ಹರಿಯಾಣ: ಇಬ್ಬರೂ ಹುಡುಗಿಯರು ಒಬ್ಬರಿಗೊಬ್ಬರು ತುಂಬಾ ಪ್ರೀತಿಸುತ್ತಿದ್ದರು.  ಈ ಇಬ್ಬರು ಹೆಣ್ಣುಮಕ್ಕಳ ಮದುವೆ ಹಿಂದೂ ಸಂಪ್ರದಾಯದಂತೆ ನಡೆದಿರುವುದು ಗಮನಾರ್ಹ. ಈ ಹುಡುಗಿಯರ ಪ್ರೇಮ ವಿವಾಹದ ಬಗ್ಗೆ ತಿಳಿಯಬೇಕಾದರೆ ಹರಿಯಾಣದ ಗುರುಗ್ರಾಮಕ್ಕೆ ಹೋಗಬೇಕು…
ಗುರುಗ್ರಾಮದ ನಿವಾಸಿಯಾಗಿರುವ 30 ವರ್ಷದ ಅಂಜು ಶರ್ಮಾ ತನ್ನ ವಯಸ್ಸಿನ ಕವಿತಾ ಎಂಬ ಇನ್ನೊಬ್ಬ ಹುಡುಗಿಯನ್ನು ಭೇಟಿಯಾದಳು. ಕವಿತಾ ಅವರ ಹುಟ್ಟೂರು ಹರಿಯಾಣದ ಫತೇಹಾಬಾದ್.  ಕವಿತಾ ಮೇಕಪ್ ಕಲಾವಿದೆ. ಅಂಜು ಯೂಟ್ಯೂಬ್ ಚಾನೆಲ್‌ನಲ್ಲಿ  ಕಾರ್ಯ ನಿರ್ವಹಿಸುತ್ತಾರೆ. ಕವಿತಾ ಮತ್ತು ಅಂಜು 2020 ರಲ್ಲಿ ಶೂಟಿಂಗ್‌ನ ಭಾಗವಾಗಿ ಭೇಟಿಯಾದರು. ಅಲ್ಲಿ ನಡೆದ ಪರಿಚಯ ಪ್ರೀತಿಗೆ ತಿರುಗಿತ್ತು.
ಇಬ್ಬರೂ ಒಟ್ಟಿಗೆ ಬಾಳಲು ಬಯಸಿದ್ದರು. ಅಂಜುಳ ತಾಯಿ ಕವಿತಾಳನ್ನು ಸೊಸೆಯಾಗಿ ಸ್ವೀಕರಿಸುತ್ತಾಳೆ. ಕವಿತಾ ಅವರ ತಂದೆ ಮತ್ತು ಸಹೋದರ ಕೂಡ ಅವರಿಗೆ ಸಹಾಯ ಮಾಡಿದರು. ಅಂಜು ಮತ್ತು ಕವಿತಾ ಕುಟುಂಬ ಸದಸ್ಯರು ಮತ್ತು ಎರಡೂ ಕುಟುಂಬದ ಸ್ನೇಹಿತರ ಮಾರ್ಗದರ್ಶನದಲ್ಲಿ  2024  ಏಪ್ರಿಲ್ 23ರಂದು ವಿವಾಹವಾದರು. ಮತ್ತು ಅವರ ಮದುವೆ ಹಿಂದೂ ಸಂಪ್ರದಾಯದ ಪ್ರಕಾರ ನಡೆಯಿತು. ಅಂಜು ಮತ್ತು ಕವಿತಾ ಏಳು ಹೆಜ್ಜೆ ಹಾಕಿ ಪಂಚಭೂತಗಳ ಸಾಕ್ಷಿಯಾಗಿ ಒಂದಾದರು. ದಂಪತಿಗೆ ಅತಿಥಿಗಳು ಆಶೀರ್ವಾದವನ್ನು ನೀಡಿದರು. ಗುರುಗ್ರಾಮದ ಚೋಟಿ ಪಂಚಾಯತ್ ಧರ್ಮಶಾಲಾದಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆಯಿತು.
ಅಂಜು ಮತ್ತು ಕವಿತಾ ಮಾತನಾಡಿ, ಈ ಮದುವೆಯಿಂದ ತುಂಬಾ ಖುಷಿಯಾಗಿದ್ದೇವೆ. ಅಂಜು ತನ್ನ ಹೆಸರನ್ನು ಅಂಜು ಶರ್ಮಾ ಎಂದು ಬದಲಾಯಿಸಿಕೊಂಡಿದ್ದೇನೆ. ಹುಡುಗ ಹುಡುಗಿ ಹೇಗೆ ಮದುವೆ ಆಗುತ್ತಾರೋ ಹಾಗೆಯೇ ಅವರ ಮದುವೆಯೂ ಆಗಿದೆ ಎಂದರು. ಈ ಮದುವೆಗೆ ಎರಡೂ ಮನೆಯವರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
