ಆಂಧ್ರಪ್ರದೇಶ:ಕಳೆದ ಹಲವು ತಿಂಗಳಿಂದ ದೇಶದ ನಾನಾ ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ನದಿ-ಹೊಳೆಗಳು ಉಕ್ಕಿ ಹರಿಯುತ್ತಿದೆ. ಈ ನಡುವೆ ಭಾರೀ ಮಳೆಯಿಂದ ಮೀನುಗಾರರಿಗೆ ಹೆಚ್ಚು ಲಾಭ ದೊರಕಿದ್ದು, ಕಡಲ ತೀರದಲ್ಲಿ ಅನೇಕ ಮೀನುಗಾರರು ವಿವಿಧ ಬಗೆಯ ಮೀನು ಹಿಡಿದು ಲಾಭಗಳಿಸಿದ್ದಾರೆ.
ಇದನ್ನೂ ಓದಿ:ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದ ಕೆಪಿಟಿಸಿಎಲ್ ಪ್ರಸರಣ ವಿಭಾಗದ ಮುಖ್ಯ ಇಂಜಿನಿಯರ್
ಅದೇ ರೀತಿ ಆಂಧ್ರಪ್ರದೇಶದ ಮೀನುಗಾರರೊಬ್ಬರು ಬರೋಬ್ಬರಿ 20 ಕೆಜಿ ತೂಕದ ಅಪರೂಪದ ಮೀನನ್ನು ಸೆರೆಹಿಡಿದ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಆಂಧ್ರಪ್ರದೇಶದ ಕೋನಸೀಮಾ ಎಂಬ ಪ್ರದೇಶದಲ್ಲಿ ವಾಸವಿರುವ ಮೀನುಗಾರರೊಬ್ಬರು ಎಂದಿನಂತೆ ಮೀನು ಹಿಡಿಯುವ ಕೆಲಸದಲ್ಲಿ ನಿರತರಾಗಿದ್ದ ವೇಳೆ 20 ಕೆಜಿ ತೂಕದ ಅಪರೂಪದ ಕಚಿಡಿ ಮೀನನ್ನು ತಮ್ಮ ಬಲೆಗೆ ಬೀಳಿಸಿಕೊಂಡಿದ್ದಾರೆ. ಈ ಮೀನಿನಲ್ಲಿ ವಿವಿಧ ಔಷಧೀಯ ಗುಣಗಳಿದೆ ಎಂದು ಹೇಳಲಾಗಿದ್ದು, ಮೀನುಗಾರನಿಗೆ ಭಾರೀ ಅದೃಷ್ಟ ಒಲಿದು ಬಂದಿದೆ.
ಇದನ್ನೂ ಓದಿ:Zameer Ahmed Visits Hampi Virupaksha Temple | ಹಂಪಿ ವಿರೂಪಾಕ್ಷನಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ಜಮೀರ್​ ಅಹ್ಮದ್​ ಖಾನ್​
ಮೀನನ್ನು ಕಾಕಿನಾಡ ಮೀನು ಮಾರುಕಟ್ಟೆಯಲ್ಲಿ ತಂದು ಹರಾಜಿನಲ್ಲಿ ಕೂಗಿದ ಮೀನುಗಾರನಿಗೆ, ಬರೋಬ್ಬರಿ 3.3 ಲಕ್ಷ ರೂ. ಲಾಭ ದೊರಕಿದೆ. ವ್ಯಾಪಾರದಲ್ಲಿ ಗ್ರಾಹಕರು ಭಾರೀ ಪೈಪೋಟಿ ನೀಡಿದ್ದು, ಮೀನುಗಾರನಿಗೆ ಬಂಪರ್​ ಬೆಲೆಯನ್ನು ಕೊಟ್ಟಿದ್ದಾರೆ,(ಏಜೆನ್ಸೀಸ್).
‘ಉಸ್ತಾದ್​’ ಪ್ರೀ-ರಿಲೀಸ್​ ಈವೆಂಟ್​​ಗೆ ಅತಿಥಿಯಾಗಿ ಸ್ಟಾರ್​ ನಿರ್ದೇಶಕ ಎಂಟ್ರಿ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:3 + 17 =
Remember me
