ನವದೆಹಲಿ:ದೇಶದಲ್ಲಿ ಕರೊನಾ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬಾರದ ಕಾರಣ ಇನ್ನೆರಡು ವಾರ (ಮೇ 17ರವರೆಗೆ)ಲಾಕ್​ಡೌನ್ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಜತೆಗೆ ಪರಿಷ್ಕೃತ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ. 2005ರ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಲಾಕ್​ಡೌನ್ ಮುಂದುವರಿಸಲಾಗಿದ್ದು, ಇದು ಮೇ 4ರಿಂದ ಜಾರಿಗೆ ಬರಲಿದೆ.
ಕೆಂಪು ವಲಯದಲ್ಲಿ ಬರುವ ಜಿಲ್ಲೆಗಳಲ್ಲಿ ಜಾರಿಯಲ್ಲಿರುವ ನಿರ್ಬಂಧದಲ್ಲಿ ಯಾವ ಸಡಿಲಿಕೆಯೂ ಇಲ್ಲ. ಆದರೆ, ಕಿತ್ತಳೆ ಮತ್ತು ಹಸಿರು ವಲಯದ ವ್ಯಾಪ್ತಿಗೆ ಬರುವ ಜಿಲ್ಲೆಗಳಲ್ಲಿ ಕೇಂದ್ರದ ಮಾರ್ಗಸೂಚಿಯ ಷರತ್ತಿಗೆ ಒಳಪಟ್ಟು ಲಾಕ್​ಡೌನ್ ಸಡಿಲಗೊಳಿಸುವ ನಿರ್ಧಾರವನ್ನು ರಾಜ್ಯ ಸರ್ಕಾರಗಳು ಕೈಗೊಳ್ಳಬಹುದು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಏ.30ರಂದು ಹೊರಡಿಸಿರುವ ಮಾರ್ಗದರ್ಶಿಯಲ್ಲಿ ವಲಯ ವಿಂಗಡನೆಯನ್ನು ಸ್ಪಷ್ಟಪಡಿಸಲಾಗಿದೆ. ಪ್ರತಿ ವಾರದ ಅಂಕಿಅಂಶದ ಆಧಾರದ ಮೇಲೆ ಜಿಲ್ಲೆಗಳನ್ನು ವಲಯಗಳಲ್ಲಿ ಪರಿಷ್ಕರಿಸಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ವಲಯ ವಿಂಗಡಣೆ ಮಾನದಂಡ:ಹಸಿರು ವಲಯ- ಸೋಂಕಿತ ಪ್ರಕರಣಗಳು ಶೂನ್ಯವಿರುವಂತಹ ಅಥವಾ 21 ದಿನಗಳಿಂದ ಯಾವುದೇ ಕೋವಿಡ್-19 ದೃಢಪಡದ ಜಿಲ್ಲೆಗಳು
ಕಿತ್ತಳೆ ವಲಯ- ಹಸಿರು ಮತ್ತು ಕೆಂಪು ವಲಯಕ್ಕೆ ಒಳಪಡದ ಎಲ್ಲ ಜಿಲ್ಲೆಗಳು, ಸೋಂಕು ತೀವ್ರವಿರುವ ಪ್ರದೇಶಗಳನ್ನು ಗಂಭೀರ ಸ್ವರೂಪದ ಸ್ಥಳವೆಂದು (ಕಂಟೇನ್​ವೆುಂಟ್) ಗುರುತಿಸಿ ಸಂಪೂರ್ಣ ಪ್ರತಿಬಂಧಕ (ಸೀಲ್​ಡೌನ್) ಮಾಡಬಹುದು.
ಕೆಂಪು ವಲಯ- ಒಟ್ಟಾರೆ ಸೋಂಕಿತ ಪ್ರಕರಣ, ಸೋಂಕು ದ್ವಿಗುಣಗೊಳ್ಳುವಿಕೆಯ ಪ್ರಮಾಣ, ಪರೀಕ್ಷೆಗೆ ಕಳುಹಿಸಲಾದ ಮಾದರಿಗಳ ಸಂಖ್ಯೆ ಮತ್ತು ನಿಗಾ ತಂಡಗಳು ನೀಡುವ ಮಾಹಿತಿ ಆಧರಿಸಿದ ಜಿಲ್ಲೆಗಳು. ಕೆಂಪು ವಲಯದಲ್ಲೇ ಸೋಂಕು ತೀವ್ರವಾಗಿರುವ ಪ್ರದೇಶಗಳನ್ನು ಕಂಟೇನ್​ವೆುಂಟ್ ಆಗಿ ಗುರುತಿಸಿ ಸೀಲ್​ಡೌನ್ ಮಾಡಬಹುದು.
ಕಂಟೇನ್​ವೆುಂಟ್ ರಹಿತ ಕಿತ್ತಳೆ ವಲಯ:ಅಂತರ್ ಜಿಲ್ಲಾ- ಜಿಲ್ಲೆಯೊಳಗೆ ಸಾರ್ವಜನಿಕ ಬಸ್ ಸೇವೆ ಇಲ್ಲ
ಚತುಷ್ಚಕ್ರ ವಾಹನಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಜಿಲ್ಲೆಯೊಳಗೆ ಪ್ರಯಾಣ ಮಾಡಬಹುದು
ಕ್ಷೌರದಂಗಡಿ, ಸ್ಪಾ, ಮಸಾಜ್ ಸೆಂಟರ್ ಎಲ್ಲರಿಗೂ ನಿಷಿದ್ಧ
ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಯಾನ, ಅಂತರರಾಜ್ಯ ಸಾರ್ವಜನಿಕ ಸಾರಿಗೆ ಬಸ್ ಸೇವೆ, ರೈಲು ಮತ್ತು ಮೆಟ್ರೋ ರೈಲು ಸೇವೆ.
ಅಂತರರಾಜ್ಯ ಜನರ ಓಡಾಟ, ಎಲ್ಲ ರೀತಿ ಶೈಕ್ಷಣಿಕ ಸಂಸ್ಥೆಗಳು, ತರಬೇತಿ ಕೇಂದ್ರಗಳು, ಕೋಚಿಂಗ್ ಸೆಂಟರ್ ಹೋಟೆಲ್, ಲಾಡ್ಜ್, ರೆಸಾರ್ಟ್, ಹೋಂ ಸ್ಟೇ ಸಿನಿಮಾ ಮಂದಿರ, ಶಾಪಿಂಗ್ ಮಾಲ್, ಜಿಮ್ ಕ್ರೀಡಾ ಸಂಕೀರ್ಣ, ಈಜುಕೊಳ, ಮನರಂಜನಾ ಸ್ಥಳ, ರಂಗಮಂದಿರ, ಬಾರ್, ಸಭಾಂಗಣಗಳು, ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನಾ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ವಿುಕ ಕಾರ್ಯಕ್ರಮ ಮತ್ತು ಮೆರವಣಿಗೆ ಎಲ್ಲ ಧರ್ಮಗಳ ಪ್ರಾರ್ಥನಾ ಮಂದಿರ/ಸ್ಥಳಗಳು.
ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಜನರ ಅನಗತ್ಯ ಓಡಾಟ ನಿರ್ಬಂಧ, ಸ್ಥಳೀಯ ಆಡಳಿತಕ್ಕೆ ನಿಷೇಧಾಜ್ಞೆ ಅಥವಾ ಕರ್ಫ್ಯೂ ಜಾರಿಗೆ ಅವಕಾಶ, 65 ವರ್ಷ ಮೇಲ್ಪಟ್ಟವರು, ಅಸ್ವಸ್ಥರು, ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು ಅನಗತ್ಯವಾಗಿ ಮನೆಯಿಂದ ಹೊರಬರುವಂತಿಲ್ಲ.
ಮದ್ಯ ಪ್ರಿಯರಿಗೆ ಕಿಕ್
ಲಾಕ್​ಡೌನ್ ವಿಸ್ತರಣೆ ನಡುವೆ ಮದ್ಯಪ್ರಿಯರಿಗೆ ಸಿಹಿ ಸುದ್ದಿ ನೀಡಿರುವ ಕೇಂದ್ರ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಆದರೆ, ಯಾವ ಜಿಲ್ಲೆಗಳಲ್ಲಿ ಮಾರಾಟಕ್ಕೆ ಅನುಮತಿ ನೀಡಬೇಕು ಎಂಬುದರ ಬಗ್ಗೆ ಸ್ಪಷ್ಟವಾಗಿ ಹೇಳದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶನಿವಾರ ಸಭೆ ನಡೆಸಿ ಅಂತಿಮ ಆದೇಶ ಹೊರಡಿಸಲಿದೆ.
ಕರೊನಾ ಸೋಂಕಿನ ಭೀತಿಯಿಂದಾಗಿ ದೇಶಾದ್ಯಂತ ಮಾಡಲಾಗಿರುವ ಲಾಕ್​ಡೌನ್ ಮೇ 17ರವರೆಗೆ ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕರೊನಾ ಪ್ರಕರಣಗಳನ್ನಾಧರಿಸಿ ಮಾಡಲಾಗಿರುವ ವಲಯಗಳಲ್ಲಿ ಕೈಗಾರಿಕೆ, ವ್ಯಾಪಾರ ಸೇರಿ ಇನ್ನಿತರ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಆದರೆ, ಯಾವುದೇ ವಲಯ ಉಲ್ಲೇಖಿಸದೆ ಮದ್ಯ ಮಾರಟಕ್ಕೆ ಅನುಮತಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದರಿಂದಾಗಿ ರಾಜ್ಯ ಸರ್ಕಾರ ಗೊಂದಲಕ್ಕೀಡಾಗಿದ್ದು, ಯಾವ ವಲಯಗಳಲ್ಲಿ ಮಾರಾಟಕ್ಕೆ ಅವಕಾಶ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತಿದೆ. ಶನಿವಾರ ಈ ಕುರಿತು ಅಬಕಾರಿ ಸಚಿವರು, ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ಆನಂತರ ಯಾವೆಲ್ಲ ಜಿಲ್ಲೆಗಳಲ್ಲಿ ಮದ್ಯ ಮಾರಾಟ ಮಾಡಬಹುದು ಎಂಬ ಬಗ್ಗೆ ಅಧಿಕೃತ ಆದೇಶ ಮಾಡಲಾಗುತ್ತದೆ.
ಕೆಂಪು ವಲಯ ಬಿಟ್ಟು…
ನಗರ ಪ್ರದೇಶದ ಎಸ್​ಇಝೆಡ್, ರಫ್ತು ಉದ್ದೇಶದ ಉದ್ದಿಮೆ, ನಾಗರಿಕ ಪೂರೈಕೆಯ ಸರಪಳಿಯಲ್ಲಿ ಬರುವಂತಹ ಕೈಗಾರಿಕೆ, ಐಟಿ ಹಾರ್ಡ್​ವೇರ್, ನಾರಿನ ಉದ್ಯಮ, ಪ್ಯಾಕೇಜ್ ಘಟಕಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಣೆಗೆ ಅವಕಾಶ.
ಗ್ರಾಮೀಣ ಭಾಗದಲ್ಲಿ ಎಲ್ಲ ಉದ್ದಿಮೆಗಳಿಗೆ ಅವಕಾಶ.
ನಗರ ಪ್ರದೇಶದಲ್ಲಿ ಸೀಮಿತ ನಿರ್ಮಾಣ ಕಾಮಗಾರಿ, ನವೀಕರಿಸಬಹುದಾದ ಇಂಧನ ಮೂಲದಲ್ಲಿನ ಕಾಮಗಾರಿಗೆ ಅವಕಾಶ, ಗ್ರಾಮೀಣ ಭಾಗದಲ್ಲಿ ಎಲ್ಲ ರೀತಿ ನಿರ್ಮಾಣ ಕಾಮಗಾರಿ ನಡೆಸಬಹುದು
ಖಾಸಗಿ ಕಚೇರಿಗಳು ಶೇ. 33 ನೌಕರರ ಸಹಿತ ಕಾರ್ಯನಿರ್ವಹಿಸಬಹುದು
ಡೆಪ್ಯುಟಿ ಕಾರ್ಯದರ್ಶಿ ಹಂತದ ಸರ್ಕಾರಿ ಕಚೇರಿಗಳು.
ಶೇ. 100, ಇನ್ನಿತರ ಕಚೇರಿಗಳು ಶೇ. 33 ಸಿಬ್ಬಂದಿ ಸಹಿತ ಕಾರ್ಯನಿರ್ವಹಣೆ
ಎಲ್ಲರಿಗೂ ವಿನಾಯಿತಿ
ಅಗತ್ಯ ವಸ್ತುಗಳ ಸರಕು ಸಾಗಣೆ, ಏರ್ ಆಂಬುಲೆನ್ಸ್, ತುರ್ತು ಸೇವಾ, ರಕ್ಷಣಾ ಸಿಬ್ಬಂದಿ ವಿಮಾನಯಾನ
ರಕ್ಷಣೆ, ಪೊಲೀಸ್, ಆರೋಗ್ಯ, ಕಾರಾಗೃಹ, ಗೃಹರಕ್ಷಕ ದಳ, ಅಗ್ನಿ ಶಾಮಕ ದಳ, ವಿದ್ಯುತ್, ಉಗ್ರಾಣ, ಬ್ಯಾಂಕ್, ಅಂಚೆ ಕಚೇರಿ, ತುರ್ತು ಸೇವಾ ಕಚೇರಿಗಳು ಕಾರ್ಯನಿರ್ವಹಿಸಬಹುದು.
ವಿಶೇಷ ಅನುಮತಿ ಪಡೆದ ಬಸ್​ಗಳ ಸಂಚಾರ, ಅಂತರರಾಜ್ಯ ಅಗತ್ಯ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅವಕಾಶ, ತುರ್ತಸೇವೆ, ರಕ್ಷಣೆ ಮತ್ತು ಅನುಮತಿ ಪಡೆದ ಅನಾರೋಗ್ಯ ಪೀಡಿತರ ಸಂಚಾರ.
ಆನ್​ಲೈನ್, ಅಂಚೆ ಮೂಲಕ ಶಿಕ್ಷಣ.
ಆಸ್ಪತ್ರೆ/ನರ್ಸಿಂಗ್ ಹೋಮ್.
ಆರೋಗ್ಯ ಕೇಂದ್ರ, ಔಷಧ ಮಳಿಗೆ.
ತುರ್ತ ಸೇವೆ ಸಿಬ್ಬಂದಿ, ಪೊಲೀಸ್, ರಕ್ಷಣಾ ಸಿಬ್ಬಂದಿ, ಈಗಾಗಲೇ ಪ್ರವಾಸಿಗರು ಇರುವ ಕ್ವಾರಂಟೈನ್ ಕೇಂದ್ರಗಳಾಗಿ ಮಾರ್ಪಟ್ಟ ಹೋಟೆಲ್, ರೆಸ್ಟೋರೆಂಟ್, ಲಾಡ್ಜ್, ಹೋಂ ಸ್ಟೇಗಳು.
ಹಾಲು, ಹಣ್ಣು, ತರಕಾರಿ, ದಿನಸಿ ಇನ್ನಿತರ ಅತ್ಯವಶ್ಯಕ ಅಂಗಡಿಗಳು.
ಅಗತ್ಯವಸ್ತುಗಳ ಸರಕು ಸಾಗಣೆ ವಾಹನದ ಸಂಚಾರ.
ವಿಶೇಷ ಪಾಸ್ ಇರುವ ನಾಲ್ಕು ಹಾಗೂ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ, ಸಾಮಾಜಿಕ ಅಂತರ ಪಾಲನೆಯ ಷರತ್ತಿನ ಮೇರೆಗೆ.
ಔಷಧ ಮತ್ತು ವೈದ್ಯಕೀಯ ಪರಿಕರಗಳ ಉತ್ಪಾದನಾ ಘಟಕಗಳು.
ಆಹಾರ ಸಂಸ್ಕರಣಾ ಮತ್ತು ಅಗತ್ಯ ವಸ್ತುಗಳ ತಯಾರಿಕಾ ಘಟಕಗಳು.
ಇ-ಕಾಮರ್ಸ್ ಕಂಪನಿಗಳಿಗೆ ಅತ್ಯವಶ್ಯಕ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ.
ಒಂದು ಕುಟುಂಬವನ್ನೇ ಕಾಪಾಡಿತು ಈ ಬೆಕ್ಕು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + one =
Remember me
