ಕೊಲ್ಕತ್ತ:ಆಕೆಯಿನ್ನೂ 20 ವರ್ಷದ ಯುವತಿ. ಆತನ ಪ್ರೀತಿಗೆ ಬಿದ್ದಿದ್ದಳು. ಆತನ ಬಣ್ಣ ಬಯಲಾಗಿದ್ದಂತೆ ಎಲ್ಲ ಸಂಬಂಧಗಳನ್ನು ಕಡಿದುಕೊಂಡು ದೂರಾಗಿದ್ದಳು. ಇದರಿಂದ ಕೆರಳಿದ ಪ್ರಿಯಕರ ಸೇಡು ತೀರಿಸಿಕೊಂಡ ಪರಿ ಮಾತ್ರ ಎಂಥವರ ಎದೆಯನ್ನು ನಡುಗಿಸುತ್ತದೆ.
ದಕ್ಷಿಣ ಕೋಲ್ಕತ್ತದ ರೀಜೆಂಟ್​ ಪಾರ್ಕ್​ ನಿವಾಸಿಯಾಗಿದ್ದ ಪ್ರಿಯಾಂಕಾ ಪುರಕಾಯ್ತ್​ ವುಮೆನ್ಸ್​ ಕ್ರಿಶ್ಚಿಯನ್​ ಕಾಲೇಜಿನಲ್ಲಿ ಓದುತ್ತಿದ್ದಳು. ಜಯಂತ್​ ಹಲ್ದಾರ್​ ಎಂಬುವವನ್ನು ಪ್ರೀತಿಸುತ್ತಿದ್ದಳು.
ಇದನ್ನೂ ಓದಿ;ಗರ್ಭಿಣಿಯಾದ ಅಪ್ರಾಪ್ತೆ ಮಗಳನ್ನು ಅತ್ಯಾಚಾರಿಗೆ ಮಾರಿದ ಪಾಲಕರು
ಕೆಲ ದಿನಗಳ ಬಳಿಕ ಜಯಂತ್​ನಿಗೆ ಈಗಾಗಲೇ ಮದುವೆಯಾಗಿರುವ ವಿಚಾರ ಪ್ರಿಯಾಂಕಾಳಿಗೆ ಗೊತ್ತಾಗಿದೆ. ಹೀಗಾಗಿ ಆತನಿಂದ ದೂರಾಗಿದ್ದಳು. ಇದು ಜಯಂತ್​ ಕೋಪಕ್ಕೆ ಕಾರಣವಾಗಿದೆ.
ಬೆಳಗ್ಗೆ 8 ಗಂಟೆ ವೇಳೆಗೆ ಬೈಕ್​ನಲ್ಲಿ ಆನಂದಪಳ್ಳಿ ಎಂಬಲ್ಲಿದ್ದ ಪ್ರಿಯಾಂಕಾ ಮನೆಗೆ ಬಂದ ಜಯಂತ್​ ಆಕೆಯನ್ನು ತೀರಾ ಹತ್ತಿರದಿಂದ ಗುಂಡಿಟ್ಟು ಕೊಂದು ಪರಾರಿಯಾಗಿದ್ದಾನೆ.
ಇದನ್ನೂ ಓದಿ;ಒಂದಿಡೀ ದಿನವಾದರೂ ಸುಟ್ಟು ಬೂದಿಯಾಗಲಿಲ್ಲ ಕರೊನಾಪೀಡಿತನ ಶವ…!
ಪ್ರಿಯಾಂಕಾಳನ್ನು ಕೊಲ್ಲುವ ಉದ್ದೇಶದಿಂದಲೇ ಆರೋಪಿ ಮನೆ ಬಳಿ ಬಂದಿದ್ದ. ಆಕೆ ಮನೆಯಲ್ಲಿರುವುದನ್ನು ತಿಳಿದು ಬೆಳಗ್ಗೆಯೇ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಆತನಿಗಾಗಿ ಶೋಧ ನಡೆಸಿದ್ದಾರೆ.
ಸಂದೇಶವೇನು ಇಲ್ಲ, ನಾವು ಉತ್ತರ ಕೊಡೋಕೆ ಸಜ್ಜಾಗಿದ್ದೇವೆ; ಚೀನಾಗೆ ವಾಯುಸೇನೆ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
