ನವದೆಹಲಿ:ಭಾರತದಲ್ಲಿ ಈ ಬಾರಿಯೂ ಮುಂಗಾರು ಋತುವಿನಲ್ಲಿ ವಾಡಿಕೆಯಂತೆ ಮಳೆಯಾಗುವ ಸಾಧ್ಯತೆ ಇದೆಯೆಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಅಂದಾಜಿಸಿದೆ.
ಜೂನ್​ನಿಂದ ಸೆಪ್ಟೆಂಬರ್​ವರೆಗಿನ ಮುಂಗಾರು ಋತುವಿನಲ್ಲಿ ದೇಶದಲ್ಲಿ ವಾಡಿಕೆಯಂತೆ ಮಳೆಯಾಗಲಿದೆ. ಈ ಬಾರಿಯ ಮುಂಗಾರು ಬಹುತೇಕವಾಗಿ ಸಮಾನವಾಗಿ ಹಂಚಿಕೆಯಾಗಲಿದೆ. ಭಾರತ ಪರ್ಯಾಯ ದ್ವೀಪದ ಉತ್ತರ ಭಾಗದ ಬಹಳಷ್ಟು ಭಾಗಗಳು, ಅದಕ್ಕೆ ತಾಗಿದಂತಿರುವ ಮಧ್ಯ ಭಾರತ, ಹಿಮಾಲಯದ ತಪ್ಪಲು ಹಾಗೂ ವಾಯವ್ಯ ಭಾರತದ ಕೆಲವು ಭಾಗಗಳಲ್ಲಿ ಸಾಧಾರಣ ಹಾಗೂ ಸಾಧಾರಣಕ್ಕಿಂತ ಅಧಿಕ ವರ್ಷಧಾರೆ ಆಗಬಹುದು. ಈಶಾನ್ಯ ಭಾರತ, ವಾಯವ್ಯ ಭಾರತದ ಹಲವು ಭಾಗಗಳು ಮತ್ತು ದಕ್ಷಿಣ ಪರ್ಯಾಯ ದ್ವೀಪದ ಅನೇಕ ಕಡೆ ಸಾಧಾರಣಕ್ಕಿಂತ ಕಡಿಮೆ ಮಳೆಯಾಗುವ ಸಂಭವವಿದೆ ಎಂದು ಮುಂಗಾರು ಕುರಿತ ಪ್ರಥಮ ಅಧಿಕೃತ ವರದಿಯಲ್ಲಿ್ಲ ಐಎಂಡಿ ವಿವರಿಸಿದೆ.
ದೇಶದಲ್ಲಿ ಈ ಬಾರಿ ವಾಡಿಕೆಯಷ್ಟೇ ಮುಂಗಾರು ಮಳೆ ಬೀಳಲಿದೆ. ಶೇ.99 ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಸ್ಕೈಮೇಟ್ ಸಹ ಶೇ.98 ಮಳೆಯಾಗಲಿದೆ ಎಂದು ಹೇಳಿದೆ. ಪ್ರಸ್ತುತ ಬೇಸಿಗೆಯಲ್ಲಿ ವಾಡಿಕೆಗಿಂತ ಕಡಿಮೆ ಉಷ್ಣಾಂಶ ದಾಖಲಾದ ಹಿನ್ನೆಲೆಯಲ್ಲಿ ವಾಡಿಕೆಯಷ್ಟೇ ಮಳೆಯಾಗುವುದಕ್ಕೆ ಕಾರಣವಾಗಿದೆ. ಈ ಬಾರಿ ಮುಂಗಾರು ಮಾರುತಗಳ ಪ್ರವೇಶಿಸಿದ ಬಳಿಕ ಕರ್ನಾಟಕದಲ್ಲಿಯೂ ಉತ್ತಮ ಮಳೆ ಸುರಿಯಲಿದೆ.
| ಡಾ.ಶ್ರೀನಿವಾಸರೆಡ್ಡಿಹವಾಮಾನ ತಜ್ಞ
ತಟಸ್ಥ ಐಒಡಿ
ಪ್ರಸ್ತುತ ಹಿಂದು ಮಹಾಸಾಗರದ ಮೇಲಿನ ಇಂಡಿಯನ್ ಓಷನ್ ಡೈಪೋಲ್ (ಐಒಡಿ) ತಟಸ್ಥವಾಗಿದೆ. ಮುಂಗಾರು ಮಾರುತ ಋತು ಆರಂಭವಾಗುವ ವರೆಗೆ ಈ ಪರಿಸ್ಥಿತಿ ಮುಂದುವರಿ ಯಬಹುದು. ಅದಾದ ನಂತರ, ಋಣಾತ್ಮಕ ಐಒಡಿ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಐಎಂಡಿ ತಿಳಿಸಿದೆ.
ಐಒಡಿ ಎಂದರೇನು?:ಐಒಡಿಯನ್ನು ‘ಭಾರತೀಯ ನಿನೊ’ ಎಂದೂ ಹೇಳಲಾಗುತ್ತದೆ. ಸಮುದ್ರದ ಮೇಲಿನ ಉಷ್ಣತೆಯಲ್ಲಿನ ಅನಿಯಮಿತ ಏರುಪೇರನ್ನು ಐಒಡಿ ಎಂದು ಕರೆಯುತ್ತಾರೆ. ಅದರ ಪರಿಣಾಮವಾಗಿ ಹಿಂದು ಮಹಾಸಾಗರದ ಪಶ್ಚಿಮ ಭಾಗ ಪರ್ಯಾಯವಾಗಿ ಬಿಸಿಯಾಗುತ್ತದೆ ಹಾಗೂ ನಂತರ ಸಾಗರದ ಪೂರ್ವ ಭಾಗಕ್ಕಿಂತ ಹೆಚ್ಚು ತಣ್ಣಗಾಗುತ್ತದೆ.
ನಾಲ್ಕನೆಯ ವರ್ಷ:ಈ ಹಿಂದಿನ ಮೂರು ವರ್ಷ ಮುಂಗಾರು ಅವಧಿಯಲ್ಲಿ ವಾಡಿಕೆಯಂತೆ ಮಳೆಯಾಗಿದೆ. ಹೀಗಾಗಿ ಕೃಷಿ ಮೇಲೆ ಗಂಭೀರ ಪರಿಣಾಮ ಕಾಣಿಸಿಲ್ಲ.
ಇನ್ನೊಂದು ವರದಿ:ಮೇ ಅಂತ್ಯಕ್ಕೆ ಮತ್ತೊಮ್ಮೆ ನೈಋತ್ಯ ಮಾರುತಗಳ ಪ್ರವೇಶ ಸಾಧ್ಯತೆ, ಸಂಭಾವ್ಯ ಮಳೆ ಪ್ರಮಾಣ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಲಿದೆ.
ನಾವು ರಾಜೀನಾಮೆ ಕೇಳಿಲ್ಲ, ಆದ್ರೆ ಈಶ್ವರಪ್ಪ ಬಂಧನ ಆಗ್ಬೇಕು; ಸಂತೋಷ್ ಸಹೋದರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − twelve =
Remember me
