ಲೂಧಿಯಾನ:ದೆಹಲಿಯಲ್ಲಿ ಜನವರಿ 26 ರ ಟ್ರ್ಯಾಕ್ಟರ್​ ರಾಲಿಯ ನಂತರ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಪ್ರತಿಯೊಬ್ಬ ರೈತನಿಗೂ 2 ಸಾವಿರ ರೂಪಾಯಿ ಹಣ ನೀಡುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ. ಈ ಹಣವು ಬಂಧಿತರ ಬ್ಯಾಂಕ್ ಅಕೌಂಟ್​ಗಳಿಗೆ ಸೋಮವಾರದೊಳಗೆ ತಲುಪಲಿದೆ ಎಂದು ಎಸ್​ಕೆಎಂ ಲೀಗಲ್ ತಂಡದ ಮುಖ್ಯಸ್ಥ ಪ್ರೇಮ್ ಸಿಂಗ್ ಭಾಂಗು ಹೇಳಿದ್ದಾರೆ.
ಎಸ್​ಕೆಎಂ ಲೀಗಲ್ ತಂಡದ ಸದಸ್ಯರು ಶುಕ್ರವಾರ ತಿಹಾರ್ ಜೈಲಿನಲ್ಲಿ ಬಂಧನದಲ್ಲಿರುವ 112 ರೈತರನ್ನು ಭೇಟಿ ಮಾಡಿದ್ದು, ಸಿಂಘು ಗಡಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಬಂಧಿಸಲಾಗಿರುವ ಎಲ್ಲಾ ರೈತರನ್ನೂ ಒಂದೇ ಸೆಲ್​ನಲ್ಲಿರಿಸಬೇಕು ಮತ್ತು ಎಸ್​ಕೆಎಂ ತಂಡಕ್ಕೆ ಅವರನ್ನು ಭೇಟಿ ಮಾಡಲು ಮುಕ್ತ ಅವಕಾಶ ನೀಡಬೇಕು ಎಂದು ಕೋರಿದ್ದಾರೆ.
ಇದನ್ನೂ ಓದಿ:ರೈತ ಹೋರಾಟದ ಮುಖ್ಯಸ್ಥ ರಾಕೇಶ್​ ಟಿಕೈಟ್​ 80 ಕೋಟಿ ರೂ. ಆಸ್ತಿ ಒಡೆಯ! 4 ರಾಜ್ಯಗಳಲ್ಲಿದೆ ಕೋಟಿ ಕೋಟಿ ಬೆಲೆಯ ಆಸ್ತಿ!
ಜನವರಿ 26 ರಂದು ನಡೆದ ಹಿಂಸಾಚಾರದ ಹಿಂದಿನ “ಸಂಚನ್ನು” ಬಯಲುಗೊಳಿಸಲು ಮತ್ತು ರೈತರ ವಿರುದ್ಧ ಹಾಕಿದೆ ಎನ್ನಲಾದ “ಸುಳ್ಳು ಕೇಸುಗಳ” ಬಗ್ಗೆ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು ತನಿಖೆ ನಡೆಸಬೇಕು ಎಂದು ತಂಡದ ಸದಸ್ಯ ಕುಲ್​ದೀಪ್​ ಸಿಂಗ್ ಕೋರಿದ್ದಾರೆ. ಟ್ರ್ಯಾಕ್ಟರ್ ಪೆರೇಡ್​ನಲ್ಲಿ ಭಾಗವಹಿಸಿದ 16 ರೈತರು ಕಾಣೆಯಾಗಿದ್ದಾರೆ. ದೆಹಲಿ ಪೊಲೀಸರು ಸುಳ್ಳು ಕೇಸುಗಳಲ್ಲಿ ಸಿಕ್ಕಿಹಾಕಿಸುವ ಉದ್ದೇಶದಿಂದ ಹಲವಾರು ರೈತರಿಗೆ ನೋಟೀಸು ಜಾರಿ ಮಾಡುತ್ತಿದ್ದಾರೆ ಎಂದಿದ್ದಾರೆ.
ರವೀಂದರ್ ಸಿಂಗ್ ಮಾತನಾಡಿ, 14 ಕೇಸುಗಳಲ್ಲಿ 122 ರೈತರನ್ನು ಬಂಧಿಸಲಾಗಿದೆ. ಅವುಗಳಲ್ಲಿ ಹತ್ತು ಜನರಿಗೆ ಜಾಮೀನು ಸಿಕ್ಕಿದ್ದು, ಇನ್ನೂ ಐದು ಜಾಮೀನು ಅರ್ಜಿಗಳನ್ನು ಸಲ್ಲಿಸಲಾಗಿದೆ. ಚಿಕ್ಕಪುಟ್ಟ ಆರೋಪಗಳನ್ನು ಎದುರಿಸುತ್ತಿರುವ ರೈತರ ಬಿಡುಗಡೆಗೆ ಆದ್ಯತೆ ನೀಡಲಾಗುತ್ತಿದೆ ಎಂದಿದ್ದಾರೆ.(ಏಜೆನ್ಸೀಸ್)
ರೈತ ಪ್ರತಿಭಟನೆ ಸ್ಥಳಕ್ಕೆ ಮಹಾತ್ಮ ಗಾಂಧಿ ಮೊಮ್ಮಗಳ ಭೇಟಿ

‘ಯಾವ ಭಾರತೀಯನೂ ಈ ದಿನವನ್ನು ಮರೆಯಲು ಸಾಧ್ಯವಿಲ್ಲ’ : ಪುಲ್ವಾಮಾ ಸೈನಿಕರಿಗೆ ಮೋದಿ ನಮನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
