ನಂದ್ಯಾಲ:ಇತ್ತೀಚಿಗೆ ಹೃದಯಾಘಾತದ ಪ್ರಕರಣದಲ್ಲಿ ತ್ವರಿತವಾಗಿ ಹೆಚ್ಚಳ ಕಂಡು ಬಂದಿದ್ದು, ಯುವಕರು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಯುವಕನೊಬ್ಬ ಮೃತಪಟ್ಟಿರುವ ದಾರುಣ ಘಟನೆಯೊಂದು ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಬೇತಂಚೆರ್ಲಾ ಪಟ್ಟಣದಲ್ಲಿ ನಡೆದಿದೆ.ಪಟ್ಟಣದ ಸಂಜೀವನಗರ ಕಾಲೋನಿಯ ಮಹೇಂದ್ರ(21) ಎಂಬಾತನೇ ಮೃತ ಯುವಕನಾಗಿದ್ದು, ಭಾನುವಾರದಂದು ಮಧ್ಯಾಹ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ಕೂಡಲೇ ಸ್ಥಳೀಯರು ಆತನನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.ಇದನ್ನೂ ಓದಿ:ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಳ: ಮಕ್ಕಳ ಮುಂದೆಯೇ ತಾಯಿಯ ಹತ್ಯೆಮಗನ ಸಾವಿನಿಂದ ಪಾಲಕರು ತೀವ್ರ ನೊಂದಿದ್ದು, ಘಟನೆಯಿಂದ ಸ್ನೇಹಿತರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಎರಡು ದಿನಗಳಲ್ಲಿ ಹಠಾತ್ ಸಾವಿನ ಎರಡನೇ ಪ್ರಕರಣ ಇದಾಗಿದ್ದು, ಮತ್ತೊಂದು ಘಟನೆಯಲ್ಲಿ 35 ವರ್ಷದ ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಮೃತಪಟ್ಟಿದ್ದಾರೆ. ಬಲಿಯಾದ ಪೆದ್ದಈರಣ್ಣ ಅವರು ಕರ್ನೂಲ್‌ನ ಕೋಸಿಗಿ ಮಂಡಲದ ತಿಪ್ಪಲದೊಡ್ಡಿ ಎಂಬ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದನು.ಇತ್ತೀಚಿಗೆ ಸ್ಯಾಂಡಲ್​ವುಡ್​ ನಟ ವಿಜಯ ರಾಘವೇಂದ್ರರ ಪತ್ನಿ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದು, ಇದು ಸಾಮಾನ್ಯ ಎಂಬಂತಾಗಿದೆ. 40 ವಯಸ್ಸಿಗಿಂತ ಕಡಿಮೆಯಿರುವರು ಸಹಿತ ಹೆಚ್ಚೆಚ್ಚು ಹೃದಯಾಘಾತಕ್ಕೆ ಒಳಾಗುತ್ತಿದ್ದಾರೆ. ಇದು ಸಾರ್ವಜನಿಕರನ್ನು ಮಾತ್ರವಲ್ಲದೇ, ವೈದ್ಯಲೋಕವನ್ನೂ ಸಹ ತಲ್ಲಣಗೊಳಿಸಿದೆ. ಒತ್ತಡ, ಜೀವನಶೈಲಿ, ದೈಹಿಕ ಚಟುವಟಿಕೆಯ ಕೊರತೆ, ನಿದ್ರೆಯ ಕೊರತೆ ಮತ್ತೀತರ ಕಾರಣಗಳಿಂದಾಗಿ ಹೃದಯದ ಮೇಲಾಗುವ ಪರಿಣಾಮವು ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 1 =
Remember me
