ನವದೆಹಲಿ:ಐದು ದಿನಗಳ ಅಮೆರಿಕ ಪ್ರವಾಸ ಮುಗಿಸಿ ಭಾನುವಾರ ಬೆಳಗ್ಗೆ ಭಾರತಕ್ಕೆ ವಾಪಸಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಸಾವಿರಾರು ಕಾರ್ಯಕರ್ತರು ವಿಮಾನನಿಲ್ದಾಣದಲ್ಲಿ ಭರ್ಜರಿಯಾಗಿ ಸ್ವಾಗತಿಸಿದರು. ಪ್ರಧಾನಿ ಮೋದಿ ಈ ಪ್ರವಾಸದಲ್ಲಿ 65 ತಾಸಿನಲ್ಲಿ 24 ಸಭೆಗಳಲ್ಲಿ ಭಾಗವಹಿಸಿದ ಸ್ವಾರಸ್ಯವನ್ನು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಇದನ್ನು ಹೊರತು ಪಡಿಸಿ, ಪ್ರಧಾನಿ ಪ್ರಯಾಣ ಕಾಲದಲ್ಲಿ ತಮ್ಮೊಂದಿಗೆ ಆಗಮಿಸಿದ್ದ ಅಧಿಕಾರಿ ವರ್ಗದ ಜತೆಯಲ್ಲೂ ವಿಮಾನದಲ್ಲೇ ಸುದೀರ್ಘ ನಾಲ್ಕು ಸಭೆ ನಡೆಸಿರುವುದು ವಿಶೇಷ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜತೆಗಿನ ದ್ವಿಪಕ್ಷೀಯ ಮಾತುಕತೆ; ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭೇಟಿ ಮತ್ತು ಕ್ವಾಡ್ ರಾಷ್ಟ್ರಗಳ (ಭಾರತ, ಅಮೆರಿಕ, ಆಸ್ಟ್ರೇಲಿಯಾ, ಜಪಾನ್) ಶೃಂಗಸಭೆ; ನ್ಯೂಯಾರ್ಕ್​ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ 76ನೇ ಮಹಾಧಿವೇಶನದಲ್ಲಿನ ಭಾಷಣಗಳೂ ಇದರಲ್ಲಿ ಸೇರಿವೆ. ಇದರ ಹೊರತಾಗಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಜತೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಜಾಗತಿಕ ಮಟ್ಟದ ಪ್ರಮುಖ ಐದು ಕಂಪನಿಗಳ ಸಿಇಒಗಳನ್ನೂ ಭೇಟಿ ಮಾಡಿ ಭಾರತದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿ ದ್ದಾರೆ. ಶುಕ್ರವಾರ ನಾಲ್ಕು ಆಂತರಿಕ ಸಭೆಯಲ್ಲೂ ಪ್ರಧಾನಿ ಪಾಲ್ಗೊಂಡಿದ್ದರು.
ದಶಕಗಳ ರೂಢಿ:ಮೋದಿ 1990ರಿಂದ ಅಮೆರಿಕ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರಿಗೆ ವಿಮಾನಯಾನ ಕಂಪನಿಗಳು ಮಾಸಿಕ ಪಯಣದ ಪಾಸ್ ನೀಡುತ್ತಿದ್ದವು. ಬಹುತೇಕ ಪ್ರಯಾಣವನ್ನು ಅವರು ರಾತ್ರಿ ವೇಳೆಯಲ್ಲೇ ಮಾಡುತ್ತಿದ್ದರು. ಹಗಲು ಹೊತ್ತಿನಲ್ಲಿ ಹೆಚ್ಚು ಸ್ಥಳಗಳನ್ನು ನೋಡಬಹುದು ಮತ್ತು ರಾತ್ರಿ ವೇಳೆ ಪಯಣ ಮಾಡಿದರೆ ಏರ್​ಪೋರ್ಟ್ ಮತ್ತು ವಿಮಾನದಲ್ಲೇ ಇರಬಹುದಾದ್ದರಿಂದ ಹೋಟೆಲ್​ನಲ್ಲಿ ತಂಗುವ ಖರ್ಚು ಉಳಿಯುತ್ತದೆ ಎಂಬುದು ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ.
ಕಾಣದ ಆಯಾಸ:ನರೇಂದ್ರ ಮೋದಿಯವರು ಪ್ರಧಾನಿಯಾದಾಗಿ ನಿಂದ ನಿರಂತರವಾಗಿ ಕೆಲಸದಲ್ಲಿ ತೊಡಗಿರು ವುದು ಸರ್ವವೇದ್ಯ. ದೀರ್ಘಕಾಲದ ವಿದೇಶ ಪ್ರಯಾಣ ಮತ್ತು ಬಿಡುವಿಲ್ಲದಂತೆ ನಿಗದಿಯಾದ ಸಭೆಗಳಲ್ಲಿ ಭಾಗವಹಿಸಿಯೂ ಅವರಲ್ಲಿ ಆಯಾಸ ಕಾಣಿಸಲಿಲ್ಲ. ಪ್ರತಿ ಸಭೆಯಲ್ಲೂ ಲವಲವಿಕೆಯಿಂದಲೇ ಭಾಗವಹಿಸಿದ್ದರು. ಅವರಿಗೆ ದಣಿವಿಲ್ಲದೆ ಕೆಲಸ ಮಾಡುವುದು ರೂಢಿಯಾಗಿ ಹೋಗಿದೆ ಎಂದು ಪ್ರಧಾನಿ ಜತೆ ಪ್ರವಾಸದಲ್ಲಿದ್ದ ಅಧಿಕಾರಿಗಳು ಹೇಳಿದ್ದಾರೆ.
ಭಾರತೀಯರ ಮನೆಯಲ್ಲೇಕೆ ಇಂಥದ್ದೊಂದು ಇರಲು ಸಾಧ್ಯವಿಲ್ಲ?; ಹೀಗೆಂದ ಕೆಲವೇ ಗಂಟೆಗಳಲ್ಲಿ ಸರಸ್ವತಿ ಟ್ರೆಂಡಿಂಗ್

ಎಲೆಕ್ಟ್ರಾನಿಕ್​ ಸಿಟಿ ಫ್ಲೈಓವರ್ ಮೇಲೆ ಮತ್ತೊಂದು ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − four =
Remember me
