ನವದೆಹಲಿ:ಲಾಕ್​ಡೌನ್​ನಿಂದಾಗಿ ಎಲ್ಲ ವಲಯ, ವರ್ಗದ ಜನರು ಎದುರಿಸುತ್ತಿರುವ ಸಂಕಷ್ಟ ತಗ್ಗಿಸುವ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಘೋಷಿಸಿದ -20 ಲಕ್ಷ ಕೋಟಿ ರೂ.ವಿಶೇಷ ಪ್ಯಾಕೇಜ್​ನ ಮೊದಲ ಚರಣದಲ್ಲಿ ಆರು ವಲಯಗಳಿಗೆ 15 ನೆರವಿನ ಉಪಕ್ರಮಗಳ ವಿವರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಪ್ರಕಟಿಸಿದರು.
ಜನರ ಬಳಿ ಹೆಚ್ಚಿನ ನಗದು ಇರುವಂತೆ ಮಾಡುವುದು, ಉದ್ದಿಮೆ ಗಳು, ಇವುಗಳಿಗೆ ಸಾಲ ನೀಡುವ ಬ್ಯಾಂಕ್ ಅಥವಾ ಸಂಸ್ಥೆಗಳಲ್ಲಿ ಹಣದ ಹರಿವು ಹೆಚ್ಚಳಕ್ಕೆ ಒತ್ತು ನೀಡುವುದು ಸರ್ಕಾರದ ಉದ್ದೇಶ.
15 ನೆರವಿನ ಪೈಕಿ ಕಿರು, ಸಣ್ಣ ಮತ್ತು ಮಧ್ಯಮಗಾತ್ರದ ಉದ್ದಿಮೆಗಳಿಗೆ (ಎಂಎಸ್​ಎಂಇ) ಆರು ನೆರವು ದೊರಕಿದ್ದು, ಕಾರ್ವಿುಕರ ಭವಿಷ್ಯ ನಿಧಿ (ಇಪಿಎಫ್) ಹಾಗೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ (ಎನ್​ಬಿಎಫ್​ಸಿ), ವಸತಿ ಹಣಕಾಸು ನಿಗಮ (ಎಚ್​ಎಫ್​ಸಿ), ಕಿರು ಸಾಲ ಸಂಸ್ಥೆಗೆ (ಎಂಎಫ್​ಐ) ತಲಾ ಎರಡು, ವಿದ್ಯುತ್ ವಿತರಣಾ ಕಂಪನಿಗಳು (ಡಿಸ್​ಕಾಂ) ಮತ್ತು ಗುತ್ತಿಗೆದಾರರು ಹಾಗೂ ರಿಯಲ್ ಎಸ್ಟೇಟ್​ಗಳಿಗೆ ತಲಾ ಒಂದು ಮತ್ತು ನೇರ ತೆರಿಗೆಗೆ ಸಂಬಂಧಿಸಿದ ಮೂರು ವಿನಾಯಿತಿಗಳ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಸುದೀರ್ಘ ಮಾಹಿತಿ ನೀಡಿದರು. ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್, ಹಣಕಾಸು ಸಚಿವಾಲಯ ಕಾರ್ಯದರ್ಶಿ ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿಕೃಷಿ ಕಾರ್ಮಿಕರು, ಜನ್​ಧನ್​ ಖಾತೆದಾರರು ಹಾಗೂ ಸಣ್ಣ ಕೈಗಾರಿಕೆದಾರರಿಗೆ ಬಂಪರ್​ ಗಿಫ್ಟ್​- ತಜ್ಞರ ಅಭಿಮತ
ಕಾಲ್ಪನಿಕ ಲೆಕ್ಕಾಚಾರದ ಮೂಲಕ 20 ಲಕ್ಷ ಕೋಟಿ ಪ್ಯಾಕೇಜ್
ಪ್ರಧಾನಿ ನರೇಂದ್ರ ಮೋದಿ ಅವರು ‘ಆತ್ಮನಿರ್ಭರ ಭಾರತ’ ಎಂಬ ಆಕರ್ಷಕ ಪದಗುಚ್ಛದ ಮೂಲಕ ದೇಶದ ಜನ ಸ್ವಾವಲಂಬಿಗಳಾಗಬೇಕು ಎಂದು ಹೇಳಿ ಅನಾಥರನ್ನಾಗಿಸಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಲಾಕ್​ಡೌನ್​ನಿಂದ ತತ್ತರಿಸಿರುವ ಜನರು, ರೈತರು, ಬಡವರನ್ನು ಪಕ್ಕಕ್ಕಿಟ್ಟು, ಉದ್ಯಮಿಗಳು, ಉದ್ಯಮಗಳ ವ್ಯವಹಾರಕ್ಕೆ ಪ್ಯಾಕೇಜ್ ರೂಪಿಸಿರುವುದು ಸ್ಪಷ್ಟವಾಗಿದೆ. ಆದರೆ ಪ್ಯಾಕೇಜ್​ನಲ್ಲಿ ತಮಗೂ ಒಂದಿಷ್ಟು ಸಿಗಬಹುದು ಎಂದು ನಿರೀಕ್ಷಿಸಿದ್ದ ಜನರ ನಿರೀಕ್ಷೆಗಳಿಗೆ ತಣ್ಣೀರೆರಚಲಾಗಿದೆ ಎಂದಿದ್ದಾರೆ.
ಇದನ್ನೂ ಓದಿಇಂದಿನ ಘೋಷಣೆ ತಾತ್ಕಾಲಿಕವಾಗಿ ಪರಿಣಾಮಕಾರಿ- ತಜ್ಞರ ಮಾತು
ಭವಿಷ್ಯ ನಿಧಿಗೆ ನೆರವು
1) ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ಅಡಿಯ ನೌಕರರು, ಅವರ ಉದ್ಯೋಗದಾತರು ಭವಿಷ್ಯ ನಿಧಿಗೆ (ಪಿಎಫ್) ತಲಾ ಶೇ. 12 ವಂತಿಗೆ ಜಮಾ ಮಾಡಬೇಕು. ಇದಕ್ಕೆ ಸರ್ಕಾರ ಮಾರ್ಚ್, ಏಪ್ರಿಲ್ ಮತ್ತು ಮೇನಲ್ಲಿ ಧನಸಹಾಯ ಮಾಡಿತ್ತು. ಈಗ ಮತ್ತೆ 2,500 ಕೋಟಿ ನೆರವು ಘೋಷಿಸಿ, ಜೂನ್​ನಿಂದ ಆಗಸ್ಟ್​ವರೆಗೂ ಸೌಲಭ್ಯ ವಿಸ್ತರಿಸಿದೆ.
ಪರಿಣಾಮ:ಹಣಕಾಸಿನ ಹರಿವು ಕಾಯ್ದುಕೊಳ್ಳುವ ಈ ನೆರವಿನಿಂದ 72.22 ಲಕ್ಷ ನೌಕರರು ಮತ್ತು 3.67 ಲಕ್ಷ ಕಂಪನಿಗಳಿಗೆ ಅನುಕೂಲವಾಗಲಿದೆ.
2) ನೌಕರರು ಮತ್ತು ಖಾಸಗಿ ಕಂಪನಿಗಳಿಗೆ ಇಪಿಎಫ್ ವಂತಿಗೆ ಪ್ರಮಾಣವನ್ನು ಶೇ. 12ರಿಂದ 10ಕ್ಕೆ ಇಳಿಸಲಾಗಿದ್ದು, ಮುಂದಿನ ಮೂರು ತಿಂಗಳಿಗೆ ಅನ್ವಯವಾಗಲಿದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಅಧೀನದ ಸಾರ್ವಜನಿಕ ಉದ್ದಿಮೆಗಳು ಮತ್ತು ಅವುಗಳ ನೌಕರರಿಗೆ ಇದರಿಂದ ವಿನಾಯಿತಿ ಇಲ್ಲ. ಅವು ಶೇ. 12 ವಂತಿಗೆ ಪಾವತಿಸಬೇಕು. ಈ ಸೌಲಭ್ಯ ಶೇ.24 ಇಪಿಎಫ್ ಬೆಂಬಲ ಇರುವಂತಹ ಪಿಎಂಜಿಕೆಪಿಗೆ ಒಳಪಡುವ ನೌಕರರಿಗೆ ಅನ್ವಯವಾಗುವುದಿಲ್ಲ.
ಪರಿಣಾಮ:ನೌಕರ ಮತ್ತು ಉದ್ಯೋಗದಾತ ಕಂಪನಿಗಳಿಗೆ ಇನ್ನೂ ಮೂರು ತಿಂಗಳ ಕಾಲ 6,750 ಕೋಟಿ ರೂಪಾಯಿ ಹರಿವನ್ನು ಹೆಚ್ಚಿಸಲಿದೆ.
ಎರಡು ದಿನದಲ್ಲಿ ಇನ್ನಷ್ಟು ಘೋಷಣೆ
20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಅನ್ನು ಸ್ವಾವಲಂಬಿ ಭಾರತದ ನಿರ್ವಣಕ್ಕೆ ಪರಿಣಾಮಕಾರಿಯಾಗಿ ಬಳಸಲು ಹತ್ತು ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನೆರಡು ದಿನಗಳಲ್ಲಿ ಇನ್ನಷ್ಟು ವಲಯ ಮತ್ತು ವರ್ಗದವರಿಗೆ ದೊರೆಯುವ ಅನುಕೂಲಗಳನ್ನು ಪ್ರಕಟಿಸುತ್ತೇವೆ.
| ನಿರ್ಮಲಾ ಸೀತಾರಾಮನ್ ಕೇಂದ್ರ ಹಣಕಾಸು ಸಚಿವೆ
‘ಅರ್ಜುನ್​ ರೆಡ್ಡಿ’ ಚಿತ್ರಕ್ಕೆ ಮೊದಲು ಈ ಹೀರೋನನ್ನು ಅಪ್ರೋಚ್​ ಮಾಡಿದ್ರು ನಿರ್ದೇಶಕ ಸಂದೀಪ್​!?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × 3 =
Remember me
