ಲಾಹೋರ್​:ಕರೊನಾ ಲಾಕ್​ಡೌನ್​ ಕಾರಣದಿಂದಾಗಿ ಭಾರತದಲ್ಲಿ ಸಿಲುಕಿದ್ದ ಸುಮಾರು 200 ಪಾಕಿಸ್ತಾನಿ ಮಂದಿ ಸೆಪ್ಟೆಂಬರ್​ 3ರಂದು ವಾಪಸ್​ ತಮ್ಮ ದೇಶಕ್ಕೆ ಮರಳಲಿದ್ದಾರೆ.
ಮಾರ್ಚ್​ಗೂ ಮೊದಲು ಭಾರತಕ್ಕೆ ಆಗಮಿಸಿದ್ದ ಇವರೆಲ್ಲ ನಂತರ ವಾಪಸ್​ ಹೋಗಲಾಗದೆ ಉಳಿದಿದ್ದರು. ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿಗಳಲ್ಲಿ ಬೀಡುಬಿಟ್ಟಿರುವ ಪಾಕಿಸ್ತಾನಿ ಪ್ರಜೆಗಳಿಗಾಗಿಯೇ ಸೆಪ್ಟೆಂಬರ್​ 3ರಂದು ವಾಘಾ-ಅತ್ತಾರಿ ಗಡಿ ದ್ವಾರವನ್ನು ತೆರೆಯಲಾಗುವುದು ಎಂದು ಮೂಲಗಳು ತಿಳಿಸಿವೆ.
ಇಲ್ಲಿ ಸಿಲುಕಿರುವ ಪಾಕಿಸ್ತಾನಿ ಪ್ರಜೆಗಳನ್ನು ವಾಪಸ್​ ಕಳಿಸುವಲ್ಲಿ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್​ ವಿಶೇಷ ಪ್ರಯತ್ನ ಮಾಡಿದೆ ಎಂದು ಹೇಳಲಾಗಿದೆ. ಸದ್ಯ ಆ ದೇಶದಲ್ಲಿ 2,95,636 ಕರೊನಾ ಸೋಂಕಿತರು ಇದ್ದು, 6288 ಮಂದಿ ಮೃತಪಟ್ಟಿದ್ದಾರೆ.
‘ನನ್ನ ಪತಿ ಮತ್ತು…ಆ ಮಹಿಳೆಯನ್ನು ಮಂಪರು ಪರೀಕ್ಷೆಗೆ ಒಳಪಡಿಸಿ’: ಶಾಸಕನ ಪತ್ನಿಯಿಂದ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
