ನವದೆಹಲಿ:ಮೊದಲೆಲ್ಲಾ ಕ್ರಿಕೆಟ್ ಆಟ ಟಿವಿ ಲೈವ್ ನೋಡುತ್ತಿದ್ದ ವೀಕ್ಷಕರು ಮೈದಾನಕ್ಕೆ ಬಂದು ಆಟ ವೀಕ್ಷಿಸುತ್ತಿದ್ದಾರೆ. ಏಕೆಂದರೆ ಈ ಜನಪ್ರಿಯತೆಗೆ ಇನ್ನೊಂದು ಮುಖ್ಯವಾದ ಕಾರಣ.ಕ್ರಿಕೆಟ್ ಇನ್ನೂ ಜನಪ್ರಿಯತೆ ಕಳೆದುಕೊಂಡಿಲ್ಲ ಎಂಬುದು ಸಾಬೀತಾಗಿದೆ. ವಿಶ್ವ ಕಪ್​ ವೀಕ್ಷಕರ ಸಂಖ್ಯೆಯಲ್ಲಿ ಹೊಸ ದಾಖಲೆಯಾಗಿದೆ.
ಭಾರತದಲ್ಲಿ ನಡೆದ ವಿಶ್ವ ಕಪ್ 2023ರ​ ಟೂರ್ನಿಯ ಲೀಗ್ ಹಂತದ ಪಂದ್ಯಗಳನ್ನು ಇಲ್ಲಿವರೆಗೆ 10 ಲಕ್ಷ ಮಂದಿ ಸ್ಟೇಡಿಯಂನಲ್ಲಿ ವೀಕ್ಷಣೆ ಮಾಡುವ ಮೂಲಕ ಇದು ಏಕ ದಿನ ವಿಶ್ವಕಪ್​​ ಇತಿಹಾಸದಲ್ಲಿಯೇ ಸಾರ್ವಕಾಲಿಕ ದಾಖಲೆಯಾಗಿದೆ. ಈ ಮೂಲಕ ಏಕ ದಿನ ಕ್ರಿಕೆಟ್ ಇನ್ನೂ ಜನಪ್ರಿಯತೆ ಕಳೆದುಕೊಂಡಿಲ್ಲ ಎಂಬುದು ಸಾಬೀತಾಗಿದೆ.
Our vision was to make this World Cup the greatest ever and I am truly delighted that we have broken all previous records. My sincere thanks to our devoted fans, the State Associations and every stakeholder who worked tirelessly in the run-up to this mega event. As we now…https://t.co/eYqFZrUrEd
— Jay Shah (@JayShah)November 11, 2023

ನವೆಂಬರ್ 15 ಮತ್ತು 16 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯಗಳು ಮತ್ತು ನವೆಂಬರ್ 19ರಂದು ಫೈನಲ್ ಪಂದ್ಯಗಳು ಇನ್ನೂ ಬಾಕಿ ಇವೆ. ಅದಕ್ಕಿಂತ ಮೊದಲೇ ಇದುವರೆಗಿನ ಗರಿಷ್ಠ ಪ್ರಮಾಣದ ಪ್ರೇಕ್ಷಕರನ್ನು ವಿಶ್ವ ಕಪ್​ ಕಂಡಿದೆ. ಇದೇ ವೇಳೆ ಡಿಜಿಟಲ್ ವೀಕ್ಷಣೆಗಯ ದಾಖಲೆಗಳೂ ಮುರಿದಿವೆ.
ಈ ಮೈಲಿಗಲ್ಲಿನ ಬಗ್ಗೆ ಮಾತನಾಡಿದ ಐಸಿಸಿ ಈವೆಂಟ್ಸ್ ಮುಖ್ಯಸ್ಥ ಕ್ರಿಸ್ ಟೆಟ್ಲಿ, ” 10 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಕ್ರಿಕೆಟ್​ ಜಾತ್ರೆಯಲ್ಲಿ ಭಾವಹಿಸುವ ಮೂಲಕ ದಾಖಲೆ ಮುರಿಯಲಾಗಿದೆ. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ಇರುವ ಏಕದಿನ ಸ್ವರೂಪದ ಮೇಲಿನ ಬೆಂಬಲ ಮತ್ತು ಆಸಕ್ತಿಯನ್ನು ಸಾಬೀತುಪಡಿಸಿದೆ. ಇದು ವಿಶ್ವಕಪ್ ಕ್ರಿಕೆಟ್​ಗೆ ಎಷ್ಟು ಮೌಲ್ಯವಿದೆ ಎಂಬುದನ್ನು ಎತ್ತಿ ತೋರಿಸಿದೆ ಎಂದಿದ್ದಾರೆ. ಹೇಳಿದ್ದಾರೆ.
ದಾಖಲೆಯ ಬಗ್ಗೆ ಪ್ರತಿಕ್ರಿಯಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ನಾವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದ್ದೇವೆ ಎಂದು ನನಗೆ ನಿಜವಾಗಿಯೂ ಸಂತೋಷವಾಗುತ್ತಿದೆ. ಈ ಮೆಗಾ ಕಾರ್ಯಕ್ರಮಕ್ಕೆ ಮುನ್ನ ದಣಿವರಿಯದೆ ಕೆಲಸ ಮಾಡಿದ ನಮ್ಮ ನಿಷ್ಠಾವಂತ ಅಭಿಮಾನಿಗಳು, ರಾಜ್ಯ ಸಂಘಗಳು ಮತ್ತು ಪ್ರತಿಯೊಬ್ಬ ಪಾಲುದಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಎಂದು ಅವರು ಬರೆದಿದ್ದಾರೆ.
ಏಕದಿನ ವಿಶ್ವಕಪ್‌ 2023 ಬಳಿಕ ಪಾಕಿಸ್ತಾನ ತಂಡದ ನಾಯಕತ್ವ ತ್ಯಜಿಸಲು ಬಾಬರ್ ಅಜಾಮ್‌ ನಿರ್ಧಾರ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:5 × 4 =
Remember me
