ಲಂಡನ್​:ಇನ್ಫೋಸಿಸ್​ ಸಹ ಸಂಸ್ಥಾಪಕ ಎನ್​.ಆರ್​. ನಾರಾಯಣ ಮೂರ್ತಿ ಅವರ ಅಳಿಯ, ಭಾರತ ಮೂಲದ ರಿಷಿ ಸುನಕ್​ ಅವರು ಬ್ರಿಟನ್​ ಪ್ರಧಾನಿಯಾಗಿ ಆಯ್ಕೆಯಾಗಿದ್ದನ್ನು ಭಾರತ ಸೇರಿದಂತೆ ಇಡೀ ವಿಶ್ವದಾದ್ಯಂತ ಹಲವರು ಸಂಭ್ರಮಿಸಿದ್ದಾರೆ. ಬಿಟನ್ನಿನ ಮೊದಲ ಶ್ವೇತವರ್ಣೀಯೇತರ ಮತ್ತು ಹಿಂದು ಪ್ರಧಾನಿಯಾಗುವ ಮೂಲಕ ರಿಷಿ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ರಿಷಿ ಪ್ರಧಾನಿಯಾಗುತ್ತಿದ್ದಂತೆ ಅವರ ಮೂಲ, ಕುಟುಂಬದ ಹಿನ್ನೆಲೆ, ಪತ್ನಿ, ಮಕ್ಕಳು ಹಾಗೂ ಭಾರತ ಮತ್ತು ಕರ್ನಾಟಕಕ್ಕೆ ಇರುವ ಸಂಬಂಧದ ಬಗ್ಗೆ ಗೂಗಲ್​ನಲ್ಲಿ ಸಾಕಷ್ಟು ಜನರು ಹುಡುಕಾಡಿದ್ದಾರೆ. ಈ ಹುಡುಕಾಟವು ಸಹ ಒಂದು ದಾಖಲೆಯಾಗಿದೆ.
ಅ.26ರಂದು ಒಂದೇ ದಿನ ರಿಷಿ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಬಗ್ಗೆ ತಿಳಿದುಕೊಳ್ಳಲು ಬರೋಬ್ಬರಿ 200 ಕೋಟಿ ಮಂದಿ ಗೂಗಲ್​ ಸರ್ಚ್​ ಇಂಜಿನ್​ನಲ್ಲಿ ಹುಡುಕಾಟ ನಡೆಸಿದ್ದಾರೆ. ಕಳೆದ ಸೋಮವಾರ 1 ಲಕ್ಷಕ್ಕೂ ಅಧಿಕ ಹುಡುಕಾಟ ಅಕ್ಷತಾ ಮೂರ್ತಿ ಹೆಸರಲ್ಲಿ ನಡೆದರೆ, ಅದೇ ದಿನ 2 ಮಿಲಿಯನ್​ಗೂ ಅಧಿಕ ಹುಡುಕಾಟ ರಿಷಿ ಸುನಕ್​ ಹೆಸರಿನಲ್ಲಿ ಗೂಗಲ್​ನಲ್ಲಿ ಹುಡುಕಾಡಿದ್ದಾರೆ.
ಅಕ್ಟೋಬರ್​ 24ರಂದು ರಿಷಿ ಸುನಕ್​ ಬ್ರಿಟನ್​ ಪ್ರಧಾನಿಯಾಗಿ ಆಯ್ಕೆಯಾದ ದಿನದಿಂದ ಟ್ವಿಟರ್​ನಲ್ಲಿ ಸುಮಾರು 6,80,000 ಟ್ವೀಟ್​ಗಳನ್ನು ಮಾಡಲಾಗಿದೆ. ಈ ರೀತಿಯ ಹುಡುಕಾಟದಲ್ಲಿ ಬಹುತೇಕ ಮಂದಿ ರಿಷಿ ಅವರು ಧರ್ಮ, ವಯಸ್ಸು, ಆಹಾರದ ಆದ್ಯತೆಗಳ ಬಗ್ಗೆ ಹುಡುಕಾಡಿದ್ದಾರೆ.
ಕನ್ಸರ್ವೆಟಿವ್ ಪಕ್ಷದ ಸಂಸದ, ಭಾರತ ಮೂಲದ ರಿಷಿ ಸುನಕ್ ಮಂಗಳವಾರ (ಅ.25) ಬ್ರಿಟನ್​ನ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಸೋಮವಾರ (ಅ.24) ಪ್ರಧಾನಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಅವರು ಬ್ರಿಟನ್ ರಾಜ ಮೂರನೇ ಚಾರ್ಲ್ಸ್​ರನ್ನು ಭೇಟಿಯಾಗಿ ದೇಶದ 57ನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಇದರೊಂದಿಗೆ ಬ್ರಿಟನ್ ಪ್ರಥಮ ಶ್ವೇತವರ್ಣೀಯೇತರ, ಅತ್ಯಂತ ಕಿರಿಯ ವಯಸ್ಸಿನ ಹಾಗೂ ಪ್ರಥಮ ಹಿಂದು ಪ್ರಧಾನಿಯನ್ನು ಪಡೆದಂತಾಗಿದೆ. ಸುನಕ್ ನಾಲ್ಕು ತಿಂಗಳಲ್ಲಿ ಬ್ರಿಟನ್ನಿನ ಮೂರನೇ ಪ್ರಧಾನಿಯಾಗಿದ್ದಾರೆ.(ಏಜೆನ್ಸೀಸ್​)
ರಿಷಿ ಬ್ರಿಟನ್ 57ನೇ ಪ್ರಧಾನಿ; ರಾಜ ಮೂರನೇ ಚಾರ್ಲ್ಸ್​ರಿಂದ ಪ್ರಧಾನಿಯಾಗಿ ನೇಮಕ

ಬಾನಯಾನದಲ್ಲೂ ಮೊಳಗಿದ ಕನ್ನಡ ಗಾನ: ಕೋಟಿ ಕಂಠ ಗಾಯನ ಅಭಿಯಾನಕ್ಕೆ ಸ್ಪೈಸ್​ ಜೆಟ್​ ಬೆಂಬಲ

ಟ್ವಿಟರ್​ ಮಾಲೀಕತ್ವ ವಹಿಸಿಕೊಳ್ಳುತ್ತಿದ್ದಂತೆ ಸಿಇಒ ಪರಾಗ್​ ಅಗರ್ವಾಲ್​ರನ್ನು ವಜಾಗೊಳಿಸಿದ ಎಲಾನ್​ ಮಸ್ಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
