ಕೊಚ್ಚಿ:ಸುಮಾರು 14 ಕೋಟಿ ರೂಪಾಯಿ ವೆಚ್ಚದಲ್ಲಿ ಅನಿವಾಸಿ ಉದ್ಯಮಿ ನಿರ್ಮಾಣ ಮಾಡಿರುವ ಮಕ್ಕಳ ಕ್ರೀಡಾ ಉದ್ಯಾನವನದ ಭಾಗವಾಗಿರುವ ಆರು ಅಂತಸ್ತಿನ ಕಟ್ಟಡಕ್ಕೆ ಅನುಮತಿ ನೀಡಲು 20 ಸಾವಿರ ರೂಪಾಯಿ ಲಂಚ ಹಾಗೂ ಒಂದು ಸ್ಕಾಚ್​ಗೆ ಬೇಡಿಕೆ ಇಟ್ಟಿದ್ದ ಪಂಚಾಯಿತಿಯ ಸಹಾಯಕ ಇಂಜಿನಿಯರ್​ನನ್ನು ಕೇರಳ ವಿಜಿಲೆನ್ಸ್ ಅಧಿಕಾರಿಗಳು ಬಲೆಗೆ ಬೀಳಿಸಿದ್ದಾರೆ.
ಬಂಧಿತನನ್ನು ಇಟಿ ಅಜಿತ್​ ಕುಮಾರ್​ (38) ಎಂದು ಗುರುತಿಸಲಾಗಿದೆ. ಈತ ಇರುಂಬಯಂ ವೈಕೋಮ್ ಮೂಲದವನು. ಮಂಜೂರ್​ ಪಂಚಾಯಿತಿಯಲ್ಲಿ ಸಹಾಯಕ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದ.
ಕಟ್ಟಡದ ಅನುಮತಿಗಾಗಿ 2020ರಲ್ಲಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ, ಅನುಮತಿಯನ್ನು ನಿರಾಕರಿಸಲಾಯಿತು. ಇದಾದ ಬಳಿಕ ಇದೇ ಜ.23ರಂದು ಇಂಜಿನಿಯರ್​ ಅಜಿತ್​ ಕುಮಾರ್​ನನ್ನು ಖುದ್ದು ಭೇಟಿ ಮಾಡಿದಾಗ, ಪರವಾನಿಗೆ ಪಡೆಯಲು ಏನಾದರೂ ಕೊಡಬೇಕಾಗುತ್ತದೆ ಅಂತಾ ಲಂಚಕ್ಕೆ ಬೇಡಿಕೆ ಇಟ್ಟನು. ಈ ವೇಳೆ ಉದ್ಯಮಿ 5000 ರೂಪಾಯಿಯನ್ನು ಸಹಾಯಕ ಇಂಜಿನಿಯರ್‌ಗೆ ನೀಡಿದ. ಆದರೆ, ಅದು ನಿರೀಕ್ಷೆಗಿಂತ ಕಡಿಮೆಯಾಗಿದೆ ಎಂದು ಆತ ಹೇಳಿದ. ಬಳಿಕ ಉದ್ಯಮಿ ಏನು ಬೇಕಾದರೂ ಪಾವತಿಸಲು ಒಪ್ಪಿಕೊಂಡರು.
ನಿನ್ನೆ (ಜ.28) ಬೆಳಗ್ಗೆ ಸಹಾಯಕ ಇಂಜಿನಿಯರ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ಅವರು ಕಡತ ಅನುಮೋದನೆಗಾಗಿ 20 ಸಾವಿರ ರೂಪಾಯಿ ಮತ್ತು ಸ್ಕಾಚ್ ಬಾಟಲಿಯನ್ನು ಕೇಳಿದರು ಮತ್ತು ಅದನ್ನು ಕಾರ್ಯದರ್ಶಿಗೆ ಕಳುಹಿಸುವಂತೆ ಇಂಜಿನಿಯರ್​ ಹೇಳಿದ್ದ. ಬಳಿಕ ಈ ಸಂಬಂಧ ವಿಜಿಲೆನ್ಸ್ ಎಸ್ಪಿ ವಿ.ಜಿ.ವಿನೋದಕುಮಾರ್ ಅವರಿಗೆ ದೂರು ನೀಡಲಾಗಿತ್ತು. 20 ಸಾವಿರ ರೂ. ಹಣ ನೀಡುವಾಗ ಅಜಿತ್​ಕುಮಾರ್​ನನ್ನು ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ.
ಕಚೇರಿ ಅವಧಿಯ ನಂತರ ಬಾಟಲಿ ವಿತರಿಸಬೇಕು ಎಂದು ಹೇಳಿದ್ದರಿಂದ ಬಾಟಲಿ ಸಿಗಲಿಲ್ಲ. ಇಂಜಿನಿಯರ್​ ಬಂಧನದ ಬಳಿಕ ವಿಜಿಲೆನ್ಸ್ ಸೂಚನೆಯಂತೆ ಪಂಚಾಯಿತಿ ಕಾರ್ಯದರ್ಶಿ ದಾಖಲೆಗಳನ್ನು ಪರಿಶೀಲಿಸಿ ಉದ್ಯಮಿಗೆ ಪರವಾನಗಿ ನೀಡಲಾಯಿತು.(ಏಜೆನ್ಸಿಸ್​)
ನ್ಯಾಯ ನಿಷ್ಠುರಿ ನಾರಾಯಣರಿಗೆ 80!

ನಿರೀಕ್ಷೆ ಅಪಾರ, ದಾರಿ ಕ್ಲಿಷ್ಟಕರ; ಸಮತೋಲಿತ ಬಜೆಟ್ ಮಂಡಿಸುವ ಸವಾಲು

ಕಡೆಗೂ ಬಂದಿಯಾದ ಚಾಲಾಕಿ: ಆ ಕ್ಷಣ ಅಂಕಣ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − seven =
Remember me
