ನವದೆಹಲಿ:ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಭಾರತೀಯ ರಿಸರ್ವ್ ಬ್ಯಾಂಕ್​ ಹಿಂಪಡೆದಿದೆ. ಮಾತ್ರವಲ್ಲ, ಈಗಾಗಲೇ ಅದನ್ನು ನೀಡುವುದನ್ನು ಬ್ಯಾಂಕ್​ಗಳಲ್ಲಿ ನಿಲ್ಲಿಸಲಾಗಿದ್ದು, ಈಗ ಹಿಂಪಡೆತದ ಬಳಿಕ ನೋಟುಗಳನ್ನು ಬದಲಿಸಿಕೊಳ್ಳಲು ಅವಕಾಶವನ್ನೂ ಕಲ್ಪಿಸಲಾಗಿದೆ.
ಎರಡು ಸಾವಿರ ರೂಪಾಯಿಯ ನೋಟುಗಳನ್ನು ಬದಲಿಸಿಕೊಡುವ ಪ್ರಕ್ರಿಯೆ ಇದೇ ಮೇ 23ರಿಂದ ಎಲ್ಲ ಬ್ಯಾಂಕ್​ಗಳಲ್ಲಿ ಮತ್ತು ಆರ್​​ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲೂ ಆರಂಭವಾಗಲಿದೆ. ನೋಟುಗಳನ್ನು ಬದಲಿಸಿಕೊಳ್ಳಲು 2023ರ ಸೆ.30ರ ವರೆಗೆ ಅವಕಾಶವಿದೆ.
ಇದನ್ನೂ ಓದಿ:ಮಲ್ಟಿಪ್ಲೆಕ್ಸ್​ನಲ್ಲಿ 99 ರೂಪಾಯಿಗೇ ಕನ್ನಡ ಸಿನಿಮಾ!; ಎಷ್ಟು ದಿನ ಈ ವಿಶೇಷ ಕೊಡುಗೆ?
ಎರಡು ಸಾವಿರ ರೂ. ನೋಟುಗಳನ್ನು ಬದಲಿಸಿಕೊಳ್ಳಲು ಒಂದು ಮಹತ್ವದ ಷರತ್ತು ವಿಧಿಸಲಾಗಿದೆ. ಸಾರ್ವಜನಿಕರು ಒಮ್ಮೆಗೆ ಹತ್ತು ನೋಟುಗಳನ್ನಷ್ಟೇ ಬದಲಿಸಿಕೊಳ್ಳಬಹುದು. ಅಂದರೆ ಒಂದು ಸಲಕ್ಕೆ 20 ಸಾವಿರ ರೂಪಾಯಿಯಷ್ಟು ಮಾತ್ರ 2 ಸಾವಿರ ರೂ. ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಬ್ಯಾಂಕ್​ನಲ್ಲಿ ಕಾರ್ಯದೊತ್ತಡ ಉಂಟಾಗದಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
ಮೋದಿಯಿಂದ ಮತ್ತೊಂದು ನೋಟ್ ಬ್ಯಾನ್​; ಬಿಜೆಪಿಗೆ ಕ್ಲ್ಯಾರಿಟಿಯೇ ಇಲ್ಲ: ಸಿದ್ದರಾಮಯ್ಯ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 3 =
Remember me
