ತಿರುವನಂತಪ್ಪುರಂ:ದೇವರ ಉತ್ಸವದಲ್ಲಿ ಪಾಲ್ಗೊಂಡಿದ್ದ ಎರಡು ಆನೆಗಳು ಮೆರವಣಿಗೆಯ ಮಧ್ಯದಲ್ಲೇ ಕಾದಾಡಿರುವ ಘಟನೆ ಕೇರಳದ ಆರಟ್ಟುಪುಳ ದೇವಸ್ಥಾನದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ವೈರಲ್​ ಆಗಿರುವ ವಿಡಿಯೋದಲ್ಲಿ ಆರಟ್ಟುಪುಳ ದೇವಸ್ಥಾನದಲ್ಲಿ ಆರಾಟ್ ಆಚರಣೆಗಾಗಿ ಎರಡು ಆನೆಗಳನ್ನು ಅಲಂಕರಿಸಲಾಗಿದೆ. ಈ ವೇಳೆ ಆನೆಯೊಂದು ಇದ್ದಕ್ಕಿದ್ದಂತೆ ಗೀಳಿಡಲು ಶುರು ಮಾಡಿದ್ದು, ಏಕಾಏಕಿ ಮತ್ತೊಂದು ಆನೆಯ ಮೇಲೆ ದಾಳಿ ಮಾಡಿದೆ. ನೋಡ ನೋಡುತ್ತಿದ್ದಂತೆ ಎರಡು ಆನೆಗಳು ಕಾದಾಡಲು ಶುರು ಮಾಡುತ್ತವೆ. ಇದನ್ನು ನೋಡಿದ ಜನರು ದಿಕ್ಕಾಪಾಲಾಗಿ ಓಡುತ್ತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ആറാട്ടുപുഴ പൂരത്തിനിടെ ആനകൾ തമ്മിൽ കൊമ്പുകോർത്തുpic.twitter.com/rExJ8Bdd2G
ಇದನ್ನೂ ಓದಿ:ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದ ಸ್ಟಾರ್​ ನಟನ ದಾಂಪತ್ಯಕ್ಕೆ 40ರ ಸಂಭ್ರಮ; ಹೇಗಿತ್ತು ನೋಡಿ ಜಗ್ಗೇಶ್​-ಪರಿಮಳ ಪಾಲಿನ ಆ ವಿಶೇಷ ದಿನ
ಆರಟ್ಟುಪುಳ ದೇವಸ್ಥಾನದಲ್ಲಿ ಆರಾಟ್ ಆಚರಣೆಯಲ್ಲಿ ಪಾಲ್ಗೊಂಡಿದ್ದ ಆನೆಗಳನ್ನು ರವಿಕೃಷ್ಣನ್​ ಹಾಗೂ ಶ್ರೀಕೃಷ್ಣನ್​ ಎಂದು ಗುರುತಿಸಲಾಗಿದ್ದು, ಎರಡು ಆನೆಗಳನ್ನು ಸೆರೆಹಿಡಿಯಲಾಗಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಈ ಎರಡು ಆನೆಗಳನ್ನು ಗುರುವಾಯೂರಿನಿಧಂ ಕರೆತರಲಾಗಿತ್ತು ಎಂದು ತಿಳಿದು ಬಂದಿದೆ.
ಈ ವೇಳೆ ಇದನ್ನು ಗಮನಿಸಿದ ಆನೆ ದಳದ ಸದಸ್ಯರ ತಂಡವು ಕೂಡಲೇ ಕಾದಾಡುತ್ತಿರುವ ಎರಡು ಆನೆಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಾರೆ. ಆದರೆ, ಇದಕ್ಕೂ ಬಗ್ಗದ ಆನೆಗಳು ದೇವಾಲಯದ ಆವರಣದಿಂದ ಓಡಿ ಹೋಗುತ್ತವೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 4 =
Remember me
