ನವದೆಹಲಿ:ದೇಶದಲ್ಲಿ ಕರೊನಾ ಸೋಂಕಿನ ಸಂಖ್ಯೆ ಇಳಿಕೆಯಾಗಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಕೇರಳದಲ್ಲಿ ಮಾತ್ರ ಸೋಂಕಿನ ಸಂಖ್ಯೆ ಭಾರಿ ಏರಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ರಾಜ್ಯ ಸರ್ಕಾರಗಳು ಅನೇಕ ಕ್ರಮಗಳಿಗೆ ಮುಂದಾಗಿವೆ.
ಇದನ್ನೂ ಓದಿ:ಮನೆಮನೆಗೆ ತಲುಪಲಿದೆ ಸರ್ಕಾರಿ ಸವಲತ್ತು, ಉಸ್ತುವಾರಿ ಸಚಿವ ಆರ್.ಅಶೋಕ್ ಭರವಸೆ, ಜಿಪಂ ಸಭಾಂಗಣದಲ್ಲಿ ಕೆಡಿಪಿ ಸಭೆ
ಸೋಂಕು ಹರಡದಿರುವಂತೆ ತಡೆಯಲು ಮಾಸ್ಕ್​ ಅತ್ಯವಶ್ಯಕ. ಅದೇ ಕಾರಣದಿಂದ ಎಲ್ಲ ರಾಜ್ಯಗಳಲ್ಲಿ ಮಾಸ್ಕ್​ ಬಳಕೆ ಕಡ್ಡಾಯ ಮಾಡಲಾಗಿದೆ. ಹಾಗಿದ್ದರೂ ಕೆಲವರು ಮಾಸ್ಕ್​ನ್ನು ಬಾಯಿ, ಮೂಗಿನ ಬದಲು ಕುತ್ತಿಗೆಗೆ ಹಾಕಿಕೊಳ್ಳುವ ಅಭ್ಯಾಸ ಮಾಡಿಕೊಂಡಿದ್ದಾರೆ. ಇಂತವರಿಗೆ ಬುದ್ಧಿ ಕಲಿಸುವ ಸಲುವಾಗಿ ದಂಡ ವಿಧಿಸಲಾಗುತ್ತಿದೆ. ಅಲ್ಪ ಸ್ವಲ್ಪ ದಂಡಕ್ಕೆ ಹೆದರದೆ ಮತ್ತೆ ತಪ್ಪು ಮುಂದುವರಿಸುತ್ತಿರುವುದರಿಂದಾಗಿ ದಂಡದ ಪ್ರಮಾಣವನ್ನು ಹೆಚ್ಚು ಮಾಡಲು ದೆಹಲಿ ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ:ರಾಜೀನಾಮೆ ನೀಡ್ತಿವಿ ಹೊರತು ಅನ್ಯಾಯ ಸಹಿಸಲ್ಲ ಎಂದ್ರು ಹಾಸನದ ಇಬ್ಬರು ಪ್ರಭಾವಿ ಶಾಸಕರು!
ದೆಹಲಿಯಲ್ಲಿ ಈವರೆಗೆ ಮಾಸ್ಕ್​ ಹಾಕದವರಿಗೆ 500 ರೂ ದಂಡ ವಿಧಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ದಂಡದ ಮೊತ್ತವನ್ನು 2 ಸಾವಿರ ರೂಪಾಯಿಗೆ ಏರಿಸಲಾಗುವುದು. ಈ ಕುರಿತಾಗಿ ಲೆಫ್ಟಿನೆಂಟ್ ಗವರ್ನರ್​ ಅನಿಲ್​ ಬೈಜಾಲ್​ ಅವರೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ತಿಳಿಸಿದ್ದಾರೆ. (ಏಜೆನ್ಸೀಸ್​)
70 ವರ್ಷದ ಮುದುಕಿಯ ಮೇಲೂ ಅತ್ಯಾಚಾರ; ಕೋಲಿನಿಂದ ಚುಚ್ಚಿ ವಿಕೃತಿ ಮೆರೆದ ಪಾಪಿಗಳು
ಮನೆಯಿಂದ ಹೊರಗೆ ಬರಲು ಒಬ್ಬರಿಗೆ ಮಾತ್ರ ಅವಕಾಶ; ಅತ್ಯಂತ ಕಠಿಣ ಲಾಕ್​ಡೌನ್​ ಜಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 6 =
Remember me
