ನೋಯ್ಡಾ:ಯಮುನಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾದ ಹಿನ್ನಲೆ ಪ್ರವಾಹ ಭೀತಿ ಎದುರಾಗಿದ್ದು, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಂಕಷ್ಟ ಪರಿಸ್ಥಿತಿ ಉಂಟಾಗಲಿದೆ ಎಂದು ಗೌತಮ್ ಬುದ್ಧ ನಗರ ಆಡಳಿತವು ಪ್ರವಾಹ ಎಚ್ಚರಿಕೆ ನೀಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:42 ಲಕ್ಷ ರೂ. ಮೌಲ್ಯದ ಚಾಕಲೇಟ್‌ಗಳನ್ನು ಕದ್ದ ಕಳ್ಳನಿಗೆ 18 ತಿಂಗಳು ಜೈಲು ಶಿಕ್ಷೆ
ಈ ಬಗ್ಗೆ  ಮುನ್ಸೂಚನೆ ನೀಡಿರುವ ಅಧಿಕಾರಿಗಳು, ಈಗಾಗಲೇ ಐದು ಗ್ರಾಮಗಳಿಂದ ಸುಮಾರು 200 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ. “ಪಶ್ಚಿಮ ಉತ್ತರ ಪ್ರದೇಶದ ದೆಹಲಿಯ ಗಡಿ ಜಿಲ್ಲೆಯಲ್ಲಿರುವ ನದಿಯು 205 ಮೀಟರ್‌ಗಿಂತ ಕಡಿಮೆ ಅಪಾಯದ ಮಟ್ಟದಿಂದ ಹರಿಯುತ್ತಿದೆ. ಹಾಗಾಗಿ ಐದು ಗ್ರಾಮಗಳಿಂದ ಸುಮಾರು 200 ಜನರನ್ನು ಮುನ್ನೆಚ್ಚೆರಿಕೆ ವಹಿಸಿ ಶೀಘ್ರವೇ ಸ್ಥಳಾಂತರಿಸಲಾಗಿದೆ ಮತ್ತು ಅವರಿಗೆ ವಸತಿ, ಆಹಾರ ಮತ್ತು ಆರೋಗ್ಯ ರಕ್ಷಣೆಯನ್ನು ಒದಗಿಸಲು ಆಡಳಿತವು ಎಲ್ಲಾ ಕ್ರಮಗಳನ್ನು ಅನುಸರಿಸಿದೆ” ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅತುಲ್ ಕುಮಾರ್ ಮಾಹಿತಿ ನೀಡಿದ್ದಾರೆ.
“ಹಿಂಡನ್​ ನದಿಯು ಪ್ರಸ್ತುತ 200 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ, ಅಪಾಯದ ಮಟ್ಟ 205 ಮೀಟರ್‌ಗಿಂತ ಕೆಳಗಿದೆ” ಎಂದು ಗೌತಮ್ ಬುದ್ಧನಗರದ ಪ್ರವಾಹ ಪರಿಹಾರ ಕಾರ್ಯದ ನೋಡಲ್ ಅಧಿಕಾರಿ ಕುಮಾರ್ ಹೇಳಿದ್ದಾರೆ,(ಏಜೆನ್ಸೀಸ್).
42 ಲಕ್ಷ ರೂ. ಮೌಲ್ಯದ ಚಾಕಲೇಟ್‌ಗಳನ್ನು ಕದ್ದ ಕಳ್ಳನಿಗೆ 18 ತಿಂಗಳು ಜೈಲು ಶಿಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 3 =
Remember me
