್ಯೆ ಪ್ರವೃತ್ತಿಯನ್ನು ತೋರಿಸುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸುವುದು ಹೆಚ್ಚು ಕಷ್ಟ. ಆದಾಗ್ಯೂ, ಸನ್ನಿವೇಶದಲ್ಲಿ ಬದಲಾವಣೆಗಳನ್ನು ಮಾಡಲು ಜಿಲ್ಲಾಡಳಿತವು ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ” ಎಂದು ಬುಂಕರ್ ಹೇಳಿದರು.
ಇದನ್ನೂ ಓದಿ:ಡಕೋಟಾ ಸ್ಥಿತಿಗೆ ತಲುಪಿದ ಫೆರಾರಿ ಕಾರ್ ಮಾರಾಟವಾಗಿದ್ದು ಬರೋಬ್ಬರಿ 15 ಕೋಟಿಗೆ..!
ಒತ್ತಡದಲ್ಲಿರುವವರು ಅಥವಾ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವವರು ಅದನ್ನು ತೋರಿಸಲು ಬಿಡುವುದಿಲ್ಲ. ಕೋಟಾದ ಆಡಳಿತವು ಸಮಸ್ಯೆಯನ್ನು ಪರಿಹರಿಸಲು ಗೊಂದಲಮಯ ವಿಧಾನಗಳನ್ನು ಅನುಸರಿಸಿದೆ, ಈ ತಿಂಗಳ ಆರಂಭದಲ್ಲಿ, ಹಾಸ್ಟೆಲ್ಗಳಿಗೆ ನೇಣು ಬಿಗಿದುಕೊಳ್ಳುವ ಮೂಲಕ ನಡೆಯುವ ಆತ್ಮಹತ್ಯೆಗಳನ್ನು ತಡೆಗಟ್ಟಲು ಸೀಲಿಂಗ್ ಫ್ಯಾನ್ಗಳನ್ನು ಅಳವಡಿಸಲು ಸ್ಪ್ರಿಂಗ್-ಲೋಡ್ ರಾಡ್ ಅನ್ನು ಬಳಸುವುದನ್ನು ಕಡ್ಡಾಯಗೊಳಿಸಿದೆ.
ಕೋಟಾ ಭಾರತದ ಪರೀಕ್ಷಾ-ಸಿದ್ಧತಾ ವ್ಯವಹಾರದ ಕೇಂದ್ರವಾಗಿದ್ದು, ವಾರ್ಷಿಕವಾಗಿ 10,000 ಕೋಟಿ ರೂ.ಗಳ ವ್ಯವಹಾರ ನಡೆಯುತ್ತದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. ಹತ್ತನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ದೇಶಾದ್ಯಂತದ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಈ ಮೂಲಕ ವಸತಿ ಪರೀಕ್ಷಾ-ಸಿದ್ಧತಾ ಸಂಸ್ಥೆಗಳಲ್ಲಿ ನೋಂದಾಯಿಸಿಕೊಳ್ಳುತ್ತಾರೆ.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − 3 =
Remember me
