ನವದೆಹಲಿ:ಸುಪ್ರೀಂಕೋರ್ಟ್​ನ ಹಾಲಿ ನ್ಯಾಯಮೂರ್ತಿಗಳು ಪ್ರತಿದಿನ ಒಂದು ಕೇಸ್​ಗೆ ಸರಾಸರಿ 208 ರೂ. ವೇತನ ಪಡೆದರೆ, ಹಿರಿಯ ವಕೀಲರು ಒಂದು ಕೇಸ್​ಗೆ ಲಕ್ಷಕ್ಕೂ ಅಧಿಕ ಹಣ ಸಂಪಾದಿಸುತ್ತಿದ್ದಾರೆ! ಇಂಥದ್ದೊಂದು ಅಚ್ಚರಿಯ ಮಾಹಿತಿ ಈಗ ಹೊರಬಿದ್ದಿದೆ. ಸುಪ್ರೀಂಕೋರ್ಟ್​ನ ಒಬ್ಬ ಹಾಲಿ ನ್ಯಾಯಮೂರ್ತಿ ಇಡೀ ತಿಂಗಳು ಗಳಿಸುವ ಆದಾಯವನ್ನು ಒಬ್ಬ ನಿವೃತ್ತ ಜಡ್ಜ್ ಕೇವಲ ಎರಡು ಗಂಟೆಯಲ್ಲಿ ಗಳಿಸಬಹುದು!
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಮಾಸಿಕ ವೇತನ ಸುಮಾರು 2.5 ಲಕ್ಷ ರೂಪಾಯಿ. ಅಂದರೆ ದೈನಿಕ ಸುಮಾರು 8,333 ರೂಪಾಯಿ. ಪ್ರತಿ ಕೆಲಸದ ದಿನ ಅವರು ಸರಾಸರಿ 40 ಕೇಸ್​ಗಳಲ್ಲಿ ವಾದಗಳನ್ನು ಆಲಿಸುತ್ತಾರೆ. ಅಂದರೆ, ಪ್ರತಿ ಕೇಸ್​ಗೆ 208 ರೂಪಾಯಿ ಆಗುತ್ತದೆ. ಆದರೆ, ಕೇಸ್​ನಲ್ಲಿ ವಾದಿಸುವ ಹಿರಿಯ ಅನುಭವಿ ವಕೀಲರು ಪ್ರತಿ ಕೇಸ್​ಗೆ ದಿನವೊಂದಕ್ಕೆ ಲಕ್ಷಾಂತರ ರೂಪಾಯಿ ಶುಲ್ಕ ಪಡೆಯುತ್ತಾರೆ. ಯಾವ ಹಿರಿಯ ವಕೀಲರೂ ದಿನವೊಂದಕ್ಕೆ 40 ಪ್ರಕರಣಗಳಲ್ಲಿ ವಾದ ಮಾಡುವುದಿಲ್ಲ. ಆದರೆ ನ್ಯಾಯಮೂರ್ತಿಗಳು ಮರುದಿನ ವಿಚಾರಣೆಗೆ ಬರುವ ಪ್ರಕರಣಗಳಲ್ಲಿ ಮಂಡಿಸಲಾಗುವ ಕಾನೂನು ವಾದಗಳ ವಿಚಾರದಲ್ಲಿ ಪ್ರತಿ ದಿನ ಸಂಜೆ ಕುಳಿತು ತಯಾರಿ ಮಾಡಿಕೊಳ್ಳುತ್ತಾರೆ.
ನಿವೃತ್ತಿಗೆ ತವಕ!:ಸವೋಚ್ಚ ನ್ಯಾಯಾಲಯದ ಅನೇಕ ಜಡ್ಜ್ ಗಳು ನಿವೃತ್ತಿಯನ್ನು ಎದುರು ನೋಡುತ್ತಿರುತ್ತಾರೆ. ನಿವೃತ್ತಿಯ ನಂತರ ಮಧ್ಯಸ್ಥಿಕೆ ತಜ್ಞರಾಗಿ ಅಥವಾ ಕಾರ್ಪೆರೇಷನ್ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಸಲಹೆ ನೀಡುವವರಾಗಿ ಕಾರ್ಯ ನಿರ್ವಹಿಸಲು ಅವಕಾಶ ಸಿಗುವುದು ಇದಕ್ಕೆ ಕಾರಣ. ಇದಕ್ಕೆ ಆಕರ್ಷಕ ವೇತನ ಅವರಿಗೆ ಸಿಗುತ್ತದೆ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಮಧ್ಯಸ್ಥಿಕೆಗಾರರಾಗಿ ಎರಡು ಗಂಟೆಯ ಒಂದು ಸಿಟ್ಟಿಂಗ್​ಗೆ 2ರಿಂದ 5 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ.
ಕೆಲವು ಸಾಧಾರಣ ಯಶಸ್ವಿ ಹಿರಿಯ ವಕೀಲರಾದರೆ ದೈನಿಕ ಮೂರು ಸಿಟಿಂಗ್ ಮಾಡುವ ಸಂದರ್ಭವೂ ಇರುತ್ತವೆ. ಯಾವುದಾದರೂ ಪ್ರಕರಣದಲ್ಲಿ ಮಧ್ಯಸ್ಥಿಕೆಗಾರರಾಗಿ ಕಾರ್ಯ ನಿರ್ವಹಿಸುವ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ (ಸಿಜೆಐ) ನಿವೃತ್ತ ನ್ಯಾಯಮೂರ್ತಿಗಳಿಗಿಂತ ಸ್ವಲ್ಪ ಹೆಚ್ಚಿನ ಶುಲ್ಕ ದೊರೆಯುತ್ತದೆ ಎಂಬ ಅಂಶವೂ ಗಮನಾರ್ಹ.
ತಿಂಗಳಿಗೆ 50 ರೂ. ಲಕ್ಷ ಸಂಪಾದನೆ!:‘ನಾನು ಪ್ರತಿ ತಿಂಗಳು ಮೂರರಿಂದ ನಾಲ್ಕು ಪ್ರಕರಣಗಳಲ್ಲಿ ಅಭಿಪ್ರಾಯ ನೀಡಿದ್ದಕ್ಕೆ 30 ರಿಂದ 50 ಲಕ್ಷ ರೂಪಾಯಿ ಸಂಪಾದಿಸುತ್ತೇನೆ. ಒಬ್ಬ ಸಿಟ್ಟಿಂಗ್ ಜಡ್ಜ್​ಗೆ ಊಹಿಸಿಕೊಳ್ಳಲೂ ಆಗದ ಆದಾಯವಿದು’ ಎನ್ನುತ್ತಾರೆ ಒಬ್ಬ ನಿವೃತ್ತ ನ್ಯಾಯಮೂರ್ತಿ. ತಾನು ದಾನ ದತ್ತಿಗಳಿಗೆ ಸಾಕಷ್ಟು ಖರ್ಚು ಮಾಡಿದ ಮೇಲೂ ಸಾಕಷ್ಟು ಹಣ ಉಳಿಯುತ್ತದೆ. ಎರಡು ದಶಕಕ್ಕೂ ಹೆಚ್ಚು ಕಾಲ ಸಾಂವಿಧಾನಿಕ ನ್ಯಾಯಾಲಯಗಳಲ್ಲಿ ಕೆಲಸ ನಿರ್ವಹಿಸಿದ್ದಕ್ಕೆ ದೊರೆತ ಭವಿಷ್ಯ ನಿಧಿ ಹಣಕ್ಕಿಂತಲೂ ಹೆಚ್ಚಿನ ಮೊತ್ತವದು ಎಂದವರು ವಿವರಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + ten =
Remember me
