ನವದೆಹಲಿ:ಭಾರತ- ಪಾಕ್​ ನಡುವಿನ ಗಡಿ ನಿಯಂತ್ರಣ ರೇಖೆಯ 100 ಮೀಟರ್​ ದೂರದಲ್ಲಿ ಭಾರತೀಯ ಯೋಧರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ.ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಗೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದ ಇಬ್ಬರನ್ನು ಸಿಖ್​ ಲೈಟ್​ ಇನ್​ಫೆಂಟ್ರಿ ಯೋಧರು ಮಧ್ಯರಾತ್ರಿ ಹತ್ಯೆ ಮಾಡಲಾಗಿದೆ ಎಂದು ಸೇನಾಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ;ಪಾಕಿಸ್ತಾನದ ಪೈಲಟ್​ಗಳ ಮೇಲೂ ಅಮೆರಿಕಕ್ಕೆ ಇಲ್ಲ ನಂಬಿಕೆ; ವಿಮಾನ ಸಂಚಾರಕ್ಕಿದ್ದ ಪರವಾನಗಿ ರದ್ದು
ಇದೇ ವೇಳೆ, ಚೀನಾ ನಿರ್ಮಿತ ಡ್ರೋನ್​ಗಳನ್ನು ಬಳಸಿ ಭಾರತಕ್ಕೆ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಪಾಕಿಸ್ತಾನ ಕಳ್ಳಸಾಗಣೆ ಮಾಡುವುದನ್ನು ತಡೆಯಲು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಡ್ರೋನ್​ ನಿರೋಧಕ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ಸೇನೆ ಮಾಹಿತಿ ನೀಡಿದೆ.
ಹತ್ಯೇಗೀಡಾದವರ ಪೈಕಿ ಒಬ್ಬನನ್ನು ಇದ್ರಿಸ್​ ಅಹ್ಮದ್​ ಭಟ್​ ಎಂದು ಗುರತಿಸಲಾಗಿದೆ. ಇವರು ಲಷ್ಕರ್​ ಗುಂಪಿಗೆ ಸೇರಿದವರೆಂದು ಅಂದಾಜಿಸಲಾಗಿದೆ.
ಇದನ್ನೂ ಓದಿ;ಮಸೀದಿಯಾಗಿ ಮಾರ್ಪಡುತ್ತಿದೆ 6ನೇ ಶತಮಾನದ ವಿಶ್ವ ಪ್ರಸಿದ್ಧ ವಸ್ತು ಸಂಗ್ರಹಾಲಯ…!
ಎ.ಕೆ-47 ಬಂದೂಕು, ನೂರಾರು ಬುಲ್ಲೆಟ್​ಗಳು, ಚೀನಾ ನಿರ್ಮಿತ ಪಿಸ್ತೂಲ್​, ಪಾಕ್​ನ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ನಿರ್ಮಿಸಲಾದ ನಾಲ್ಕು ಗ್ರೆನೇಡ್​ಗಳು ಸಿಕ್ಕಿವೆ. ಇದು ಪಾಕ್​ ಕೈವಾಡಕ್ಕೆ ಸಾಕ್ಷಿಯಾಗಿವೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂಥದ್ದೇ ಗ್ರೆನೇಡ್​ಗಳು ಭಾರತದ ಸಂಸತ್​ ಭವನದ ಮೇಲೆ ದಾಳಿ ಮಾಡಿದ್ದ ಜೈಷ್​ ಉಗ್ರರ ಬಳಿಯೂ ದೊರಕಿದ್ದವು. 20 ಮೀಟರ್​ ಸುತ್ತಲಿನ ಪ್ರದೇಶದಲ್ಲಿರುವ ಎಲ್ಲರನ್ನು ಕೊಲ್ಲುವ ಸಾಮರ್ಥ್ಯ ಈ ಗ್ರೆನೇಡ್​ಗಳಿಗಿದೆ.
ಸೋಮವಾರದಿಂದ ದೇಶದ 12 ಕಡೆಗಳಲ್ಲಿ ಕೋವಿಡ್​ ರೋಗಿಗಳಿಗೆ ದೇಶೀಯ ಕರೊನಾ ಲಸಿಕೆ ಪ್ರಯೋಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − sixteen =
Remember me
