ರಾಂಚಿ:ತನ್ನನ್ನು ಮದುವೆಯಾಗಲು ನಿರಾಕರಿಸಿದ ಎಂಬ ಕಾರಣಕ್ಕೆ ಪ್ರೇಯಸಿಯೊಬ್ಬಳು ಪ್ರಿಯತಮನನ್ನು ಕೊಡಲಿಯಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಾರ್ಖಂಡ್​ನ ಪಲಮು ಜಿಲ್ಲೆಯ ಮೇದಿನಿನಗರದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಧರ್ಮೆನ್ ಓರಾನ್ (24) ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಪೊಲೀಸರು ಆರೋಪಿ ಪ್ರಿಯತಮೆ ಅಂಜಲಿ ಕುಮಾರ್​ (20) ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ:VIDEO| ಅಫ್ಘಾನಿಸ್ತಾನ-ಪಾಕ್​ ನಡುವಿನ ಪಂದ್ಯಕ್ಕೆ ಭಾರತ ಧ್ವಜಕ್ಕೆ ನೋ ಎಂಟ್ರಿ; ಕಸದ ಬುಟ್ಟಿಗೆ ಎಸೆದು ಅವಮಾನ ಮಾಡಿದ ಪೊಲೀಸರು
ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಅಂಜಲಿ ಹಾಗೂ ಧರ್ಮೆನ್​ನನ್ನು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು . ಆಕೆ ಆತನನ್ನು ಮದುವೆಯಾಗಲು ಬಯಸಿದ್ದಳು. ಆದರೆ, ಧರ್ಮೆನ್​​ ಆಕೆಯ ಪ್ರಸ್ತಾವವನ್ನು ನಿರಾಕರಿಸಿದನು. ಇದರಿಂದ ಸಿಟ್ಟಿಗೆದ್ದ ಅಂಜಲಿ ಶನಿವಾರ ತಡರಾತ್ರಿ ಮಾತನಾಡುವುದಿದೆ ಎಂದು ಪುಸಲಾಯಿಸಿ ಪ್ರಿಯಕರನನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾಳೆ. ಇಬ್ಬರು ಕೆಲಕಾಲ ಮಾತನಾಡಿದ ಬಳಿಕ ಆತ ನಿದ್ರೆಗೆ ಜಾರಿದ್ದು,ಅಂಜಲಿ ತನ್ನ ಪ್ರಿಯಕರನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಬಳಿಕ ಆತನ ಮೃತದೇಹವನ್ನು ಹತ್ತಿರದಲ್ಲಿದ ಕಾಡಿನೊಳಗೆ ಎಸೆದು ಪರಾರಿಯಾಗಿದ್ದಾಳೆ.
ಮಗ ಕಾಣೆಯಾಗಿರುವ ಬಗ್ಗೆ ಧರ್ಮೆನ್ ಪೋಷಕರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಅಧಿಕಾರಿಗಳು ಘಟನೆ ನಡೆದ 48 ಘಂಟೆಗಳ ಒಳಗಾಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 7 =
Remember me
