ನವದೆಹಲಿ:ಭಾರತೀಯ ಸೇನೆಯ ಎಂಟು ಸಿಬ್ಬಂದಿಗೆ ಕರೊನಾ ವೈರಸ್​ ಇರುವುದು ದೃಢಪಟ್ಟ ಬೆನ್ನಲ್ಲೇ ಇನ್ನೊಂದು ಆತಂಕಕಾಗಿ ವಿಚಾರ ಹೊರಬಿದ್ದಿದೆ.
ಭಾರತೀಯ ನೌಕಾಪಡೆಯ 21 ಸೈನಿಕರಲ್ಲಿ ಕರೊನಾ ವೈರಸ್​ ದೃಢಪಟ್ಟಿದೆ. ಮುಂಬೈನ ನೌಕಾ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ 21 ಮಂದಿಗೆ ಕರೊನಾ ಪಾಸಿಟಿವ್​ ಆಗಿದ್ದು, ಉಳಿದ ಸಿಬ್ಬಂದಿಯಲ್ಲೂ ಆತಂಕ ಶುರುವಾಗಿದೆ.ಕರೊನಾ ಸೋಂಕಿತರಲ್ಲಿ 20 ಮಂದಿ ಐಎನ್​​ಎಸ್​ ಆ್ಯಂಗ್ರೆ​ ನೌಕಾ ಹಡಗಿನಲ್ಲಿ ನಾವಿಕರು. 21 ಮಂದಿಯಲ್ಲಿ ಕರೊನಾ ಕಾಣಿಸಿಕೊಂಡ ಬೆನ್ನಲ್ಲೇ ಇನ್ನೂ ಅನೇಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಅಧಿಕವಾಗಿದೆ.ಭಾರತೀಯ ನೌಕಾನೆಲೆಯಲ್ಲಿ ಕರೊನಾ ಭೀತಿ ಶುರುವಾಗಿದೆ.
ಏಪ್ರಿಲ್​ 7ರಂದು ಓರ್ವ ಸಿಬ್ಬಂದಿಯಲ್ಲಿ ಕರೊನಾ ವೈರಸ್​ ದೃಢಪಟ್ಟಿತ್ತು. ಆತನ ಪ್ರಾಥಮಿಕ ಸಂಪರ್ಕಕ್ಕೆ ಹೋದವರನ್ನೆಲ್ಲ ತಪಾಸಣೆಗೆ ಒಳಪಡಿಸಲಾಗಿತ್ತು. ಈ 21ಜನರಲ್ಲಿ ಕರೊನಾ ಸೋಂಕು ಪಾಸಿಟಿವ್​ ಎಂದು ಬಂದಿದ್ದರೂ ಅವರಲ್ಲಿ ಯಾವುದೇ ಲಕ್ಷಣಗಳೂ ಗೋಚರ ಆಗುತ್ತಿಲ್ಲ. ಹಾಗಾಗಿ ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದು ಅನಿವಾರ್ಯವಾಗಿದೆ.ಈ ನೌಕಾನೆಲೆಯನ್ನು ಕರೊನಾ ಅಪಾಯ ಮಟ್ಟದಲ್ಲಿರುವ ವಲಯ ಎಂದು ಗುರುತಿಸಲಾಗಿದ್ದು, ಐಎನ್​ಎಸ್​ ಆ್ಯಂಗ್ರೆ ಹಡಗನ್ನು ಸಂಪೂರ್ಣ ಬಂದ್​ ಮಾಡಲಾಗಿದೆ.
ಈ ಹಡಗಿನಿಂದ ಕೆಲವೇ ಮೀಟರ್​ ಅಂತದಲ್ಲಿ ಇದ್ದ ಯುದ್ಧ ನೌಕೆಗಳು ಮತ್ತು ಜಲಾಂತರ್ಗಾಮಿ ಹಡಗುಗಳಿಗೆ ಸದ್ಯಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 8 =
Remember me
