ಬೆಂಗಳೂರು:ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಏರಲು 2023ರ ವಿಧಾನಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಆಡಳಿತಾರೂಢ ಬಿಜೆಪಿ, “ಯುದ್ಧ ಕಾಲ’ಕ್ಕೆ ಬೇಕಾಗಿರುವ ಮಹಾ ದಂಡನಾಯಕನ ಆಯ್ಕೆ ವಿಚಾರದಲ್ಲಿ ದ್ವಂದ್ವಕ್ಕೆ ಸಿಲುಕಿದೆ. ಇದೇ ಕಾರಣಕ್ಕೆ ತೀರ್ಮಾನ ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಕ್ಕೆ ವೇಗ, ಪರಿಣಾಮಕಾರಿ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ ಮತ್ತು ಸಂಟನಾತ್ಮಕ ಆಕ್ರಮಣಕಾರಿ ಶೈಲಿ ಕೈಗೂಡಿಲ್ಲವೆಂಬ ಬೇಗುದಿ ದೂರವಾಗಿಲ್ಲ. ಜನಪ್ರಿಯ ಕಾರ್ಯಕ್ರಮಗಳು, ಮುಖ್ಯಮಂತ್ರಿ ಹಾಗೂ ಸಚಿವರ ಸುತ್ತಾಟ, ಸಂಟನೆಯಲ್ಲಿ ಚೈತನ್ಯ ತುಂಬುವ ಕಾರ್ಯಯೋಜನೆ ಜಾರಿಯಲ್ಲಿದ್ದರೂ ನಿರೀತ ಲ ನೀಡುವ ಖಾತರಿಯಿಲ್ಲ. ಪಕ್ಷದ ರಾಜ್ಯ ನಾಯಕತ್ವ ಕ್ಷಮತೆ ಸಾಲದು ಎಂಬ ಭಾವನೆ ಕೆಲವು ಹಿರಿಯ ನಾಯಕರಲ್ಲಿದ್ದು, ಗಟ್ಟಿ ನಿರ್ಧಾರಕ್ಕೆ ಕಾಲಾವಕಾಶ ಕೊರತೆ ಅಡ್ಡಗಾಲು ಹಾಕಿದೆ.
ಪಕ್ಷದ ರಾಜ್ಯಾಧ್ಯಕ್ಷರನ್ನು ಬದಲಾಯಿಸಿದರೆ ರಾಜ್ಯ, ಜಿಲ್ಲಾ, ಮೋರ್ಚಾ, ಪ್ರಕೋಷ್ಠಗಳ ಬದಲಾವಣೆ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆ ಮುಗಿಸಲು 2&3 ತಿಂಗಳು ಬೇಕಾಗಬಹುದು. ಸಾಂಸ್ಥಿಕ ಚುನಾವಣೆಗೆ ಇಷ್ಟು ಕಾಲಾವಕಾಶ ತೆಗೆದುಕೊಂಡರೆ, ವಿಧಾನಸಭೆ ಚುನಾವಣೆ ಗತಿ ಏನು? ಎಂಬ ಪ್ರಶ್ನೆಯು ಕಾಡುತ್ತಿದ್ದು, ವರಿಷ್ಠರ ತೊಳಲಾಟಕ್ಕೆ ಎಡೆಮಾಡಿಕೊಟ್ಟಿದೆ. ಕಾಲಾವಕಾಶ ಕೊರತೆ ಕಾರಣಕ್ಕೆ ಕೈಬಿಡುವ ಸ್ಥಿತಿಯೂ ಇಲ್ಲ. ಎರಡನ್ನೂ ಸರಿದೂಗಿಸುವ ಸೂಕ್ತ, ಸಮರ್ಥ ಮಾಗೋರ್ಪಾಯದ ಗಂಭೀರ ಚಿಂತನೆ ನಡೆದಿದೆ ಎಂದು ಮೂಲಗಳು ಹೇಳಿವೆ.
ಕಾಂಗ್ರೆಸ್​ ದಾಪುಗಾಲು:ಆಂತರಿಕ ಸಮಸ್ಯೆ, ಹಲವು ತೊಡಕುಗಳ ನಡುವೆಯೂ ಪ್ರತಿಪಕ್ಷ ಕಾಂಗ್ರೆಸ್​ ಚುನಾವಣೆ ಪೂರ್ವ ಚಟುವಟಿಕೆಗಳಲ್ಲಿ ಮುಂದಿರುವುದು ಕಮಲಪಡೆ ರಾಜ್ಯ ನಾಯಕರನ್ನು ಚಿಂತೆಯ ಕುಲುಮೆಗೆ ದೂಡಿದೆ. ಬೆಂಗಳೂರಿನಲ್ಲಿ ಸೆ.11ರಂದು ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಿಗದಿಯಾಗಿದೆ. ಸೆ.12ರಿಂದ ವಿಧಾನ ಮಂಡಲ ಅಧಿವೇಶನ ಶುರುವಾಗಲಿದ್ದು, ರಾಜ್ಯ ನಾಯಕರ ತಂಡಗಳ ಸಂಚಾರವೇ ತೂಗುಯ್ಯಾಲೆಯಲ್ಲಿದೆ. ನಾವಿನ್ನೂ ಮಿಷನ್​ 150, ಜನೋತ್ಸವಕ್ಕೆ ತಯಾರಿ, ಸಂಟನಾ ಪ್ರವಾಸಕ್ಕೆ ತಂಡಗಳ ರಚನೆ ಅಂತಲೇ ಚರ್ಚಿಸುತ್ತಾ ಕಾಲ ಕಳೆಯುತ್ತಿದ್ದೇವೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಬೇಸರ ಹೊರ ಹಾಕಿದರು.
ಮೋದಿ, ಯೋಗಿ ಮೆರುಗಿನ ವಿಶ್ವಾಸಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ರಾಜ್ಯ ಪ್ರವಾಸ ಮಾಡಲಿದ್ದು, ಇತ್ತೀಚಿನ ಟನೆಗಳಿಂದ ಕಳಾಹೀನವಾದ ಸಂಟನೆಗೆ ಮೆರುಗು ತುಂಬುವ ವಿಶ್ವಾಸ ಚಿಗುರೊಡೆದಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮಕ್ಕಾಗಿ ಸೆ.1ರಂದು ಯೋಗಿ ಆದಿತ್ಯನಾಥ ಬರುತ್ತಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೆ ಯೋಗಿ ಭೇಟಿ ಸೀಮಿತವಾಗಿದ್ದರೂ ಸರ್ಕಾರ ಮತ್ತು ಪಕ್ಷದಲ್ಲಿ ಉತ್ಸಾಹ ಹೆಚ್ಚಿಸಲಿದೆ ಎಂಬ ನಿರೀೆಯಿದೆ. ಮೋದಿಯವರು ಒಂದೂವರೆ ತಿಂಗಳ ಅವಧಿಯಲ್ಲಿ ಮತ್ತೊಮ್ಮೆ ರಾಜ್ಯಕ್ಕೆ ಬರುತ್ತಿದ್ದು, ಸೆ.2ರ ಮಂಗಳೂರು ಭೇಟಿಯೂ ಸರ್ಕಾರ ಕಾರ್ಯಕ್ರಮಗಳ ಭಾಗವಾಗಿದೆ. ಕಳೆದ ಬಾರಿ ಬೆಂಗಳೂರು, ಮೈಸೂರು ಪ್ರವಾಸದಲ್ಲಿ ಡಬಲ್​ ಇಂಜಿನ್​ ಸರ್ಕಾರದ ಪ್ರಯೋಜನ, ಏನೆಲ್ಲ ಅನುಕೂಲ ಸಿಗಲಿದೆ ಎಂಬ ಸಂದೇಶ ಸಾರಿದ್ದರು. ಈ ಬಾರಿಯೂ ಮತ್ತೊಂದು ವಿಭಿನ್ನ ಸಂದೇಶ ನೀಡುವುದು ನಿಶ್ಚಿತ ಎನ್ನಲಾಗಿದೆ.
ಕಾರ್ಯಕರ್ತರ ಪಡೆ ಬಲಗೊಳಿಸಲು ಕಸರತ್ತು
ವಿಧಾನಸಭೆ ಚುನಾವಣೆ ಸಮೀಪಿ ಸುತ್ತಿದ್ದಂತೆ ಕಾರ್ಯಚಟುವಟಿಕೆ ತೀವ್ರಗೊಳಿಸಿರುವ ಬಿಜೆಪಿ ಬೂತ್​ ಮಟ್ಟದ ಸಂಟನೆಗೆ ಹೆಚ್ಚಿನ ಒತ್ತು ನೀಡಿದೆ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಮುಖಂಡರ ಸಭೆ ನಡೆಸುವ ಮೂಲಕ ಕಾರ್ಯಕರ್ತ ರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕು ಎಂದು ಹೈಕಮಾಂಡ್​ ತಾಕೀತು ಮಾಡಿದೆ.ಈ ಹಿನ್ನೆಲೆಯಲ್ಲಿ ಇದೇ ಮಾಹಿತಿಯನ್ನು ಶಾಸಕರು, ಮಾಜಿ ಶಾಸಕರು ಮತ್ತು ಸಚಿವರಿಗೆ ರವಾನಿಸಲಾಗಿದೆ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರವಾಸ ಮಾಡುವ ಸಂದರ್ಭದಲ್ಲಿ ಬಿಜೆಪಿ ಕಚೇರಿಗೂ ಭೇಟಿ ನೀಡಿ ಕಾರ್ಯಕರ್ತರ ಸಭೆ ನಡೆಸಬೇಕು. ಸರ್ಕಾರದ ಯೋಜನೆಗಳನ್ನು ಬೂತ್​ ಮಟ್ಟದ ತನಕ ಪ್ರಚಾರ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಗೌರಿ ಗಣೇಶ ಹಬ್ಬದ ಬಳಿಕ ಪಕ್ಷದ ಸಂಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಮುಂದೆ ಎದುರಾಗಬಹುದಾದ ಎಲ್ಲ ಚುನಾವಣೆಗೂ ಕಾರ್ಯಕರ್ತರ ಪಡೆಯನ್ನು ಈಗಿನಿಂದಲೇ ಸಿದ್ಧಪಡಿಸಲು ಪಕ್ಷ ನಿರ್ಧರಿಸಿ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಟೀಲ್​ ಮುಂದುವರಿಕೆಗೆ ಭಿನ್ನಾಭಿಪ್ರಾಯಬಿಜೆಪಿ ಅಧ್ಯಕ್ಷರನ್ನಾಗಿ ನಳೀನ್​ ಕುಮಾರ್​ ಕಟೀಲ್​ ಮುಂದುವರಿಕೆಗೆ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿದೆ. ಕಟೀಲು ಹುದ್ದೆ ವಹಿಸಿಕೊಂಡು ಮೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಲವರ ಹೆಸರು ಕೇಳಿ ಬರುತ್ತಿದೆ. ಆದರೆ, ಇವರಿಗೆ ಮತ್ತೊಂದು ಅವಕಾಶ ನೀಡಿ ಮುಂದುವರಿಸಬೇಕು ಎನ್ನುವ ನಿಟ್ಟಿನಲ್ಲಿ ಸಂತೋಷ್​ ಅವರ ಬಣ ಸಕ್ರಿಯವಾಗಿದೆ. ಆದರೆ ಸದ್ಯದ ಪರಿಸ್ಥಿತಿ ಭಿನ್ನವಾಗಿದ್ದು, ಚುನಾವಣೆ ಕದನಕ್ಕೆ ಪಕ್ಷ ಸಜ್ಜುಗೊಳಿಸುವ ನಿಟ್ಟಿನಲ್ಲಿ ನಾಯಕತ್ವ ಮಹತ್ವವಾಗುತ್ತದೆ. ಆದ್ದರಿಂದ ಡೈನಾಮಿಕ್​ ಇರುವವರನ್ನು ಆ ಹುದ್ದೆಗೆ ತರುವುದು ಸೂಕ್ತ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ನಡುವೆ ಪ್ರಧಾನಿ ಮೋದಿ ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಂಟನಾ ಶಕ್ತಿಯಾಗಿ ತೋರಿಸಿಕೊಳ್ಳಲು ಕಟೀಲ್​ ಮುಂದಾಗಿದ್ದಾರೆ ಎನ್ನುವ ಮಾತುಗಳು ಪಕ್ಷದ ವಲಯದಲ್ಲಿಯೇ ಕೇಳಿ ಬರುತ್ತಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 19 =
Remember me
