ಕೋಟಾ:ವೈದ್ಯಕೀಯ ಶಿಕ್ಷಣ ಆಕಾಂಕ್ಷಿಯೊಬ್ಬ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ(NEET) ಕಡಿಮೆ ಅಂಕ ಗಳಿಸಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರದ ಕೋಟಾದಲ್ಲಿ ನಡೆದಿದೆ.ರೋಷನ್(21) ಮೂಲತಃ ಸಮಸ್ತಿಪುರ್ ಜಿಲ್ಲೆಯ ನಿವಾಸಿಯಾಗಿದ್ದು, ಇತ್ತೀಚಿಗೆ ಪ್ರಕಟವಾದ ನೀಟ್ ಪರೀಕ್ಷಾ​ ಫಲಿತಾಂಶದಲ್ಲಿ ಕಡಿಮೆ ಅಂಕ ಗಳಿಸಿದ್ದ. ಆತನ ಸಹೋದರ ಸುಮನ್ ಕೂಡ ಕೋಟಾದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದು, ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು.ಇದನ್ನೂ ಓದಿ:ಪ್ರಧಾನಿ ಮೋದಿ ಮಾದರಿಯಲ್ಲೇ ಸಿಎಂ ಸಿದ್ದರಾಮಯ್ಯಗೂ ಸೆಂಗೋಲ್ ಪ್ರದಾನ; ರಾಜದಂಡದ ಮೇಲೆ ಪೆರಿಯಾರ್ ಭಾವಚಿತ್ರ…ರೋಷನ್ ದೆಹಲಿಯಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಹೋಗಿ ಗುರುವಾರ ಬೆಳಿಗ್ಗೆ ಕೋಟಾಗೆ ವಾಪಾಸ್ಸಾಗಿದ್ದ. ಆದರೆ ಶನಿವಾರ ಆತನ ಪೋಷಕರು ಕರೆ ಮಾಡಿದಾಗ, ರೋಷನ್ ಪ್ರತಿಕ್ರಿಯಿ ನೀಡಿರಲಿಲ್ಲ. ಆಗ ಸುಮನ್​ಗೆ ರೋಷನ್ ಪಿಜಿಗೆ ಹೋಗಿ ಪರೀಕ್ಷಿಸಲು ತಂದೆತಾಯಿ ಹೇಳಿದ್ದರು.ಸುಮನ್​ ರೋಷನ್​ನನ್ನು ನೋಡಲು ಹೋದಾಗ ಆತ ತನ್ನ ಕೋಣೆಯಲ್ಲಿ ಫ್ಯಾನ್‌ಗೆ ತನ್ನ ಸಹೋದರನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಕೂಡಲೇ ಪೊಲೀಸರಿಗ ಮಾಹಿತಿ ತಲುಪಿಸಿದ್ದಾನೆ. ಇನ್ನು, ಈ ಘಟನೆಯ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 12 =
Remember me
